Chamarajanagar: ಸಚಿವ ಸುಧಾಕರ್‌ ರಾಜೀನಾಮೆಗೆ ವಾಟಾಳ್‌ ನಾಗರಾಜ್‌ ಆಗ್ರಹ

ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳ ಸಮೇತ ಮಹಿಳೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯಸಚಿವ ಡಾ. ಕೆ. ಸುಧಾಕರ್‌ ರಾಜೀನಾಮೆ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

Vatal Nagaraj demands Minister Dr K Sudhakar Resignation At Chamarajanagar gvd

ಚಾಮರಾಜನಗರ (ನ.06): ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳ ಸಮೇತ ಮಹಿಳೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯಸಚಿವ ಡಾ. ಕೆ. ಸುಧಾಕರ್‌ ರಾಜೀನಾಮೆ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು. ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಚಾಮರಾಜನಗರ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ, ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದರು.

ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳ ಸಮೇತ ಮಹಿಳೆ ಸಾವಿನ ಪ್ರಕರಣಕ್ಕೆ ಸಂಬಂಧಿ​ಸಿದಂತೆ ಆರೋಗ್ಯ ಸಚಿವರು ರಾಜೀನಾಮೆ ಕೊಟ್ಟರೆ ಗೌರವ ಬರುತ್ತದೆ. ಗೌರವ ಹೆಚ್ಚಾಗುತ್ತದೆ. ಇದು ಬಹಳ ಅತ್ಯಂತ ಕಣ್ಣೀರಿನ ಕಥೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ವಾಟಾಳ್‌ ಒತ್ತಾಯಿಸಿದರು.

Chamarajanagar: ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸೋಮಣ್ಣ ಸೂಚನೆ

ಆಸ್ಪತ್ರೆಗಳು ಜನರ ಶತ್ರುಗಳಾಗಬಾರದು: ಕರ್ನಾಟಕ ರಾಜ್ಯದ ಆಸ್ಪತ್ರೆಗಳು ಜನರ ಸೇವೆಗೆ ಸದಾ ಸಿದ್ದವಿರಬೇಕು. ಆಸ್ಪತ್ರೆಗಳು ಜನರ ಶತ್ರುಗಳಾಗಬಾರದು. ಇಡೀ ರಾಜ್ಯದಲ್ಲಿ ಆಸ್ಪತ್ರೆಗಳು ಕ್ಷೀಣವಾಗುತ್ತವೆ. ಸರ್ಕಾರ ಆಸ್ಪತ್ರೆಗಳನ್ನು ಬಹಳ ಉನ್ನತಮಟ್ಟಕ್ಕೆ ತರಬೇಕು. ಅನೇಕ ಆಸ್ಪತ್ರೆಗಳಲ್ಲಿ ಬೇಜವಾಬ್ದಾರಿಯಿಂದ ಅನೇಕರು ಸತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಚಾಮರಾಜನಗರದಲ್ಲಿ 27 ಜನರು ಆಮ್ಲಜನಿಕ ಇಲ್ಲದ ಸತ್ತಿದ್ದಾರೆ. ಇಂದಿನವರೆಗೂ ಮೃತ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ. ಆಸ್ಪತ್ರೆಗಳನ್ನು ಉನ್ನತ ಸ್ಥಿತಿಗೆ ತರಬೇಕಾದದ್ದು ಸರ್ಕಾರ ಕರ್ತವ್ಯವಾಗಿದೆ ಎಂದರು.

ಸಮಗ್ರ ಅಭಿವೃದ್ಧಿ ಬಗ್ಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಜಿಲ್ಲೆಗೆ ಸರ್ಕಾರ ಆಯವ್ಯಯದಲ್ಲಿ ಅನುದಾನ ಕೊಟ್ಟಿಲ್ಲ ಕಡೆಗಣಿಸಿದ್ದಾರೆ. ಜಿಲ್ಲೆಯ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಆರಂಭಗೊಂಡು 20 ವರ್ಷಗಳಾಯಿತು. ಮೈದಾನ ಕಾಮಗಾರಿ ಪೂರ್ಣವಾಗಿಲ್ಲ ಸರ್ಕಾರ ಅನುದಾನ ನೀಡಿಲ್ಲ. ತೀರ ಹದಗೆಟ್ಟಿದ್ದು, ಅಭಿವೃದ್ಧಿಯಾಗಿರುವ ಕೆಲಸವೂ ಮೂಲೆಗುಂಪಾಗುತ್ತಿದೆ. ಜಿಲ್ಲಾ ಕ್ರೀಡಾಂಗಣ ರಾಜ್ಯದಲ್ಲೇ ಮಾದರಿಯಾಗಬೇಕಿತ್ತು. ಆದರೆ, ಸರ್ಕಾರ ಜಿಲ್ಲಾ ಕ್ರೀಡಾಂಗಣವನ್ನು ಕಡೆಗಣಿಸಿದ್ದಾರೆ. ಹಳ್ಳಿಗಳಿಗೆ ನಿವೇಶನ ಹಂಚಿಲ್ಲ.

ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲ್ಲುವ ಅವಕಾಶ: ನಳಿನ್‌ ಕುಮಾರ್‌ ಕಟೀಲ್‌

ಮನೆಗಳನ್ನು ಕೊಟ್ಟಿಲ್ಲ. ವೃದ್ಧಾಪ್ಯವೇತನ ಹಂಚಿಲ್ಲ. ಸಾಗುವಳಿ ಚೀಟಿ ಹಂಚಿಲ್ಲ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಚಾಮರಾಜನಗರವನ್ನು ಕಡೆಗಣಿಸಿದೆ ಎಂದು ವಾಟಾಳ್‌ ನಾಗರಾಜ್‌ ಆರೋಪಿಸಿದರು. ಪ್ರತಿಭಟನೆಯಲ್ಲಿ ಅಜಯ್‌, ಶಿವಲಿಂಗಮೂರ್ತಿ, ಹುಂಡಿ ಬಸವಣ್ಣ, ಪಾರ್ಥಸಾರಥಿ, ರೇವಣ್ಣಸ್ವಾಮಿ, ಚೆನ್ನಂಜಪ್ಪ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios