ಬಿಜೆಪಿ ಸೋಲಿಸುವುದರ ಕುರಿತು ಸಮಾ​ಲೋ​ಚನೆ: ಎಸ್‌.​ಆ​ರ್‌. ​ಹಿ​ರೇ​ಮಠ

ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ಆಡ​ಳಿ​ತ​ದಿಂದ ದೇಶ​ದಲ್ಲಿ ಅಸ​ಮಾ​ನ​ತೆ, ​ಭ್ರ​ಷ್ಟಾ​ಚಾ​ರ, ​ಬೆಲೆ ಏರಿಕೆ ಮಿತಿ​ಮೀ​ರಿದೆ. ಅದನ್ನು ನಿಯಂತ್ರಿ​ಸು​ವಲ್ಲಿ ಕೇಂದ್ರ ಸರ್ಕಾ​ರವು ಸಂಪೂರ್ಣ ವಿಫ​ಲ​ವಾ​ಗಿ​ದೆ: ಸಿ​ಎ​ಫ್‌​ಡಿ ಅಧ್ಯಕ್ಷ ಎಸ್‌.​ಆ​ರ್‌. ​ಹಿ​ರೇ​ಮಠ

Discussion on defeating BJP Sats CFD President SR Hiremath grg

ರಾಯ​ಚೂರು(ಆ.01):  ಮುಂಬ​ರುವ ಲೋಕ​ಸಭಾ ಹಾಗೂ ದೇಶದ ವಿವಿಧ ರಾಜ್ಯ​ಗ​ಳಲ್ಲಿ ವಿಧಾ​ನ​ಸಭೆ ಚುನಾ​ವ​ಣೆ​ಗ​ಳಲ್ಲಿ ಕೋಮು​ವಾ​ದಿ, ​ಪ್ರ​ಜಾ​ಪ್ರ​ಭುತ್ವ ವಿರೋಧಿ ಬಿಜೆ​ಪಿ ಸೋಲಿ​ಸುವ ನಿಟ್ಟಿ​ನಲ್ಲಿ ಕೈಗೊ​ಳ್ಳ​ಬೇ​ಕಾದ ಕಾರ್ಯ​ಕ್ರ​ಮ​ಗಳ ಬಗ್ಗೆ ಸಮಾ​ಲೋ​ಚನೆ ನಡೆ​ಸಲು ಸೆ.23ರಿಂದ 25ರ ವರೆಗೆ ಬೆಂಗ​ಳೂ​ರಿನ ಗಾಂಧಿ​ ಭ​ವ​ನ​ದಲ್ಲಿ ಅಖಿಲ ಭಾರತ ಅನು​ಭವ ಮಂಟ​ಪ​ವನ್ನು ಆಯೋ​ಜಿ​ಸ​ಲಾ​ಗಿದೆ ಎಂದು ಸಿಟಿ​ಜನ್ಸ್‌ ಫಾರ್‌ ಡೆಮಾ​ಕ್ರಸಿ (ಸಿ​ಎ​ಫ್‌​ಡಿ​)ಯ ಅಧ್ಯಕ್ಷ ಎಸ್‌.​ಆ​ರ್‌. ​ಹಿ​ರೇ​ಮಠ ತಿಳಿ​ಸಿ​ದರು.

ಈ ಸಂಬಂಧ ಸೋಮ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ಆಡ​ಳಿ​ತ​ದಿಂದ ದೇಶ​ದಲ್ಲಿ ಅಸ​ಮಾ​ನ​ತೆ, ​ಭ್ರ​ಷ್ಟಾ​ಚಾ​ರ, ​ಬೆಲೆ ಏರಿಕೆ ಮಿತಿ​ಮೀ​ರಿದೆ. ಅದನ್ನು ನಿಯಂತ್ರಿ​ಸು​ವಲ್ಲಿ ಕೇಂದ್ರ ಸರ್ಕಾ​ರವು ಸಂಪೂರ್ಣ ವಿಫ​ಲ​ವಾ​ಗಿ​ದೆ ಎಂದು ದೂರಿ​ದ​ರು.

ರಾಯಚೂರು: ಜಿಟಿಜಿಟಿ ಮಳೆಗೆ ಸೋರುತ್ತಿವೆ ಸರ್ಕಾರಿ ‌ಶಾಲೆಗಳು..!

ದೇಶ ಸಂವಿ​ಧಾ​ನದ ಮೌಲ್ಯ​ಗ​ಳನ್ನು ಗಾಳಿಗೆ ತೂರಿ, ಸಮಾ​ಜ​ದಲ್ಲಿ ಕೋಮು ಕಿಚ್ಚನ್ನು ಹಚ್ಚಿ, ಅಶಾಂತಿಯ ವಾತಾ​ವ​ರಣ ಸೃಷ್ಟಿಸಿ​ದ್ದ ಬಿಜೆ​ಪಿ​ಯ ದುರಾ​ಡ​ಳಿ​ತ​ವನ್ನು ರಾಜ್ಯದ ಜನರು ಕೊನೆ​ಗಾ​ಣಿ​ಸಿ​ದ್ದಾರೆ. ಅದೇ ಪ್ರೇರ​ಣೆ​ಯಿಂದ ಲೋಕ​ಸಭಾ ಹಾಗೂ ವಿವಿಧ ರಾಜ್ಯ​ಗ​ಳಲ್ಲಿ ಚುನಾ​ವ​ಣೆ​ಗ​ಳ​ಲ್ಲಿಯೂ ಸಹ ಬಿಜೆ​ಪಿ​ ಹಾಗೂ ಸಂಘ​ ಪ​ರಿ​ವಾ​ರ​ದ​ವ​ರನ್ನು ಸೋಲಿ​ಸುವ ನಿಟ್ಟಿ​ನಲ್ಲಿ ಸಮಾ​ನ ​ಮ​ನ​ಸ್ಕರು ಒಗ್ಗೂಡಿ ರೂಪಿ​ಸ​ಬೇ​ಕಾ​ದಂತಹ ಜನ​ಜಾ​ಗೃತಿ, ಆಂದೋ​ಲ​ನ​ಗಳ ಬಗ್ಗೆ ಮೂರು ದಿನ​ಗಳ ಅನು​ಭವ ಮಂಟ​ಪ​ದಲ್ಲಿ ಕೂಲಂಕು​ಷ​ವಾಗಿ ಚರ್ಚಿ​ಸ​ಲಾ​ಗು​ವುದು ಎಂದರು.

ರೈತ ವಿರೋಧಿ ಮೂರು ಕೃಷಿ ಕಾಯ್ದೆ​ಗಳ ರದ್ದ​ತಿ​ಗಾಗಿ ಇಡೀ ದೇಶ​ದಾ​ದ್ಯಂತ ನಡೆದ ಐತಿ​ಹಾ​ಸಿಕ ಹೋರಾ​ಟಕ್ಕೆ ಮಣಿದು ಕೇಂದ್ರ ಕಾಯ್ದೆ​ಗ​ಳನ್ನು ವಾಪಸ್‌ ಪಡೆ​ದಿದೆ. ಇದೀಗ ರಾಜ್ಯ​ದಲ್ಲಿ ಆಡ​ಳಿತ ನಡೆ​ಸು​ತ್ತಿ​ರುವ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಮೂರು ಕಾಯ್ದೆಗಳನ್ನು ಹಿಂಪಡೆದು ಬದ್ಧತೆ ಪ್ರದರ್ಶಿಸಬೇಕು ಎಂದು ಆಗ್ರ​ಹಿ​ಸಿ​ದ​ರು.

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ್‌ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿದೆ. ಆದರೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದಿಲ್ಲ. ಈಗಾಗಲೇ ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ರೈತರು, ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ರೈತ ರಹಿತ ಕಾಯುವ ಕಾಯ್ದೆ ರೂಪಿಸಬೇಕು, ರೈತರನ್ನು ಬೀದಿಗೆ ತಳ್ಳುವ ಕಾಯ್ದೆ​ಗ​ಳನ್ನು ಸುತಾರಾಮ್‌ ಅಂಗೀ​ಕ​ರಿ​ಸ​ಕೂ​ಡದು ಎಂದು ಒತ್ತಾ​ಯಿ​ಸಿ​ದರು.

ರಾಯಚೂರು: ಗೃಹಲಕ್ಷ್ಮಿ ಅರ್ಜಿ ಹಾಕಲು ಬಡವರಿಂದ ಹಣ ವಸೂಲಿ, ಒಂದೊಂದು ಕೇಂದ್ರದಲ್ಲಿ ಒಂದೊಂದು ರೇಟ್..!

ಜನಾಂದೋಲಗಳ ಮಹಾ ಮೈತ್ರಿ ಸಂಘಟನೆ ಸಂಚಾಲಕ ರಾಘವೇಂದ್ರ ಕುಷ್ಟಗಿ ಮಾತನಾಡಿ, ಆರ್‌ಎಸ್‌ಎಸ್‌ ಸಹ ಸಂಘಟನೆಯಾಗಿರುವ ಬಿಜೆಪಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹುನ್ನಾರ ಹೂಡಿದೆ. 2025ಕ್ಕೆ ಆರ್‌ಎಸ್‌ಎಸ್‌ ಜನ್ಮ ತಾಳಿ ನೂರು ವರ್ಷಗಳು ಕಳೆಯಲಿದೆ. ಈಗಾಗಲೇ ಸಂಘಟನೆಗಳು ಹಿಂದು ರಾಷ್ಟ್ರ ನಿರ್ಮಾಣ ಸಂಕಲ್ಪ ಮಾಡಿವೆ. ಹಿಂದು ಧರ್ಮವೇ ಅಲ್ಲ, ಆದರೂ ಭಾವನೆಗಳನ್ನು ಕೆರಳಿಸುವ ಕೆಲಸ ನಡೆಯುತ್ತಿರುವುದನ್ನು ತಡೆಯಬೇಕಿದೆ. ಹಿಂದು ಮತ್ತು ಮುಸ್ಲಿಂರಲ್ಲಿ ಭಾರತ ಪಾಕಿಸ್ತಾನ ಎಂದು ಸಮಾಜವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಬರುವ ಎಂಪಿ ಎಲೆ​ಕ್ಷ​ನ್‌​ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನಿರಂಕುಶ ಪ್ರಭುತ್ವ ರೂಪು​ಗೊ​ಳ್ಳ​ಲಿದೆ ಎಂದು ಆತಂಕ ವ್ಯಕ್ತ​ಪ​ಡಿ​ಸಿ​ದ​ರು.

ದೇಶ​ದ​ಲ್ಲಿ ಪ್ರತಿಗಾಮಿ ಸಾಂಸ್ಕೃತಿಕ ರಾಜಕೀಯ ಚಳವಳಿ ರೂಪಿಸುವ ಜರೂರಿ ಒದ​ಗಿ​ ಬಂದಿದ್ದು, ಅದ​ಕ್ಕಾಗಿ ಎಲ್ಲ ಸಂಘಟನೆಗಳು ಒಗ್ಗೂಡಿ ಮುಂದಿನ ಹೋರಾಟ, ಸಾಂಸ್ಕೃತಿಕ ಅಪಾಯದಿಂದ ಪಾರಾ​ಗ​ಬೇ​ಕಿದೆ. ಈ ಹಿನ್ನೆ​ಲೆ​ಯಲ್ಲಿ ಬೆಂಗಳೂರಿನಲ್ಲಿ ​ಮೂರು ದಿನ​ಗ​ಳ​ಕಾಲ ಅಖಿಲ ಭಾರತ ಅನು​ಭವ ಮಂಟ​ಪ​ ಕಾರ್ಯ​ಕ್ರ​ಮ​ವನ್ನು ಹಮ್ಮಿ​ಕೊಂಡಿದ್ದು, ನ್ಯಾಯಮೂರ್ತಿ ನಾಗಮೋಹನ ದಾಸ್‌ ಅವರು ಇದನ್ನು ಉದ್ಘಾಟಿಸಲಿದ್ದಾರೆ. ರಾಜೇಂದ್ರ ಚೆನ್ನಿ ದಿಕ್ಕೂಚಿ ಭಾಷಣಮಾಡಲಿದ್ದು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ವಿವಿಧ ಸಂಘಟನೆಗಳ ಜಂಟಿ ಸಭೆಗಳು ನಡೆ​ಯ​ಲಿದ್ದು, 20 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ವಿವ​ರಿ​ಸಿ​ದರು. ಪತ್ರಿ​ಕಾ​ಗೋ​ಷ್ಠಿ​ಯಲ್ಲಿ ಸಂಘ​ಟನೆ ಮುಖಂಡ​ರಾದ ಜಾನ್‌ ವೆಸ್ಲಿ ಖಾತ​ರಕಿ, ವೇಣು​ಗೋ​ಪಾಲ ಭಟ್‌, ಖಲಿ​ಲುಲ್ಲಾ ಸೇರಿ ಇತ​ರರು ಇದ್ದರು.

Latest Videos
Follow Us:
Download App:
  • android
  • ios