ತುಮಕೂರು (ಮಾ.09):  ಐಎಎಸ್‌ ಅಧಿಕಾರಿ ದಿವಂಗತ ಡಿ.ಕೆ.ರವಿ ಯವರ ತಂದೆ ಕರಿಯಪ್ಪ (75) ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

ತಮ್ಮ ಸ್ವಗ್ರಾಮ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಜೆ ಎಂದಿನಂತೆ ಮನೆ ಮುಂದೆ ಕುಳಿತಿದ್ದ ಸಂಧರ್ಭದಲ್ಲಿ ಇದ್ದಕ್ಕಿದ್ದಂತೆ ಕರಿಯಪ್ಪ ಕುಸಿದು ಬಿದ್ದರು. ಕೂಡಲೇ ಗ್ರಾಮಸ್ಥರು ಕುಣಿಗಲ್‌ ನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಕರಿಯಪ್ಪ ಮೃತಪಟ್ಟರು.

ಡಿ.ಕೆ. ರವಿ ಸಾವಿನ ನಂತರ ದೂರವಾಗಿದ್ದ ಅತ್ತೆ-ಸೊಸೆ ಒಂದಾಗಿದ್ದೇಗೆ..? ..

ಮೃತ ಕರಿಯಪ್ಪನವರು ಪತ್ನಿ ಗೌರಮ್ಮ, ಪುತ್ರರಾದ ಡಿ.ಕೆ.ರವಿ ಮತ್ತು ರಮೇಶ್‌ ರವರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತ ಕರಿಯಪ್ಪನವರ ಅಂತ್ಯ ಸಂಸ್ಕಾರವನ್ನು ಇಂದು ಅವರ ಸ್ವಗ್ರಾಮ ದೊಡ್ಡಕೊಪ್ಪಲಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶಾಸಕ ಡಾ.ಹೆಚ್‌.ಡಿ.ರಂಗನಾಥ್‌, ಮಾಜಿ ಸಚಿವ ಡಿ.ನಾಗರಾಜಯ್ಯ, ಪಿ ಎಲ್‌ ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌, ಬಿಜೆಪಿ ಮುಖಂಡ ಹೆಚ್‌.ಡಿ.ರಾಜೇಶ್‌ ಗೌಡ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.