ಪ್ರತಿಯೊಬ್ಬರಲ್ಲೂ ಕಾನೂನಿನ ಅರಿವಿದ್ದಾಗ ದೇಶದ ಅಭಿವೃದ್ಧಿ ಸಾಧ್ಯ: ನ್ಯಾಯಾಧೀಶ ಬಸವರಾಜ
ಪ್ರತಿಯೊಬ್ಬರಲ್ಲೂ ಕಾನೂನಿನ ಅರಿವಿದ್ದಾಗ ಸಮಾಜ, ದೇಶ ಅಭಿವೃದ್ಧಿ ಹಾಗೂ ಪ್ರಗತಿ ಸಾಧಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು.
ಗುಂಡ್ಲುಪೇಟೆ (ನ.07): ಪ್ರತಿಯೊಬ್ಬರಲ್ಲೂ ಕಾನೂನಿನ ಅರಿವಿದ್ದಾಗ ಸಮಾಜ, ದೇಶ ಅಭಿವೃದ್ಧಿ ಹಾಗೂ ಪ್ರಗತಿ ಸಾಧಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು. ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತಾಲೂಕು ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಮಗೂ ಹಕ್ಕಿದೆ. 75ನಾಗರಿಕರ ಸಬಲೀಕರಣಕ್ಕಾಗಿ ಮೆಗಾ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೇಶದ ಬಡವರು, ಮಹಿಳೆಯರು, ಮಕ್ಕಳಿಗೆ ಬೇಧ ಭಾವವಿಲ್ಲದೆ ಕಾನೂನು ಅರಿವಿನ ಮೂಲಕ ಸಬಲೀಕರಣಕ್ಕೋಸ್ಕರ ರಾಷ್ಟ್ರೀಯ, ರಾಜ್ಯ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ರಮುಖ ಉದ್ದೇಶ ಎಂದರು. ಶ್ರೀಮಂತ, ಬಡವ, ವಿದ್ಯಾವಂತ, ಅವಿದ್ಯಾವಂತರಿಗೂ ಸಮಾನ ಕಾನೂನಿನ ಅರಿವು ಇರಬೇಕು ಎಂದು ಕಾನೂನು ಸೇವೆಗಳ ಪ್ರಾಧಿಕಾರ, ಸಮಿತಿ ದೇಶದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ಕಾನೂನು ಅರಿವು ಮೂಡಿಸಲಾಗುತ್ತಿದೆ ಎಂದರು. ನಮಗೂ ಹಕ್ಕಿದೆ 75 ನಾಗರಿಕರ ಸಬಲೀಕರಣಕ್ಕಾಗಿ ಮೆಗಾ ಕಾನೂನು ಅರಿವು ಕಾರ್ಯಕ್ರಮ ಕಳೆದ ಅ.31 ರಿಂದ ನ.13 ರ ತನಕ ಹಳ್ಳಿಗಳಲ್ಲಿ ಕಾನೂನು ಅರಿವು ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಕಾನೂನು ಅರಿವು ಜನರಿಗೆ ಬಂದರೆ ದೇಶದ ಪ್ರಗತಿಗೆ ನಾಂದಿಯಾಗಲಿದೆ ಎಂದರು.
Chamarajanagar: ಗೋಪಾಲಸ್ವಾಮಿ ದೇಗುಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮತಿ
ಸಾರ್ವಜನಿಕರ ಆಸ್ತಿ ಉಳಿಸಲು ಸಾರ್ವಜನಿಕರು ಮುಂದೆ ಬರಬೇಕು. ಸಾರ್ವಜನಿಕ ಆಸ್ತಿ ಬಲಾಡ್ಯರ ಕಬಳಿಸಿದ್ದರೆ ಸಾರ್ವಜನಿಕರು ತಾಲೂಕು ಕಾನೂನು ಸೇವೆಗಳ ಸಮಿತಿ ಗಮನಕ್ಕೆ ತಂದರೆ ಉಚಿತವಾಗಿ ಪ್ರಕರಣ ದಾಖಲಾಗಲಿದೆ ಎಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿ. ಶ್ರೀಕಂಠರಾಜೇ ಅರಸ್ ಮಾತನಾಡಿದರು. ತಹಸೀಲ್ದಾರ್ ಸಿ.ಜಿ.ರವಿಶಂಕರ್ ಮಾತನಾಡಿ, ಹಿಂದೆ ಹಣ ಇದ್ದವರಿಗೆ ಕಾನೂನು ಎನ್ನುತ್ತಿದ್ದರು. ಇದೀಗ ಸಾರ್ವಜನಿಕರು ಕೂಡ ಕಾಸಿಲ್ಲದೆ ಕಾನೂನು ಸೇವೆಗಳ ಪ್ರಾಧಿಕಾರ/ಸಮಿತಿ ಮೂಲಕ ಪ್ರಕರಣ ನಡೆಸಬಹುದು ಎಂದರು.
ಹಿಂದುಳಿದವರು, ಬಡವರು, ಮಹಿಳೆಯರು, ಮಕ್ಕಳು ಕೂಡ ಈ ನೆಲದ ಕಾನೂನು ಅರಿಯಬೇಕು. ಕಾನೂನು ಅರಿತರೆ ಬಹಳಷ್ಟುಸಮಸ್ಯೆಗೆ ಬಗೆಹರಿಸಿಕೊಳ್ಳಬಹುದಾಗಿದ್ದು, ತಾಲೂಕಿನ ಜನರು ಕಾನೂನು ಅರಿವು ಶಿಬಿರಗಳಲ್ಲಿ ಭಾಗವಹಿಸಿ ಎಂದರು. ಸಮಾರಂಭದಲ್ಲಿ ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಕಾಂತಮ್ಮ, ಪುರಸಭೆ ಮುಖ್ಯಾಧಿಕಾರಿ ಆರ್.ಹೇಮಂತರಾಜು, ಕಾರ್ಮಿಕ ನಿರೀಕ್ಷಕ ನಾರಾಯಣ ಮೂರ್ತಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ರಾಜು, ಕೃಷಿ ಸಹಾಯಕ ನಿರ್ದೇಶಕ ಪ್ರವೀಣ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಸೇರಿದಂತೆ ಕಾರ್ಮಿಕರು ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು. ಕಾನೂನು ಅರಿವು ಶಿಬಿರದಲ್ಲಿ ಕಾರ್ಮಿಕ ಇಲಾಖೆ ನೀಡುವ ಕಾರ್ಮಿಕರ ಕಿಟ್ ಹಾಗೂ ವೃದ್ಧಾದ್ಯಾಪ ವೇತನ ಆದೇಶ ಪ್ರತಿಯನ್ನು ನ್ಯಾ. ಬಸವರಾಜ ತಳವಾರ ವಿತರಿಸಿದರು.
Chamarajanagar: ಸಚಿವ ಸುಧಾಕರ್ ರಾಜೀನಾಮೆಗೆ ವಾಟಾಳ್ ನಾಗರಾಜ್ ಆಗ್ರಹ
ಅಧಿಕಾರಿಗಳ ಗೈರು: ಕಾನೂನು ಅರಿವು ಕಾರ್ಯಕ್ರಮದಲ್ಲಿ ಬೆರಳಣಿಕೆ ವಿವಿಧ ಇಲಾಖೆ ಮುಖ್ಯಸ್ಥರು ಹೊರತುಪಡಿಸಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಬಹುತೇಕ ಮುಖ್ಯಸ್ಥರು ಗೈರಾಗಿದ್ದರು.