ದಯಾಮರಣಕ್ಕಾಗಿ ಹೋರಾಟ ನಡೆಸುತ್ತಿರುವ ದಾವಣಗೆರೆಯ ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರು, ತಮ್ಮ ಪಿಂಚಣಿ ಹಾಗೂ ಮನೆ ಮಾರಾಟದ ಹಣದಿಂದ ₹10 ಲಕ್ಷವನ್ನು ಭಾರತೀಯ ಸೇನೆಯ ಯೋಧರ ಕಲ್ಯಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಜಿಲ್ಲಾಧಿಕಾರಿಗಳ ಮೂಲಕ 'ಭಾರತ್ ಕೆ ವೀರ್' ನಿಧಿಗೆ ತಲುಪಿಸಲಾಗುವುದು.

ದಾವಣಗೆರೆ (ಜೂ.22): ದಯಾ ಮರಣಕ್ಕಾಗಿ ಹೋರಾಟ ನಡೆಸಿರುವ ದಾವಣಗೆರೆಯ ವಯೋವೃದ್ಧ, ನಿವೃತ್ತ ಶಿಕ್ಷಕಿ ಕರಿಬಸಮ್ಮ(Davanagere karibasamma) ಅವರು ಭಾರತೀಯ ಸೇನೆ(Indian army)ಯ ಯೋಧರ ಕಲ್ಯಾಣಕ್ಕಾಗಿ ₹10 ಲಕ್ಷ ದೇಣಿಯನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ನೀಡಿದರು. ಕರಿಬಸಮ್ಮ ಅವರ ಹಳೆಯ ವಿದ್ಯಾರ್ಥಿ, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ। ಎ.ಎಚ್.ಶಿವಯೋಗಿಸ್ವಾಮಿ ಇದ್ದರು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾರು ಕರಿಬಸಮ್ಮ? ಹಿನ್ನೆಲೆ ಏನು?

ದಯಾಮರಣಕ್ಕೆ ಹೋರಾಟ ನಡೆಸುವ ಮೂಲಕ ದಯಾಮರಣ ಹೋರಾಟಗಾರ್ತಿ ಅಂತಲೇ ನಿವೃತ್ತ ಶಿಕ್ಷಕಿ ಕರಿಬಸಮ್ಮ ಹೆಸರಾಗಿದ್ದಾರೆ. ತಮ್ಮ ನಿವೃತ್ತಿ ವೇತನದ (ಪಿಂಚಣಿ) ಹಣ ಹಾಗೂ ಸ್ವಂತ ಮನೆಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ₹10 ಲಕ್ಷವನ್ನು ವೀರಯೋಧರ ಕಲ್ಯಾಣಕ್ಕಾಗಿ ನೀಡಿರುವುದು ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ಭಾರತ್‌ ಕೆ ವೀರ್‌ಗೆ ತಲುಪಿಸುವ ಭರವಸೆ

ಈ ಮೊತ್ತವನ್ನು ಕೇಂದ್ರ ಸರ್ಕಾರದ ಅಧಿಕೃತ ನಿಧಿಯಾದ ‘ಭಾರತ್ ಕೆ ವೀರ್’ ಗೆ ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ವೇಳೆ ಕರಿಬಸಮ್ಮ ಅವರ ಹಳೆಯ ವಿದ್ಯಾರ್ಥಿ, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ। ಎ.ಎಚ್.ಶಿವಯೋಗಿಸ್ವಾಮಿ ಇದ್ದರು.