ಮಂಗಳೂರು(ಫೆ.13): ಕೊರೋನಾ ಭೀತಿಯಿಂದ ಚೀನಾದ ಡ್ರೀಮ್‌ ವಲ್ಡ್‌ರ್‍ ಪ್ರವಾಸಿ ಹಡಗಿನಲ್ಲಿ ಹಾಂಗ್‌ಕಾಂಗ್‌ನಲ್ಲಿ ಸಿಲುಕಿದ್ದ ಕಾರಣ ಮುಂದೂಡಿಕೆಯಾಗಿದ್ದ ಕುಂಪಲದ ಗೌರವ್‌ ವಿವಾಹ ಸಮಾರಂಭ ಫೆ. 26ರಂದು ಸಂಜೆ 6.45ಕ್ಕೆ ಸಂತ ಸೆಬೆಸ್ತಿಯನ್ನರ ಹಾಲ್‌ನಲ್ಲಿ ಜರಗಲಿದೆ ಎಂದು ಕುಟುಂಬದ ಸದಸ್ಯರು ಬುಧವಾರ ನಿಶ್ಚಯಿಸಿದ್ದಾರೆ.

ಕುಂಪಲದ ಗೌರವ್‌ ಫೆ.11 ರಂದು ಮಧ್ಯಾಹ್ನ 1.45ರ ವೇಳೆಗೆ ತಾಯ್ನಾಡಿಗೆ ವಾಪಾಸಾಗಿದ್ದು, ಹಾಂಗ್‌ ಕಾಂಗ್‌ ನಿಂದ ನೇರ ಮುಂಬೈಗೆ ಬಂದಿಳಿದ ಗೌರವ್‌ ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ವೇಳೆ ತಲುಪಿ ಸಂಜೆ ಕುಂಪಲದ ಮನೆಗೆ ಆಗಮಿಸಿದ್ದಾರೆ.

ಕೊರೋನಾ ವೈರಸ್‌ ಭೀತಿ: ನಿಶ್ಚಯಗೊಂಡಿದ್ದ ಮದುವೆ ರದ್ದು

ವಿವಾಹ ಸಮಾರಂಭಕ್ಕೆ ಬೆಂದೂರ್‌ವೆಲ್‌ ಹಾಲ್‌ನವರು ಸಹಕರಿಸಿದ ಹಿನ್ನೆಲೆಯಲ್ಲಿ ಫೆ.26ರಂದು ಸಂಜೆ ವೇಳೆ ವಿವಾಹ ಸಮಾರಂಭವನ್ನು ಆಯೋಜಿಸಲಾಗಿದೆ. ಇದಕ್ಕೆ ವಧುವಿನ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮನೆಮಂದಿ ಪ್ರತಿಕ್ರಿಯಿಸಿದ್ದಾರೆ.

ಹಡಗಿನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ

ಮಂಗಳೂರು: ಕರೊನಾ ಭೀತಿಯಿಂದ ಹಾಂಕಾಂಗ್‌ನಲ್ಲಿ ತಡೆಹಿಡಿಯಲ್ಪಟ್ಟಚೀನಾದ ಡ್ರೀಮ್‌ ವಲ್ಡ್‌ರ್‍ ಹಡಗಿನಲ್ಲಿದ್ದ ಮಂಗಳೂರು ಹಾಗೂ ಕಾಸರಗೋಡಿನ ಇಬ್ಬರು ಸಿಬ್ಬಂದಿ ಒಂದು ವಾರ ವಿಳಂಬವಾಗಿ ಕೊನೆಗೂ ಮಂಗಳವಾರ ತವರಿಗೆ ತಲುಪಿದ್ದಾರೆ.

ಹಡಗಿನ ಒಳಗಿನ ಬದುಕು ಸಾಮಾನ್ಯವಾಗಿತ್ತು. ಪ್ರಯಾಣಿಕರು ಹಡಗಿನಲ್ಲಿ ಇದ್ದಷ್ಟುಅವಧಿ ಖುಷಿಯಾಗಿರುವಂತೆ ನೋಡಿಕೊಂಡಿದ್ದೇವೆ. ಇತರ ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರವನ್ನು ನಾವು ಸಿಬ್ಬಂದಿ ಹೊಂದಿಲ್ಲ ಎಂದು ಮಂಗಳೂರಿನ ಮನೆ ತಲುಪಿದ ಕುಂಪಲ ನಿವಾಸಿ ಗೌರವ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕೊರೋನಾ ಎಫೆಕ್ಟ್: ವರ ಇಲ್ಲದೆ ನಡೀತು ರಿಸೆಪ್ಷನ್‌!

ಹಡಗಿನಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್‌ ಎಂದು ಬಂದಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಭಾನುವಾರವೇ ಬಿಡುಗಡೆ ಮಾಡಲಾಗಿತ್ತು. ಆದರೆ ಸಿಬ್ಬಂದಿಗೆ ಸೋಮವಾರ ಬಿಡುಗಡೆಯಾಗಲು ಸಾಧ್ಯವಾಗಿದೆ.

ಹಾಂಕಾಂಗ್‌ನಿಂದ ಮುಂಬೈ ಮತ್ತು ಅಲ್ಲಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಕ್ಷಣ ಸಂಪರ್ಕ ವಿಮಾನಗಳು ದೊರೆತಿರುವ ಕಾರಣ ಒಂದೇ ದಿನದಲ್ಲಿ ಹಾಂಕಾಂಗ್‌ನಿಂದ ಮಂಗಳೂರು ತಲುಪಲು ಸಾಧ್ಯವಾಗಿದೆ ಎಂದವರ ಸಂಬಂಧಿ ಗಣೇಶ್‌ ತಿಳಿಸಿದ್ದಾರೆ. ಹಡಗಿನಲ್ಲಿದ್ದ ಕಾಸರಗೋಡು ಜಿಲ್ಲೆಯ ಯುವಕ ಕೂಡ ಮಧ್ಯಾಹ್ನ ಮನೆ ತಲುಪಿದ ಬಗ್ಗೆ ಮನೆ ಮಂದಿ ತಿಳಿಸಿದ್ದಾರೆ.