ಬಿಪಿಎಲ್ ಕಾರ್ಡ್ ರದ್ದು ಪಡಿಸಿರೋದ್ರಲ್ಲಿ ಬಡವರು ಇದ್ರೆ ರಾಜೀನಾಮೆ ಕೊಡ್ತೀರಾ?: ಸಿದ್ದರಾಮಯ್ಯಗೆ ಸಿ.ಟಿ. ರವಿ ಪ್ರಶ್ನೆ

ವಿಧವೆ, 1 ಗುಂಟೆ ಜಮೀನು ಇಲ್ಲದವರನ್ನೂ ರದ್ದು ಮಾಡಿದ್ದೀರಾ?. ಆ ರೀತಿ ರದ್ದುಪಡಿಸಿದ್ರೆ ನೀವು ರಾಜೀನಾಮೆ ಕೊಡ್ತೀರಾ, ನಿಮ್ಮ ಯಾವ ಅಧಿಕಾರಿಯನ್ನ ಡಿಸ್ಮಿಸ್ ಮಾಡ್ತೀರಾ. ಕಾಯ್ದೆ ಪ್ರಕಾರವೇ ಹೋದ್ರೆ ಎಷ್ಟು ಕಾರ್ಡ್ ರದ್ದಾಗುತ್ತೆ ಅಂತ ಸಿಎಂಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ. 

BJP MLC CT Ravi Slams Siddaramaiah on BPL Card Cancel in Karnataka grg

ಚಿಕ್ಕಮಗಳೂರು(ನ.21):  ಬಿಪಿಎಲ್ ಕಾರ್ಡ್ ರದ್ದು ಪಡಿಸಿರೋದ್ರಲ್ಲಿ ಬಡವರು ಇದ್ರೆ ಮುಖ್ಯಮಂತ್ರಿಗಳೇ ರಾಜೀನಾಮೆ ಕೊಡ್ತೀರಾ? ಎಂದು ಸಿದ್ದರಾಮಯ್ಯ ಅವರಿಗೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. 

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ.ರವಿ ಅವರು, ವಿಧವೆ, 1 ಗುಂಟೆ ಜಮೀನು ಇಲ್ಲದವರನ್ನೂ ರದ್ದು ಮಾಡಿದ್ದೀರಾ?. ಆ ರೀತಿ ರದ್ದುಪಡಿಸಿದ್ರೆ ನೀವು ರಾಜೀನಾಮೆ ಕೊಡ್ತೀರಾ, ನಿಮ್ಮ ಯಾವ ಅಧಿಕಾರಿಯನ್ನ ಡಿಸ್ಮಿಸ್ ಮಾಡ್ತೀರಾ. ಕಾಯ್ದೆ ಪ್ರಕಾರವೇ ಹೋದ್ರೆ ಎಷ್ಟು ಕಾರ್ಡ್ ರದ್ದಾಗುತ್ತೆ ಅಂತ ಸಿಎಂಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ. 

ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸ್ಥಗಿತ; ರದ್ದಾಗಿರುವ ಕಾರ್ಡ್‌ಗೂ ರೇಷನ್ ಕೊಡ್ತೀವಿ: ಮುನಿಯಪ್ಪ

ಕೆಲವೆಡೆ ಶಾಸಕರು ಓಟ್ ಬ್ಯಾಂಕ್ ಗೆ ಮಾತ್ರ ಕಾರ್ಡ್ ಉಳಿಸಿಕೊಂಡಿದ್ದಾರೆ. ನಮ್ಮ ಓಟರ್, ನಮ್ಮ ಪಕ್ಷದ ಬೆಂಬಲಿಗರು, ಈ ಜಾತಿಯವರು ಅಂತ ಕಾರ್ಡ್ ರದ್ದು ಮಾಡಿಲ್ಲ. ನಮಗೆ ಸಪೋರ್ಟ್ ಮಾಡೋರು, ಸಿಎಂ ತಲೆ ತಗೀತಾರೆ ಅಂತೇಳಿ ಅಧಿಕಾರಿಗಳ ಬಳಿ ಉಳಿಸಿದ್ದಾರೆ. ಕೆಲವು ಕೋಮು, ಜಾತಿಯನ್ನ ಮಾತ್ರ ಉಳಿಸಿಕೊಂಡಿದ್ದಾರಂತೆ. ಇದು ಅನ್ಯಾಯ ಅಲ್ವಾ? ಎಂದು ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ. ರವಿ ಹರಿಹಾಯ್ದಿದ್ದಾರೆ. 

ಬಿಪಿಎಲ್ ಕಾರ್ಡ್ ರದ್ದು, ಬಡವರ ಶಾಪಕ್ಕೆ ಕಾಂಗ್ರೆಸ್ ಗುರಿ: ವೆಂಕನಗೌಡ ಗೋವಿಂದಗೌಡ್ರ

ಗದಗ: ಬಿಪಿಎಲ್ ಕಾರ್ಡ್‌ ಫಲಾನುಭವಿಗಳ ಪರಿಷ್ಕರಣೆಯ ನೆಪದಲ್ಲಿ ರಾಜ್ಯ ಸರ್ಕಾರವು ಬೇಕಾಬಿಟ್ಟಿ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸುತ್ತಿರುವುದು ಖಂಡನೀಯ, ಬಡವರ ಶಾಪಕ್ಕೆ ಕಾಂಗ್ರೆಸ್ ಗುರಿಯಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದ್ದಾರೆ. 

ಕಾಂಗ್ರೆಸ್ ಸರ್ಕಾರ 12,80,540 ಬಿಪಿಎಲ್ ಕಾರ್ಡ್ ಕೊಟ್ಟಿದೆ, ಯಾವುದನ್ನೂ ರದ್ದು ಮಾಡಿಲ್ಲ; ವಕ್ತಾರ ಎಂ. ಲಕ್ಷ್ಮಣ್!

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಪಿಎಲ್ ಕಾರ್ಡು ದಾರರನ್ನು ಎಪಿಎಲ್‌ಗೆ ವರ್ಗಾಯಿಸುತ್ತಿ ರುವುದು, ಪ್ಯಾನ್ ಕಾರ್ಡ್ ಇದ್ದ ಮಾತ್ರಕ್ಕೆ ಬಿಪಿಎಲ್‌ ಕಾರ್ಡ್ ಫಲಾನುಭವಿ ಆಗುವುದಿಲ್ಲ ಎಂಬುವುದು ಸರ್ಕಾರದ ಹುಚ್ಚುತನವಾಗಿದೆ. ಸಂಬಂಧಪಟ್ಟ ಇಲಾಖೆಯವರು ಬಿಪಿಎಲ್ ಕಾರ್ಡ್‌ದಾರರ ಮನೆ ಮನೆಗೆ ಹೋಗಿ ಪರಿಶೀಲನೆ ಮಾಡಿ ಮುಂದೆ ಕ್ರಮ ಕೈಗೊಳ್ಳಬೇಕು. ಕಚೇರಿಯಲ್ಲಿ ಕುಳಿತುಕೊಂಡು ಬೇಕಾಬಿಟ್ಟಿ ಕಾರ್ಡ್‌ಗಳನ್ನು ರದ್ದು ಮಾಡಿದರೆ ಜೆಡಿಎಸ್ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ, ಹಾಗಾಗಿ ಒಂದಲ್ಲ ಒಂದು ನೆಪ ಮಾಡಿಕೊಂಡು ತಾವೇ ಘೋಷಿಸಿರುವ ಗ್ಯಾರಂಟಿಗಳಿಗೆ ಕೊಕ್ಕೆ ಹಾಕುತ್ತಿದೆ ಎಂದು ಜಿಲ್ಲಾ ಕಾರ್ಯಧ್ಯಕ್ಷ ಸಿ.ಎಸ್. ಪಾಟೀಲ, ಗಿರೀಶ್ ಶಂಶಿ, ಕೆ.ಎಫ್. ದೊಡ್ಡನಿ, ಜೋಸೆಫ್ ಉದೋಜಿ, ಜಿ.ಕೆ. ಕೊಳ್ಳಿಮಠ, ಮಂಜುಳಾ ಮೇಟಿ, ಡಾ.ಶಾಣಪ್ಪ ಹೂಗಾರ, ವೀರಭದ್ರಪ್ಪ ಅಕ್ಕಿ, ದೇವಪ್ಪ ಮಲಸಮುದ್ರ, ಬಸವರಾಜ ಅಪ್ಪಣ್ಣವರ, ಸಿದ್ದಲಿಂಗಯ್ಯ ಹೊಂಬಾಳಿಮಠ, ಪ್ರಫುಲ್ ಪುಣೆಕರ್, ಸಂತೋಷ್ ಪಾಟೀಲ, ರಮೇಶ ಹುಣಸಿಮರದ ಎಚ್ಚರಿಸಿದ್ದಾರೆ. 

Latest Videos
Follow Us:
Download App:
  • android
  • ios