Asianet Suvarna News Asianet Suvarna News

ಹೂವಿನಹಡಗಲಿ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೊಟ್ಟ ಹಣ ನೀಡದ ಜಿಪಂ

ಹಕ್ಕಂಡಿ ಮರಳಿನ ಸ್ಟಾಕ್‌ ಯಾರ್ಡ್‌ನಿಂದ 6521 ಮೆಟ್ರಿಕ್‌ ಟನ್‌ ಮರಳು ವಿಲೇವಾರಿಯಾಗಿದ್ದು, 3.91 ಲಕ್ಷಗಳ ರಾಜಧನ ಸಂಗ್ರಹವಾಗಿದ್ದು, ಇವೆಲ್ಲ ಸೇರಿ .255.09 ಲಕ್ಷ ಜಿಪಂಗೆ ಸಂದಾಯವಾಗಿದೆ.

Department of Mines and Geology did not give the Money Given by the ZP at Huvina Hadagali grg
Author
First Published Sep 15, 2022, 2:02 PM IST

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಸೆ.15): ಮರಳು ಸ್ಟಾಕ್‌ ಯಾರ್ಡ್‌ನಿಂದ ಬಂದ ಆದಾಯದಲ್ಲಿ ಶೇ.25 ರಷ್ಟನ್ನು ಆಯಾ ಗ್ರಾಪಂಗಳಿಗೆ ನೀಡಲಾಗುತ್ತಿದೆ. ಅದೇ ರೀತಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಶೇ.25ರಷ್ಟು ರಾಜಧನವನ್ನು ಜಿಪಂಗೆ ಸಂದಾಯ ಮಾಡಿದ್ದರೂ ಗ್ರಾಪಂಗೆ ಅನುದಾನ ಬಿಡುಗಡೆ ಮಾಡುವಲ್ಲಿ ಜಿಪಂ ಮೀನಮೇಷ ಎಣಿಸುತ್ತಿದೆ. ತಾಲೂಕಿನ ಮಕರಬ್ಬಿ ಗ್ರಾಪಂ ವ್ಯಾಪ್ತಿಯಲ್ಲಿ 4, ಕೊಂಬಳಿ, ಹಕ್ಕಂಡಿ ತಲಾ ಒಂದು ಮರಳಿನ ಸ್ಟಾಕ್‌ ಯಾರ್ಡ್‌ಗಳಿವೆ. 2019-20ನೇ ಸಾಲಿನಲ್ಲಿ ಹಿರೇಬನ್ನಿಮಟ್ಟಿಯ 4 ಮರಳಿನ ಸ್ಟಾಕ್‌ ಯಾರ್ಡ್‌ಗಳಿಂದ ಒಟ್ಟು 99731.07 ಮೆಟ್ರಿಕ್‌ ಟನ್‌ ಮರಳು ವಿಲೇವಾರಿಯಾಗಿದೆ. ಇದರಿಂದ .59.84 ಕೋಟಿ ರಾಜಧನ ಸಂಗ್ರಹವಾಗಿದೆ.

ಮಕರಬ್ಬಿ ಗ್ರಾಪಂಗೆ (ಶೇ.25ರಷ್ಟು) ಹೆಚ್ಚುವರಿ ನಿಯತಕಾಲಿಕ ಮೊತ್ತ ಸೇರಿ .1.98 ಕೋಟಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಜಿಪಂ ರಾಜಧನ ಸಂದಾಯ ಮಾಡಿದೆ. ಉಳಿದಂತೆ ಕೊಬಳಿಯ ಮರಳಿನ ಸ್ಟಾಕ್‌ ಯಾರ್ಡ್‌ನಿಂದ 30489.40 ಮೆಟ್ರಿಕ್‌ ಟನ್‌ ಮರಳು ವಿಲೇವಾರಿಯಾಗಿದೆ. ಇದರಿಂದ .18.29 ಲಕ್ಷ ರಾಜಧನ ಸಂಗ್ರಹವಾಗಿದೆ. ಹಕ್ಕಂಡಿ ಮರಳಿನ ಸ್ಟಾಕ್‌ ಯಾರ್ಡ್‌ನಿಂದ 6521 ಮೆಟ್ರಿಕ್‌ ಟನ್‌ ಮರಳು ವಿಲೇವಾರಿಯಾಗಿದ್ದು, 3.91 ಲಕ್ಷಗಳ ರಾಜಧನ ಸಂಗ್ರಹವಾಗಿದ್ದು, ಇವೆಲ್ಲ ಸೇರಿ .255.09 ಲಕ್ಷ ಜಿಪಂಗೆ ಸಂದಾಯವಾಗಿದೆ.

ನೇಣು ಹಾಕೋದನ್ನ ತಪ್ಪಿಸೋದು ಬಿಟ್ಟು ವಿಡಿಯೋ ಮಾಡಿದ ಭೂಪರು: ಮಾನವೀಯತೆ ಮರೆತು ಬಿಟ್ರಾ ಜನ?

ಕ್ರಿಯಾ ಯೋಜನೆ ಮಂಜೂರಾಗಿಲ್ಲ:

ಗ್ರಾಪಂಗಳು ತಮಗೆ ಬಂದ ರಾಜಧನ ಹಾಗೂ ಹೆಚ್ಚುವರಿ ನಿಯತಕಾಲಿಕ ಮೊತ್ತದಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಬೇಕೆಂದು ಕಳೆದ ಫೆ.10 ರಂದು ಆಯಾ ತಾಪಂ ಇಒಗಳಿಗೆ ಪತ್ರ ಬರೆಯಲಾಗಿತ್ತು. ಆ ಪ್ರಕಾರವಾಗಿ ಈಗಾಗಲೇ ಆಯಾ ಗ್ರಾಪಂ ಜನಪ್ರತಿನಿಧಿಗಳು, ಕ್ರಿಯಾ ಯೋಜನೆ ಮಾಡಿ ಜಿಪಂಗೆ ಸಲ್ಲಿಸಿದ್ದಾರೆ. ಆದರೆ ಈವರೆಗೂ ಜಿಪಂನಿಂದ ಹಣ ಬಿಡುಗಡೆಯೂ ಇಲ್ಲ, ಇತ್ತ ಕ್ರಿಯಾ ಯೋಜನೆ ಮಂಜೂರಾತಿಯೂ ಇಲ್ಲದಂತಾಗಿದೆ.

ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು, ಫೆ.8,2022 ರಂದು ವಿಜಯನಗರ ಜಿಪಂಗೆ ಬರೆದ ಪತ್ರದಲ್ಲಿ ಮರಳು ವಿಲೇವಾರಿಯಿಂದ ಬಂದ ರಾಜಧನ ಮತ್ತು ಹೆಚ್ಚುವರಿ ನಿಯತಕಾಲಿಕ ಹಣ ಸೇರಿ ಹೂವಿನಹಡಗಲಿ ತಾಲೂಕಿಗೆ 2019-20ನೇ ಸಾಲಿನ ಒಟ್ಟು .255.09 ಲಕ್ಷ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮಕರಬ್ಬಿ ಗ್ರಾಪಂ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ನಮ್ಮ ಗ್ರಾಪಂ ವ್ಯಾಪ್ತಿಯ ಮರಳು ಸ್ಟಾಕ್‌ ಯಾರ್ಡ್‌ನಿಂದ ಸಂಗ್ರಹವಾಗಿರುವ ರಾಜಧನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆ. 4ರಂದು ಮನವಿ ಸಲ್ಲಿಸಿದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಹೂವಿನಹಡಗಲಿ ತಾಲೂಕಿಗೆ .255.09 ಲಕ್ಷ ಜಿಪಂಗೆ ನೀಡಿದ್ದೇವೆಂದು ತಿಳಿಸಿದ್ದಾರೆ. ಆದರೆ ಈವರೆಗೂ ಜಿಪಂ ಅಧಿಕಾರಿಗಳು ಹಣ ಬಿಡುಗಡೆ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ವಾರದೊಳಗೆ ಹಣ ಬಿಡುಗಡೆ ಮಾಡದಿದ್ದರೇ, 4 ಮರಳಿನ ಸ್ಟಾಕ್‌ಯಾರ್ಡ್‌ ಸಂಪೂರ್ಣ ಬಂದ್‌ ಮಾಡಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಕರಬ್ಬಿ ಗ್ರಾಪಂನ ಅಧ್ಯಕ್ಷರು, ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಸಚಿವ ಆನಂದ ಸಿಂಗ್‌ ಮನೆ ಸರ್ವೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಲಿ: ನಬಿಸಾಬ್‌

ಮಕರಬ್ಬಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಚರಂಡಿ, ಸಿಸಿ ರಸ್ತೆ, ಕುಡಿವ ನೀರು ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಅದಕ್ಕೆ ಅನುದಾನದ ಕೊರತೆ ಇದೆ. ನಮ್ಮ ವ್ಯಾಪ್ತಿಯ ಮರಳಿನ ಸ್ಟಾಕ್‌ ಯಾರ್ಡ್‌ಗಳ ರಾಜಧನ ಬಿಡುಗಡೆಯಾದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೇಗನೆ ಅನುದಾನ ಬಿಡುಗಡೆ ಮಾಡಬೇಕಿದೆ ಅಂತ ಮಕರಬ್ಬಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ತಿಳಿಸಿದ್ದಾರೆ. 

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಜಿಪಂಗೆ ರಾಜಧನ ಬಂದಿದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಹಣದ ದೃಢೀಕರಣ ಆಗಬೇಕಿದೆ. ಅಲ್ಲಿಂದ ಬಂದ ಕೂಡಲೇ ಆಯಾ ಗ್ರಾಪಂಗಳಿಗೆ ಅನುದಾನ ಬಿಡುಗಡೆ ಮಾಡುತ್ತೇವೆ ಅಂತ ಹೊಸಪೇಟೆ ಜಿಪಂ ಸಿಇಒ ಹರ್ಷಲ್‌ ಬೋಯರ್‌ ನಾರಾಯಣರಾವ್‌ ಹೇಳಿದ್ದಾರೆ. 
 

Follow Us:
Download App:
  • android
  • ios