ಗ್ಯಾರಂಟಿಗಳ ಕುರಿತು ಬಿಜೆಪಿ ಅಪಪ್ರಚಾರ: ಮಾತು ಬೇಡ, ಹೋರಾಟ ನಡೆಸಿ, ಪಾಟೀಲಗೆ ಶೆಟ್ಟರ್ ಸವಾಲು

ಎಚ್.ಕೆ. ಪಾಟೀಲ ಅವರು ಎಲ್ಲಿಯೋ ಕುಳಿತುಕೊಂಡು ಏನೋ ಹೇಳುವುದಲ್ಲ. ಇದಕ್ಕೆ ಸಾಕಷ್ಟು ಸಾಕ್ಷಿ, ಪುರಾವೆ ಬೇಕು. ಅವುಗಳನ್ನು ಮೊದಲು ಸಂಗ್ರಹಿಸಿಕೊಂಡು ಮಾತನಾಡಲಿ, ಕಾನೂನು ಹೋರಾಟ ಮಾಡುವುದಾದರೆ ಈಗಲೇ ಆರಂಭಿಸಲಿ. ಕೇವಲ ಹೇಳಿಕೆ ಕೊಡುವುದೇಕೆ?. ಇದು ಕೇವಲ ವಿಷಯ ಪಲ್ಲಟ ಮಾಡುವುದಾಗಿದೆ ಎಂದ ಸಂಸದ ಜಗದೀಶ ಶೆಟ್ಟರ್ 

Belagavi BJP MP Jagadish Shettar Challenge to Minister HK Patil grg

ಹುಬ್ಬಳ್ಳಿ(ನ.21):  ಪಂಚ ಗ್ಯಾರಂಟಿಗಳ ಕುರಿತು ಬಿಜೆಪಿ ಅಪಪ್ರಚಾರ ಮಾಡುತ್ತಿದ್ದು, ಈ ಕುರಿತು ಕಾನೂನು ಹೋರಾಟ ಮಾಡುವುದಾಗಿ ಸಚಿವ ಎಚ್.ಕೆ. ಪಾಟೀಲ ಚಿಂತನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಅವರು, ಮೊದಲು ಹೇಳಿಕೆ ನೀಡುವುದನ್ನು ಕೈಬಿಟ್ಟು ಕಾನೂನು ಹೋರಾಟ ಆರಂಭಿಸಲಿ ಎಂದು ಸಂಸದ ಜಗದೀಶ ಶೆಟ್ಟರ್ ಸವಾಲು ಹಾಕಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಕೆ. ಪಾಟೀಲ ಅವರು ಎಲ್ಲಿಯೋ ಕುಳಿತುಕೊಂಡು ಏನೋ ಹೇಳುವುದಲ್ಲ. ಇದಕ್ಕೆ ಸಾಕಷ್ಟು ಸಾಕ್ಷಿ, ಪುರಾವೆ ಬೇಕು. ಅವುಗಳನ್ನು ಮೊದಲು ಸಂಗ್ರಹಿಸಿಕೊಂಡು ಮಾತನಾಡಲಿ, ಕಾನೂನು ಹೋರಾಟ ಮಾಡುವುದಾದರೆ ಈಗಲೇ ಆರಂಭಿಸಲಿ. ಕೇವಲ ಹೇಳಿಕೆ ಕೊಡುವುದೇಕೆ?. ಇದು ಕೇವಲ ವಿಷಯ ಪಲ್ಲಟ ಮಾಡುವುದಾಗಿದೆ ಎಂದರು. 

ಮುಸ್ಲಿಮರ ತುಷ್ಟಿಕರಣಕ್ಕೆ ಕೇಸ್ ವಾಪಸ್: ಜಗದೀಶ ಶೆಟ್ಟರ್‌

ಕಾಂಗ್ರೆಸ್ಸಿನಿಂದಲೇ ಸೋರಿಕೆ:

ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದ ಕೋವಿಡ್ ಹಗರಣ ಕುರಿತು ಕುನ್ಹಾ ಅವರು ನೀಡಿದ ವರದಿ ಮುಖ್ಯಮಂತ್ರಿ ಕಚೇರಿಯಿಂದಲೇ ಯಾಗಿವೆ ಸೋರಿಕೆ ಹೇಳಿಕೆಗೆ ಉತ್ತರಿಸಿದ ಶೆಟ್ಟರ್, ಯಾವುದಾ ದರೂ ಒಂದು ಹಗರಣ ಕುರಿತು ತನಿಖಾ ವರದಿ, ಅದರಲ್ಲೂ ನ್ಯಾಯಾಲಯಕ್ಕೆ ಸಂಬಂಧಿಸಿದ ವರದಿಯು ಬಹಳಷ್ಟು ತನಿಖಾ ಸೂಕ್ಷ್ಮವಾಗಿರುತ್ತದೆ. ಇದರಲ್ಲಿ ಏನಾದರೂ ಅಧ್ಯಯನ ಮಾಡುವುದಾದರೆ ಮಾಡಿ ಸಚಿವ ಸಂಪುಟದ ಮುಂದೆ ಇಡುತ್ತಾರೆ. ಆದರೆ, ಕೋವಿಡ್ ಹಗರಣದ ಮಧ್ಯಂತರ ವರದಿ ತರಾತುರಿಯಲ್ಲಿ ಮಂಡನೆ ಮಾಡಲಾಗಿದೆ. ವರದಿ ಮಂಡನೆ ಮಾಡಿದ ತಕ್ಷಣವೇ ಮಾಹಿತಿಯು ಸೋರಿಕೆಯಾಗುತ್ತದೆ ಎಂದರೆ ಅದು ಮುಖ್ಯ ಮಂತ್ರಿಗಳ ಕಚೇರಿಯಿಂದಾಗಿರಬಹುದು, ಇಲ್ಲವೇ ಕುನ್ಹಾ ಅವರ ಕಚೇರಿಯಿಂದಾಗಿರಬಹುದು ಎಂದರು. 

ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿ ನವರು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುವ ಉದ್ದೇಶದಿಂದಲೇ ಮಾಹಿತಿ ಸೋರಿಕೆ ಮಾ ಡಿದ್ದಾರೆ. ಇದೊಂದು ವ್ಯವಸ್ಥೆಯ ದುರುಪ ಯೋಗ. ಇದರಲ್ಲಿ ಮುಖ್ಯ ಮಂತ್ರಿ ಹಾಗೂ ಸರ್ಕಾರದ ಪಾತ್ರವಿದೆ ಎಂದರು. 

ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ಬಹುಮತ: 

ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬುಧವಾರ ನಡೆದ ವಿಧಾನಸಭೆಯಮತದಾನ ಕುರಿತು ಮಾತನಾಡಿ, ಮಹಾರಾಷ್ಟ್ರದಲ್ಲಿ ನ ಮಗೆ ಒಳ್ಳೆಯ ಅಭಿಪ್ರಾಯವಿದೆ. ನಾನು ಎರಡು ದಿನ ಮಹಾರಾಷ್ಟ್ರದ ವಿವಿಧ ಕ್ಷೇತ್ರ ಗಳಲ್ಲಿ ಚುನಾವಣಾ ಪ್ರಚಾರ ಮಾಡಿದ್ದೇನೆ. ಜತ್ತ, ಸೋಲ್ಲಾಪುರ, ಅಕ್ಕಲಕೋಟೆಯ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಿದ ವೇಳೆ ಒಳ್ಳೆಯ ವಾತಾವರಣ ಕಂಡು ಬಂದಿದೆ. ಈ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ಜಾರ್ಖಂಡ್ ರಾಜ್ಯದಲ್ಲಿ ನಾನುಚುನಾವಣಾ ಪ್ರಚಾರ ಮಾಡಿಲ್ಲ. ಹಾಗಾಗಿ ಅಲ್ಲಿನ ಸ್ಥಿತಿಗತಿ ಕುರಿತು ಹೆಚ್ಚಿನ ಮಾಹಿತಿಯಿಲ್ಲ. ಆದರೆ, ಜಾರ್ಖಂಡ್‌ನಲ್ಲೂ ಸಹ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಜಗದೀಶ ಶೆಟ್ಟರ್ ಹೇಳಿದರು.

ಮುಡಾ ಹಗರಣ: ಭಂಡತನವಿದ್ದರೆ ಏನು ಮಾಡಲು ಸಾಧ್ಯ, ಜಗದೀಶ ಶೆಟ್ಟರ

ಎಚ್.ಕೆ. ಪಾಟೀಲಗೆ ಶೆಟ್ಟ‌ರ್ ಸವಾಲು 

ಎಚ್.ಕೆ.ಪಾಟೀಲ ಅವರು ಎಲ್ಲಿ ಯೋ ಕುಳಿತುಕೊಂಡು ಏನೋ ಹೇಳುವುದಲ್ಲ. ಇದಕ್ಕೆ ಸಾಕಷ್ಟು ಸಾಕ್ಷಿ, ಪುರಾವೆ ಬೇಕು. ಅವುಗಳನ್ನು ಮೊದಲು ಸಂಗ್ರಹಿಸಿಕೊಂಡು ಮಾತನಾಡಲಿ.  ಕಾನೂನು ಹೋರಾಟ ಮಾ ಡುವುದಾದರೆ ಈಗಲೇ ಆರಂಭಿಸಲಿ. ಕೇವಲ ಹೇಳಿಕೆ ಕೊಡುವುದೇಕೆ? ಇದು ಕೇವಲ ವಿಷಯ ಪಲ್ಲಟ ಮಾಡುವುದಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್‌ ತಿಳಿಸಿದ್ದಾರೆ. 

• ಕೋವಿಡ್ ಹಗರಣದ ಮಧ್ಯಂತರ ವರದಿ ತರಾತುರಿಯಲ್ಲಿ ಮಂಡನೆ ಮಾಡಲಾಗಿದೆ. ವರದಿ ಮಂಡನೆ ಮಾಡಿದ ತಕ್ಷಣವೇ ಮಾಹಿತಿಯು ಸೋರಿಕೆಯಾಗುತ್ತದೆ ಎಂದರೆ ಅದು ಮುಖ್ಯಮಂತ್ರಿಗಳ ಕಚೇರಿಯಿಂದ ಆಗಿರಬಹುದು 
• ಯಾವುದಾದರೂ ಒಂದು ಹಗರಣ ಕುರಿತು ತನಿಖಾ ವರದಿ, ಅದರಲ್ಲೂ ನ್ಯಾಯಾಲಯಕ್ಕೆ ಸಂಬಂಧಿಸಿದ ತನಿಖಾ ವರದಿಯು ಬಹಳಷ್ಟು ಸೂಕ್ಷ್ಮವಾಗಿರುತ್ತದೆ. 
• ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವು
 

Latest Videos
Follow Us:
Download App:
  • android
  • ios