Chamarajanagar: ಗೋಪಾಲಸ್ವಾಮಿ ದೇಗುಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮತಿ
ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ದೇವಾಲಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿವರ್ತಕ ಮತ್ತು ಎಲ್‌ಟಿ ಲೈನ್ ಅಳವಡಿಸಲು 8.21 ಲಕ್ಷ ರು.ದೇವಾಲಯದ ನಿಧಿಯಿಂದ ಭರಿಸಲು ಧಾರ್ಮಿಕ ದತ್ತಿ ಇಲಾಖೆ ಅನುಮತಿ ನೀಡಿದೆ.
ಗುಂಡ್ಲುಪೇಟೆ (ನ.07): ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ದೇವಾಲಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿವರ್ತಕ ಮತ್ತು ಎಲ್‌ಟಿ ಲೈನ್ ಅಳವಡಿಸಲು 8.21 ಲಕ್ಷ ರು.ದೇವಾಲಯದ ನಿಧಿಯಿಂದ ಭರಿಸಲು ಧಾರ್ಮಿಕ ದತ್ತಿ ಇಲಾಖೆ ಅನುಮತಿ ನೀಡಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಪ್ರಸ್ತಾವನೆ ಮೇರೆಗೆ ಹಿಮವದ್ ಗೋಪಾಲಸ್ವಾಮಿ ದೇವಾಲಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿವರ್ತಕ (ಡ್ರೈ ಟೈಪ್ ಟ್ರಾನ್ಸ್‌ಪಾರ್ಮರ್) ಮತ್ತು ಎಲ್‌ಟಿ ಲೈನ್ ಅಳವಡಿಸುವ ಕೆಲಸಕ್ಕೆ ಅನುದಾನ ದೇವಾಲಯದ ನಿಧಿಯಿಂದ ಭರಿಸಲು ಇಲಾಖೆ ನ.4 ರಂದು ಒಪ್ಪಿಗೆ ಸೂಚಿಸಿದೆ.
ಸ್ವಯಂ ನಿರ್ವಹಣಾ ಯೋಜನೆಯಡಿ ನಿಯಮಾನುಸಾರ ನಿರ್ವಹಿಸಿ ಕ್ರಮ ಕೈಗೊಳ್ಳಲು ಮತ್ತು ಈ ಸಂಬಂಧ ಗೋಪಾಲಸ್ವಾಮಿ ದೇವಾಲಯದ ಯಾವುದಾದರೊಂದು ಕೊಠಡಿಯಲ್ಲಿ(ಡ್ರೈ ಟೈಪ್ ಟ್ರಾನ್ಸ್ ಫಾರ್ಮರ್)ಪರಿವರ್ತಕ ಅಳವಡಿಸಲು ತಗಲುವ ಅಂದಾಜು ವೆಚ್ಚ 8.21 ಲಕ್ಷ ದೇವಾಲಯ ನಿಧಿಯಿಂದ ಭರಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಮಾಡಿದ್ದಾರೆ. ಗೋಪಾಲಸ್ವಾಮಿ ದೇವಾಲಯ ಧಾರ್ಮಿಕ ದತ್ತಿ, ಇಲಾಖಾ ವ್ಯಾಪ್ತಿಗೆ ಒಳಪಡುವ ಸಮೂಹ ಬಿ ದರ್ಜೆಯ ಅಧಿಸೂಚಿತ ಸಂಸ್ಥೆಯಾಗಿದೆ.
Chamarajanagar: ಸಚಿವ ಸುಧಾಕರ್ ರಾಜೀನಾಮೆಗೆ ವಾಟಾಳ್ ನಾಗರಾಜ್ ಆಗ್ರಹ
ದೇವಾಲಯಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಇರುವುದರಿಂದ ಪ್ರಸ್ತುತ ಸೆಸ್ಕಾಂ ಇಲಾಖೆಯು ಪರಿವರ್ತಕ ಓಪನ್ ಟೈಪ್ ಪದ್ಧತಿಯಲ್ಲಿ ಅಳವಡಿಸಲು ಆನೆಗಳ ತಿರುಗಾಟದಿಂದ ಕೆಡವಿ ಹಾಳು ಮಡುವ ಸಂಭವವಿರುತ್ತದೆ ಎಂದು ಕೆಇಆರ್‌ಸಿ ನಿಯಮಾನುಸಾರ ಡ್ರೈ ಟೈಪ್ ಟ್ರಾನ್ಸ್‌ಫಾರ್ಮರ್ ಪರಿವರ್ತಕದ ಸಾಮಾಗ್ರಿ ಮತ್ತು ಎಲ್‌ಟಿ ಲೈನಿಂಗ್ ಸಂಬಂಧಿಸಿದ ಸಾಮಾಗ್ರಿ ಇರುವುದಿಲ್ಲ ಎಂದು ನಿಯಮಾನುಸಾರ ಬೆಟ್ಟದ ಸ್ಥಳದಲ್ಲಿ ಕೊಠಡಿಯಲ್ಲಿ ಡ್ರೈ ಟೈಪ್ ಟ್ರಾನ್ಸ್ ಫಾರ್ಮರ್ ಅಳವಡಿಸಲು ಸ್ವಯಂ ಕಾರ್ಯ ನಿರ್ವಹಣೆಯ ಯೋಜನೆಯಡಿ ಕಾಮಗಾರಿ 8.21 ಲಕ್ಷ ಆಗುತ್ತದೆ.
ದೇವಾಲಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಅಂದಾಜು 8.21,020 ಅಂದಾಜಿಸಿ ಇಲಾಖೆ ಅನುಮತಿ ನೀಡಲು ಹಾಗೂ ಕಾಮಗಾರಿ ತಗಲುವ ವೆಚ್ಚದ ಅನುದಾನ ನೀಡಲು ಉಲ್ಲೇಖಿತ ಪತ್ರದಲ್ಲಿ ಜಿಲ್ಲಾಧಿಕಾರಿ ಕಳೆದ ಸೆ.22 ರಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಧಾರ್ಮಿಕ ದತ್ತಿ ಇಲಾಖೆ ಪರಿಶೀಲನೆ ನಡೆಸಿದಾಗ ಗೋಪಾಲಸ್ವಾಮಿ ದೇವಾಲಯ ಪ್ರಮುಖ ಪ್ರವಾಸಿ ತಾಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಬೆಟ್ಟಕ್ಕೆ ಬರುವ ಕಾರಣ ಮೂಲಭೂತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಅಗತ್ಯವಾಗಿರುತ್ತದೆ ಎಂದು ಧಾರ್ಮಿಕ ದತ್ತಿ ಇಲಾಖೆ ಅಭಿಪ್ರಾಯಪಟ್ಟಿದೆ
ಅರಣ್ಯ ಇಲಾಖೆ ಅನುಮತಿ ಕೊಡುತ್ತ?: ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿವರ್ತಕ (ಡ್ರೈ ಟೈಪ್ ಟ್ರಾನ್ಸ್‌ಪಾರ್ಮರ್) ಮತ್ತು ಎಲ್‌ಟಿ ಲೈನ್ ಅಳವಡಿಸಲು ಅರಣ್ಯ ಇಲಾಖೆ ಅನುಮತಿ ನೀಡುತ್ತ? ನೀಡಲ್ವ? ಗೋಪಾಲಸ್ವಾಮಿ ದೇವಾಲಯ ಬಂಡೀಪುರ ಅರಣ್ಯದ ಕೋರ್ ಏರಿಯಾದಲ್ಲಿದೆ, ಇಲ್ಲಿ ವಿದ್ಯುತ್ ಅವಶ್ಯಕತೆ ಇಲ್ಲ. ಬೆಳಗ್ಗೆಯಿಂದ ಸಂಜೆ 4 ಗಂಟೆ ತನಕ ಪ್ರವಾಸಿಗರು, ಭಕ್ತರಿಗೆ ಇರಲು ಅವಕಾಶವಿದೆ. ಹೀಗಿರುವಾಗ ಬೆಳಗಿನ ವೇಳೆ ವಿದ್ಯುತ್ ಬೆಳಕು ಬೇಕಾ ಎಂಬುದು ಪರಿಸರವಾದಿಗಳು ಪ್ರಶ್ನಿಸಿದ್ದಾರೆ. ಕೋರ್ ಏರಿಯಾದಲ್ಲಿ ವಿದ್ಯುತ್ ಬಂದರೆ ದೀಪ ಹಾಕಿದರೆ ವನ್ಯಜೀವಿಗಳ ಸಂಚಾರಕ್ಕೆ ತೊಂದರೆಯಾಗಲಿದೆ. ಇದು ಗೊತ್ತಿದ್ದು ಹಿಂದಿನ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿರುವುದು ಸರಿಯಲ್ಲ ಎಂದು ಆಕ್ಷೇಪ ಕೂಡ ವ್ಯಕ್ತವಾಗಿದೆ.
Chamarajanagar: ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸೋಮಣ್ಣ ಸೂಚನೆ
ಗೋಪಾಲಸ್ವಾಮಿ ದೇವಾಲಯದಲ್ಲಿ ವಿದ್ಯುತ್ ಸಂಪರ್ಕ ಅಗತ್ಯವಿಲ್ಲ. ಪ್ರವಾಸಿಗರು, ಭಕ್ತರು ಉಳಿಯುತ್ತಿಲ್ಲ ಹಾಗೂ ತಂಗುತ್ತಿಲ್ಲ. ವಿದ್ಯುತ್ ಬೇಕಾಗಿಲ್ಲ. ಬೆಟ್ಟದಲ್ಲಿ ಸೋಲಾರ್ ಇದೆ ಅಷ್ಟೆಸಾಕು ಅನಿಸುತ್ತೆ.
-ಪ್ರವೀಣ್, ವನ್ಯ ಟ್ರಸ್ಟ್