ಬೆಂಗಳೂರು (ಫೆ.02):  ಮಾಜಿ ಮುಖ್ಯ​ಮಂತ್ರಿ ದಿವಂಗತ ಧ​ರಂಸಿಂಗ್‌ ಅವರ ದೂರದ ಸಂಬಂಧಿ ಸಿದ್ಧಾರ್ಥ ದೇವೇಂದ​ರ್‌ ಸಿಂಗ್‌ (28) ಎಂಬ​ವ​ರ​ನ್ನು ಹತ್ಯೆ​ಗೈದ ಆರೋ​ಪಿ​ಯನ್ನು ಅಮೃ​ತ​ಹಳ್ಳಿ ಪೊಲೀ​ಸರು ಬಂಧಿ​ಸಿ​ದ್ದಾ​ರೆ.

ಆಂಧ್ರ​ಪ್ರ​ದೇಶ ಮೂಲದ ವಿನೋ​ದ್‌​(34) ಎಂಬಾ​ತ​ನನ್ನು ಬಂಧಿ​ಸ​ಲಾ​ಗಿದೆ. ಪ್ರಮುಖ ಆರೋ​ಪಿ​ಗಾಗಿ ಆಂಧ್ರ​ಪ್ರ​ದೇ​ಶ​ದಲ್ಲಿ ಹುಡು​ಕಾಟ ನಡೆ​ಯು​ತ್ತಿದೆ ಎಂದು ಪೊಲೀ​ಸರು ಹೇಳಿ​ದ​ರು. ಯಾವ ಕಾರ​ಣಕ್ಕೆ ಹತ್ಯೆ​ಗೈ​ಯ​ಲಾ​ಗಿದೆ ಎಂಬುದು ಪ್ರಮುಖ ಆರೋ​ಪಿಯ ಬಂಧ​ನದ ಬಳಿಕ ಪತ್ತೆ​ಯಾ​ಗ​ಬೇ​ಕಿದೆ. ಪ್ರಾಥ​ಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಹಾಗೂ ಉದ್ಯಮ ವಿಚಾ​ರ​ದಲ್ಲಿ ಕೊಲೆ​ಯಾ​ಗಿದೆ ಎಂದು ಹೇಳ​ಲಾ​ಗಿದೆ. ಸಿದ್ಧಾರ್ಥ ದೇವೇಂದರ್‌ ಸಿಂಗ್‌ ಹತ್ಯೆಗೆ ಸುಪಾರಿ ಕೊಡ​ಲಾ​ಗಿದೆ ಎಂಬ ಅನು​ಮಾ​ನ​ಗಳು ಮೂಡಿವೆ. ಪ್ರಕ​ರ​ಣದ ಮಾಸ್ಟರ್‌ ಮೈಂಡ್‌ ಸುಪಾರಿ ಹಂತಕ ಎಂದು ಹೇಳ​ಲಾ​ಗು​ತ್ತಿದೆ. ಈ ಬಗ್ಗೆ ತನಿಖೆ ನಡೆ​ಯು​ತ್ತಿದೆ. ಈ ಮಧ್ಯೆ ಈಗಾ​ಗಲೇ ಬಂಧ​ನ​ಕ್ಕೊ​ಳ​ಗಾ​ಗಿ​ರುವ ಆರೋಪಿ ವಿನೋದ್‌ ಆತ್ಮ​ಹತ್ಯೆ ಯತ್ನಿ​ಸಿದ್ದ ಎಂದು ಮೂಲ​ಗಳು ತಿಳಿ​ಸಿ​ವೆ.

ಯೋಗೇಶ್‌ ಗೌಡ ಹತ್ಯೆ: ವಿನಯ್‌ ಕುಲಕರ್ಣಿಗೆ ಸುಪ್ರೀಂನಲ್ಲೂ ಬೇಲ್ ಸಿಗೋದು ಡೌಟ್..! ...

ರೈಲಿಗೆ ತಲೆ​ಕೊ​ಡಲು ಯತ್ನ :  ಜ.19ರಂದು ಮನೆ​ಯಿಂದ ಹೊರಟ ಸಿದ್ಧಾರ್ಥ ದೇವೇಂದರ್‌ ಸಿಂಗ್‌ ಅವ​ರನ್ನು ನೆಲ್ಲೂರು ಅರಣ್ಯ ಪ್ರದೇ​ಶ​ದಲ್ಲಿ ಹತ್ಯೆ​ಗೈದು ಹೂತು ಹಾಕಿದ್ದ ವಿಚಾರ ತಿಳಿ​ಯು​ತ್ತಿ​ದ್ದಂತೆ ಪೊಲೀ​ಸರು ಕಾರ್ಯಾ​ಚ​ರ​ಣೆ​ಗಿ​ಳಿ​ಸಿ​ದ್ದರು. ಅಲ್ಲದೆ, ಆರೋಪಿ ವಿನೋದ್‌ ಬಂಧ​ನಕ್ಕೂ ಮುಂದಾ​ಗಿ​ದ್ದರು. ತನ್ನನ್ನು ಪೊಲೀ​ಸರು ಬಂಧಿ​ಸ​ಲಿ​ದ್ದಾರೆ ಎಂದು ಆತಂಕ​ಗೊಂಡ ಆರೋಪಿ, ಭಯ​ದಿಂದ ರೈಲಿಗೆ ಸಿಲುಕಿ ಆತ್ಮ​ಹ​ತ್ಯೆಗೆ ಯತ್ನಿ​ಸಿದ್ದ. ಈ ವಿಚಾರ ತಿಳಿದ ಪೊಲೀ​ಸ​ರು ಕ್ಷಿಪ್ರ ಕಾರ್ಯಾ​ಚ​ರಣೆ ನಡೆ​ಸಿ ಆತ​ನನ್ನು ರಕ್ಷಿ​ಸು​ವಲ್ಲಿ ಯಶ​ಸ್ವಿ​ಯಾ​ಗಿ​ದ್ದಾರೆ. ಈ ವೇಳೆ ಆರೋ​ಪಿ ಮುಖ ಮತ್ತು ಕೈ, ಕಾಲು​ಗ​ಳಿಗೆ ಗಾಯ​ಗ​ಳಾ​ಗಿದ್ದು, ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ದು​ಕೊಂಡು ಚೇತ​ರಿ​ಸಿ​ಕೊಂಡಿ​ದ್ದಾನೆ. ಇನ್ನು ಆಂಧ್ರ​ಪ್ರ​ದೇ​ಶಕ್ಕೆ ತೆರ​ಳಿ​ರುವ ಅಮೃ​ತ​ಹ​ಳ್ಳಿ ಪೊಲೀ​ಸರ ವಿಶೇಷ ಅಲ್ಲಿಯೇ ಬೀಡು​ಬಿ​ಟ್ಟಿದ್ದು, ಪ್ರಮುಖ ಆರೋ​ಪಿಯ ಬಂಧ​ನಕ್ಕೆ ಶೋಧ ನಡೆ​ಸು​ತ್ತಿದೆ ಎಂದು ಮೂಲ​ಗಳು ತಿಳಿ​ಸಿ​ವೆ.

ಮಾಜಿ ಸಿಎಂ ಧರಂಸಿಂಗ್‌ ಸಂಬಂಧಿಯ ಅಪಹರಿಸಿ ಹತ್ಯೆ .

ಸಿದ್ಧಾರ್ಥ ಸ್ವಂತ ಉದ್ಯಮ ನಡೆ​ಸು​ತ್ತಿದ್ದು, ಅಮೃ​ತ​ಹ​ಳ್ಳಿ​ಯ ದಾಸ​ರ​ಹ​ಳ್ಳಿ​ಯ​ಲ್ಲಿ​ರುವ ಅಪಾ​ರ್ಟ್‌​ಮೆಂಟ್‌​ನಲ್ಲಿ ಒಬ್ಬರೆ ವಾಸ​ವಾ​ಗಿ​ದ್ದರು. ಜ.19ರಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ತನ್ನ ತಂದೆಗೆ ವಾಟ್ಸ್‌​ಆ್ಯಪ್‌ ಮೂಲಕ ‘ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಕ್ಕೆ ಹೋಗುತ್ತಿರುವುದಾಗಿ’ ತಿಳಿಸಿದ್ದರು. ಆದರೆ, ಅಮೆ​ರಿಕಕ್ಕೂ ಹೋಗದೆ, ವಾಪಸ್‌ ಮನೆಗೂ ಬಂದಿರಲಿಲ್ಲ. ಅನು​ಮಾ​ನ​ಗೊಂಡು ಆತ​ನಿಗೆ ಕರೆ ಮಾಡಿದಾಗ ಫೋನ್‌ ಸ್ವಿಚ್ ಆಫ್‌ ಆಗಿತ್ತು. ಹೀ​ಗಾಗಿ ಆತ ನಾಪತ್ತೆ ಆಗಿರುವುದಾಗಿ ​ದೇ​ವೇಂದರ್‌ ಅಮೃತ್‌ಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.