ಬೆಕ್ಕು ಅಡ್ಡ ಬರೋದು, ವಿಧವೆ ಎದುರಿಗೆ ಬರೋದು... ವ್ಹಾವ್ ಅದೆಷ್ಟು ಚೆಂದ ಹೇಳಿದ್ರಿ ಡುಮ್ಮಾ ಸರ್!
ಹೆಣ್ಣಿಗೆ ವಿಧವೆ ಎನ್ನುವ ಪಟ್ಟ ಕಟ್ಟಿ ಈ ಸಮಾಜ ನೋಡುವ ಬಗೆಯ ಬಗ್ಗೆ ಅಮೃತಧಾರೆ ಗೌತಮ್ ಹೇಳಿದ್ದೇನು? ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ
ಅಮೃತಧಾರೆಯಲ್ಲಿ ಈಗ ಅಣ್ಣ-ತಂಗಿಯ ಟ್ವಿಸ್ಟ್ ಬಂದಿದೆ. ಗೌತಮ್ ದಿವಾನ ತನ್ನ ಅಣ್ಣ ಎನ್ನುವುದನ್ನುತಿಳಿಯದೇ, ಯಾರದ್ದೋ ಮಾತು ಕೇಳಿಕೊಂಡು ತಂಗಿ ಸುಧಾ, ಅವರ ಮನೆ ಸೇರಿದ್ದಾಳೆ. ಅವರಿಗೆ ಕೆಡುಕು ಉಂಟುಮಾಡುವುದೇ ಅವಳ ಉದ್ದೇಶ. ಅಮ್ಮ ಮತ್ತು ಮಗಳು ಚೆನ್ನಾಗಿ ಇರಬೇಕು ಎಂದರೆ ಗೌತಮ್ ನೆಮ್ಮದಿಯನ್ನು ಹಾಳು ಮಾಡಬೇಕು, ಅವರಿಗೆ ಕೆಡುಕು ಮಾಡಬೇಕು, ಜೀವ ತೆಗೆಯಬೇಕು ಎಂದೆಲ್ಲಾ ಸುಧಾಳಿಗೆ ಹೇಳಿ ಕಳುಹಿಸಲಾಗಿದೆ. ಇದಕ್ಕೆ ಹೆದರಿರೋ ಸುಧಾ ಒಪ್ಪಿಕೊಂಡು ಗೌತಮ್ ಮನೆ ಸೇರಿದ್ದಾಳೆ. ಆದರೆ ಇದಾಗಲೇ ಗೌತಮ್ ಜೀವ ಉಳಿಸಿದ್ದಳು ಸುಧಾ. ಅವನನ್ನು ಬಾಯ್ತುಂಬಾ ಅಣ್ಣ ಎಂದು ಕರೆದಿದ್ದಾಳೆ. ಭೂಮಿಕಾಳನ್ನು ಅತ್ತಿಗೆ ಎನ್ನುತ್ತಿದ್ದಾಳೆ. ಗೌತಮ್ ಮತ್ತು ಭೂಮಿಕಾ ತೋರಿಸ್ತಿರೋ ಪ್ರೀತಿಗೆ ಅವಳು ಕರಗಿ ಹೋಗಿದ್ದಾಳೆ.
ಮುಗ್ಧ ಮನಸ್ಸಿನ ಸುಧಾಳಿಗೆ ಈಗ ಸಂಕಟ ಎದುರಾಗಿದೆ. ಒಂದು ಕಡೆ ಇವರು ತೋರಿಸೋ ಪ್ರೀತಿ, ಇನ್ನೊಂದು ಕಡೆ ಅಮ್ಮ ಮತ್ತು ಮಗಳ ಜೀವ ಭಯ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ಇದೇ ವೇಳೆ ಗೌತಮ್ ಹೇಳಿರುವ ಮಾತೊಂದು ಕೇವಲ ಸುಧಾಳಿಗೆ ಮಾತ್ರವಲ್ಲದೇ ಎಲ್ಲರಿಗೂ ಅನ್ವಯ ಆಗುವಂತಿದೆ. ಹೆಣ್ಣಿನ ಜೀವನ ಇರುವುದೇ ಗಂಡನ ಮೇಲೆ, ಗಂಡ ಸತ್ತರೆ ಹೆಣ್ಣಿನ ಬಾಳೇ ಮುಗಿಯಿತು, ಆಕೆ ವಿಧವೆ, ಅಪಶಕುನ... ಎನ್ನುವ ನೂರಾರು ಕೆಟ್ಟ ತಲೆಪಟ್ಟ ಹೆಣ್ಣಿನ ಮೇಲೆ ಕಟ್ಟುವ ಸಂಸ್ಕೃತಿ ಇನ್ನೂ ಹೋಗಿಲ್ಲ. ಹೆಣ್ಣು ಪಾತಾಳದಿಂದ ಹಿಡಿದು ಬಾಹ್ಯಾಕಾಶದ ವರೆಗೆ ಸಾಧನೆ ಮಾಡಿ ಬಂದರೂ ಕೆಲವು ಕಡೆಗಳಲ್ಲಿ ಇಂಥದ್ದೊಂದು ಅತ್ಯಂತ ಕೀಳು, ಕೆಟ್ಟ ಸಂಪ್ರದಾಯ ಇಂದಿಗೂ ಇದೆ. ಇದನ್ನೇ ತುಂಬಾ ಅದ್ಭುತವಾಗಿ ಮನಮುಟ್ಟುವಂತೆ ಹೇಳಿದ್ದಾನೆ ಗೌತಮ್.
ನನ್ನ ನಟನೆ ನೋಡ್ಲಿಲ್ಲ, ಟ್ಯಾಲೆಂಟ್ ನೋಡ್ಲಿಲ್ಲ ಎನ್ನುತ್ತಲೇ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗ್ಗೆ ಮಿಲನಾ ಓಪನ್ ಮಾತು!
ಗೌತಮ್ ಪೂಜೆ ಮಾಡುತ್ತಿರುವಾಗ ಸುಧಾ ಮೂಲೆಯಲ್ಲಿ ನಿಂತುಕೊಳ್ಳುತ್ತಾಳೆ. ಅದಕ್ಕೆ ಕಾರಣ ಕೇಳಿದಾಗ, ನೀವು ಪೂಜೆಮಾಡ್ತಾ ಇದ್ದಿರಿ. ನಾನು ವಿಧವೆ. ಎದುರಿಗೆ ಬರಬಾರದು ಎಂದುನಿಂತೆ ಎನ್ನುತ್ತಾಳೆ ಸುಧಾ. ಅದಕ್ಕೆ ಅವಳಿಗೆ ಕ್ಲಾಸ್ ತೆಗೆದುಕೊಳ್ಳುವ ಗೌತಮ್, ಇದೆಲ್ಲಾ ಏನೂ ಇಲ್ಲ. ಇವೆಲ್ಲಾ ಮನುಷ್ಯ ತನ್ನ ಭಯಕ್ಕೆ ಹಾಕಿಕೊಂಡುವ ನಿಯಮಗಳು ಅಷ್ಟೇ ಎಂದಿದ್ದಾನೆ. ಬೆಕ್ಕು ಅಡ್ಡ ಬರೋದು, ವಿಧವೆ ಎದುರಿಗೆ ಬರೋದು... ಇವೆಲ್ಲಾ ಮೌಢ್ಯಗಳ ಪರಮಾವಧಿ ಎಂದಿರುವ ಗೌತಮ್, ನಾನುರಸ್ತೆಯ ಮೇಲೆ ಹೋಗುವಾಗ ಎಷ್ಟೋ ವಿಧವೆಯರು ಅಡ್ಡ ಬರುತ್ತಾರೆ. ಹಾಗೆಂದು ನನಗೆ ಕೆಡುಕು ಆಗುತ್ತಾ? ಹೋಗುವ ಕೆಲಸ ಆಗಲ್ವಾ? ಇದೆಲ್ಲಾ ಹುಚ್ಚುತನ. ನನ್ನ ಪಾಲಿಗೆ ನೀನು ಯಾವತ್ತಿಗೂ ಮುತ್ತೈದೆಯೇ. ಅದೆಲ್ಲಾ ತಲೆಯಿಂದ ತೆಗೆದುಹಾಕು ಎನ್ನುತ್ತಾನೆ.
ಈ ಮಾತಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಈಗಬೇಕಿರುವುದು ಇದೇ ಮಾತು. ಸೀರಿಯಲ್ ಮೂಲಕ ಮೌಢ್ಯಕ್ಕೆ ತೆರೆ ಎಳೆಯಬೇಕು. ಸೀರಿಯಲ್‌ಗಳನ್ನು ನೋಡುವ ದೊಡ್ಡ ವರ್ಗ ಅದನ್ನೇ ಪಾಲಿಸುವುದು ಇದೆ. ಇದೇ ಕಾರಣಕ್ಕೆ ಧಾರಾವಾಹಿಗಳಲ್ಲಿ ಇಂಥ ಮಾತುಗಳು ನಟರ ಬಾಯಲ್ಲಿ ಬಂದರೆ ಅತಿ ಉತ್ತಮ ಎನ್ನುತ್ತಿದ್ದಾರೆ ನೆಟ್ಟಿಗರು.