ಶಿವಮೊಗ್ಗ (ಜು.13): ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಬೇಕು. ಬಾಕಿ ಇರುವ ಗೌರವಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ
ಅಂಗನವಾಡಿ ಸಹಾಯಕಿಯರ ಸಂಘ (ಸಿಐಟಿಯು)ದ ಜಿಲ್ಲಾ ಘಟಕದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಕ್ಕಳ ಸರ್ವತೋಮುಖ ಬೆಳವಣಿಗೆ ದಷ್ಟಿಯಿಂದ ಅಂಗವಾಡಿ ಕೇಂದ್ರ ಆರಂಭಿಸಲಾಗಿದೆ. ರಾಜ್ಯದಲ್ಲಿ ಒಟ್ಟು 62,580 ಅಂಗನವಾಡಿ ಕೇಂದ್ರ, 3331 ಮಿನಿ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಕೇಂದ್ರಗಳಲ್ಲಿ ಲಕ್ಷಾಂತರ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಸೇರಿ 51.04 ಲಕ್ಷ ಫಲಾನುಭವಿಗಳಾಗಿದ್ದಾರೆ. ಇಂತಹ ಯೋಜನೆಯನ್ನು ಸಬಲೀಕರಣಗೊಳಿಸುವ ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿರುವುದು ಸರಿಯಲ್ಲ ಎಂದರು.

ಬೇಡಿಕೆಗಳು:

ಅಂಗನವಾಡಿ ನೌಕರರಿಗೆ ಪಿಂಚಣಿ ಸೌಲಭ್ಯ ಕೊಡಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಕೊಡುವ ಎನ್‌ಪಿಎಸ್ ಮಾನದಂಡ ಅನುಸರಿಸಬೇಕು, ನಿವೃತ್ತರಾದ
ಕಾರ್ಯಕರ್ತೆಯರು-ಸಹಾಯಕರಿಗೆ ಇಡುಗಂಟು ತಕ್ಷಣ ಬಿಡುಗಡೆ ಮಾಡಬೇಕು. ನಿವೃತ್ತರಿಗೆ ಕನಿಷ್ಠ 3 ಸಾವಿರ ರು. ಪಿಂಚಣಿ ನೀಡಬೇಕು, ಸೇವಾ ಜೇಷ್ಠತೆ ಆಧಾರದಲ್ಲಿ
ಕನಿಷ್ಠ ವೇತನ ಜಾರಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ತಕ್ಷಣವೆ ಈಡೇರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಶಿವಶಂಕರ್, ಅಂಗನವಾಡಿ ಸಹಾಯಕಿಯರ ಸಂಘದ ಪ್ರಮುಖರಾದ ತುಳಸಿ ಪ್ರಭ, ಜಯಲಕ್ಷ್ಮೀ, ಆರ್.ಮಂಜುಳಾ, ಶೈಲ
ಉಪಸ್ಥಿತರಿದ್ದರು.

ಅಂಗನವಾಡಿಗೆ ಮಗು ದಾಖಲಿಸಿದ ಕರ್ನಾಟಕ ಮೂಲದ ಐಎಎಸ್‌ ಅಧಿಕಾರಿ