ಅಂಗನವಾಡಿಗೆ ಮಗು ದಾಖಲಿಸಿದ ಕರ್ನಾಟಕ ಮೂಲದ ಐಎಎಸ್‌ ಅಧಿಕಾರಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Jan 2019, 5:45 PM IST
Karnataka Origin Tirunelveli Collector sets precedent by sending daughter to Anganwadi
Highlights

ಕಳೆದ ನವೆಂಬರ್‌ನಲ್ಲಿ ಡೆಹ್ರಾಡೂನ್ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮಗುವನ್ನು ಅಂಗನವಾಡಿಗೆ ಸೇರಿಸಿದ್ದರು. ಈಗ ಅದೆ ರೀತಿಯಲ್ಲಿ ಮತ್ತೊಂದು ಜಿಲ್ಲಾಧಿಕಾರಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ತಿರುವನೆಲ್ಲಿ[ಜ.09]  ಗ್ರಾಮೀಣ ಭಾಗದ ಬಡಜನರು ತಮ್ಮ ಮಕ್ಕಳನ್ನು ನಗರದ  ಅತ್ಯಾಧುನಿಕ ಶಾಲೆಗೆ ಸೇರಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಆದರೆ ಇಲ್ಲೊಬ್ಬರು ಜಿಲ್ಲಾಧಿಕಾರಿ ತಮ್ಮ ಮಗುವನ್ನು ಅಂಗನವಾಡಿಗೆ  ಸೇರಿಸಿ ಸರಳತೆ ಮೆರೆದಿದ್ದಾರೆ.

ತಮಿಳುನಾಡಿನ ತಿರುವನೆಲ್ಲಿ ಜಿಲ್ಲಾಧಿಕಾರಿ ಕರ್ನಾಟಕ ಮೂಲದ ಶಿಲ್ಪಾ ಪ್ರಭಾಕರ್ ಸತೀಶ್ ತಮ್ಮ ಮಗಳನ್ನು ಪಲಾಯಕಮೊಟ್ಟಿಯಲ್ಲಿರುವ ಅಂಗನವಾಡಿಗೆ ಸೇರಿಸಿದ್ದಾರೆ. ಅಂಗನವಾಡಿಗೆ ಸೇರಿಸಿದ ಮೇಲೆ ತಮ್ಮ ಮಗಳ ತಮಿಳು ಸುಧಾರಿಸಿದೆ, ಸಮಾಜದ ಎಲ್ಲಾ ರೀತಿಯ ಜನಗಳ ಜೊತೆ ನನ್ನ ಮಗಳು ಸೇರಬೇಕು, ಅವರ ಜೊತೆ ಸೇರಿ ಕಲಿಯಬೇಕು, ಹೀಗಾಗಿ ನರ್ಸರಿ ಶಾಲೆ ಬದಲು ಅಂಗನವಾಡಿಗೆ ಸೇರಿಸಿದ್ದೇನೆ ಎಂದು ಶಿಲ್ಪಾ ಹೇಳುತ್ತಾರೆ.

ಎಲ್ಲರೊಳಗೊಬ್ಬನಾಗಿ ಎಲ್ಲರಂತಾಗು: ಅಂಗನವಾಡಿಗೆ ಜಿಲ್ಲಾಧಿಕಾರಿ ಮಗು!

ಅಂಗನವಾಡಿ ಕೇಂದ್ರಗಳು  ಬದಲಾಗಿವೆ. ಮಕ್ಕಳಿಗೆ ಸಕಲ ಪೌಷ್ಟಿಕ ಆಹಾರ ನೀಡುತ್ತಿವೆ. ಮಕ್ಕಳ ಸವರ್ತೋಮುಖ ಬೆಳವಣಿಗೆಗೆ ಕಾರಣವಾಗುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

loader