Asianet Suvarna News Asianet Suvarna News

ಅನಾಥ ವಯೋವೃದ್ಧೆಗೆ ಹೊಸ ಜೀವನ ಕಲ್ಪಿಸಿದ ನ್ಯಾಯಾಧೀಶರು

ನ್ಯಾಯಾಧೀಶರು ಪ್ರತಿದಿನ ವಸತಿಗೆ ಹಿಂದಿಂದ ನ್ಯಾಯಾಲಯಕ್ಕೆ ಸಂಚರಿಸುವ ದಾರಿಯಲ್ಲಿ ಮಳೆ,ಗಾಳಿ ಮತ್ತು ಧೂಳಿನ ನಡುವೆ ವಾಸವಿದ್ದ ಈ ವಯೋವೃದ್ಧೆಯನ್ನು ಗಮನಿಸಿದ್ದಾರೆ. ತಮ್ಮ ಇಲಾಖೆಯ ಇನ್ನೋರ್ವ ನ್ಯಾಯಾಧೀಶರಾದ ಮಹಾವೀರ ಕರೆಣ್ಣನವರ ಇವರೊಂದಿಗೆ ಸೇರಿ ಮಹಿಳೆಯ ಘನತೆಯ ಬದುಕಿಗೆ ಆಸರೆಯಾಗಿದ್ದಾರೆ.

Davangere judge Rajeshwari N hegde who gave a new life to the orphaned old age woman rav
Author
First Published Apr 6, 2024, 7:02 PM IST

ರಿಪೋರ್ಟರ್ : ವರದರಾಜ್ 

ದಾವಣಗೆರೆ (ಏ.6): ಬೆಣ್ಣೆ ನಗರಿ, ಶಿಕ್ಷಣ ನಗರಿ ಎಂದೆಲ್ಲ ಕರೆಯುವ ದಾವಣಗೆರೆ ನಗರದಲ್ಲಿ ಶ್ರೀಮಂತರು, ಮಧ್ಯಮವರ್ಗದವರು, ಬಡವರು ಮತ್ತು ಕಡುಬಡವರ ಲಕ್ಷಾಂತರ ಜನರು ವಾಸಮಾಡುತ್ತಿದ್ದಾರೆ. ದಿನನಿತ್ಯದ ಬದುಕಿನ ಜಂಜಾಟಗಳ ನಾಗಾಲೋಟದಲ್ಲಿ ಕೆಲವು ಸಣ್ಣ ಸಣ್ಣ ವಿಷಯಗಳು ನಾಗರಿಕ ಸಮಾಜದ ಕಣ್ಣಿಗೆ ಬಿದ್ದರೂ ಹೃದಯಕ್ಕೆ ತಟ್ಟುವುದಿಲ್ಲ. ಆದರೆ,ದಾವಣಗೆರೆ ಶಾಮನೂರು ಕೆಳ ಸೇತುವೆಯನ್ನೆ ಸೂರು ಮಾಡಿಕೊಂಡು ಪುಟ್ಟ ನಾಯಿಮರಿಯೊಂದಿಗೆ ವಾಸವಿದ್ದ ವಯೋವೃದ್ಧೆಯನ್ನು ರಕ್ಷಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಮಾನವೀಯತೆಯನ್ನು ಮೆರೆದಿದ್ದಾರೆ.

ನ್ಯಾಯಾಧೀಶರು ಪ್ರತಿದಿನ ವಸತಿಗೆ ಹಿಂದಿಂದ ನ್ಯಾಯಾಲಯಕ್ಕೆ ಸಂಚರಿಸುವ ದಾರಿಯಲ್ಲಿ ಮಳೆ,ಗಾಳಿ ಮತ್ತು ಧೂಳಿನ ನಡುವೆ ವಾಸವಿದ್ದ ಈ ವಯೋವೃದ್ಧೆಯನ್ನು ಗಮನಿಸಿದ್ದಾರೆ. ತಮ್ಮ ಇಲಾಖೆಯ ಇನ್ನೋರ್ವ ನ್ಯಾಯಾಧೀಶರಾದ ಮಹಾವೀರ ಕರೆಣ್ಣನವರ ಇವರೊಂದಿಗೆ ಸೇರಿ ಮಹಿಳೆಯ ಘನತೆಯ ಬದುಕಿಗೆ ಆಸರೆಯಾಗಿದ್ದಾರೆ.

ಕಾಫಿನಾಡಲ್ಲಿ ನಿರ್ಗತಿಕಳಾಗಿ ಅಲೆಯುತ್ತಿದ್ದ ಆಂಧ್ರದ ವೃದ್ಧೆ ವರ್ಷದ ಬಳಿಕ ಮರಳಿ ಮನೆಗೆ!

ಮೊದಮೊದಲು ತೀವ್ರ ಪ್ರತಿರೋಧ, ಆಕ್ರೋಶ, ಕೌಟುಂಬಿಕವಾಗಿ ತನ್ನ ಮೇಲಾದ ಆಕ್ರಮಣಗಳನ್ನು ಅಸ್ಪಷ್ಟವಾಗಿ ಹೇಳುತ್ತಿದ್ದ ಆ ವಯೋವೃದ್ಧೆ, ಉಂಡ ಸಂಕಟಗಳ ಕಾರಣಕ್ಕೋ ಏನೋ ತನ್ನೆದುರಿಗೆ ನಿಂತು ತನ್ನನ್ನು ವಿಚಾರಿಸುತ್ತಿದ್ದ ನ್ಯಾಯಾಧೀಶರ ಮೇಲೆಯೇ ಹರಿಹಾಯ್ದರೂ ಸಹ ಸಹನೆ ಕಳೆದುಕೊಳ್ಳದೆ ಸಮಚಿತ್ತದಿಂದ ಅವಳ ಮಾನಸಿಕ ಸ್ಥಿತಿಗತಿ ಶೀಲತೆಯನ್ನು ಅರಿತು, ನ್ಯಾಯಾಧೀಶರಾದ ಮಹಾವೀರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಕೊನೆಗೂ ಅವಳ ಮನ ಒಪ್ಪಿಸಿ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು.

ಕೈಗಳಿಲ್ಲದ ಪ್ಯಾರಾ ಕ್ರಿಕೆಟಿಗ ಅಮೀರ್‌ಗೆ ನೀರು ಕುಡಿಸಿದ ಇರ್ಫಾನ್ ಪುತ್ರ: ವೀಡಿಯೋ ವೈರಲ್

ದೇಶದ ಯಾವ ಮನುಷ್ಯನೂ ಸಹ ಹಸಿವಿನಿಂದ ಸಾಯಬಾರದು. ಮನುಷ್ಯರಿಗೆ ನೋಡುವ ಕಣ್ಣಿದ್ದರಷ್ಟೆ ಸಾಲದು, ಅಂತರಂಗವೂ ಸಹ ಮಿಡಿಯುತಿರಬೇಕು ಎಂಬುದಕ್ಕೆ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆಯವರೆ ಸಾಕ್ಷಿ ಎಂದು ನಾಗರೀಕರ ಪ್ರಶಂಸೆಗೆ ಪಾತ್ರರಾದರು.

Follow Us:
Download App:
  • android
  • ios