Asianet Suvarna News Asianet Suvarna News

Norovirus | ಕೇರಳದಲ್ಲಿ ಡೇಂಜರಸ್ ನ್ಯೂರೊ ವೈರಸ್ ಪತ್ತೆ : ಗಡಿಯಲ್ಲಿ ಕಟ್ಟೆಚ್ಚರ

  • ಕೇರಳದ ವೈನಾಡಿನಲ್ಲಿ ನ್ಯೂರೋ ವೈರಸ್ ಪತ್ತೆ
  • ಚಾಮರಾಜನಗರ ಜಿಲ್ಲೆ ಗಡಿಯಲ್ಲಿ ಕಟ್ಟೆಚ್ಚರ 
Dangerous neuro virus detection in Kerala Strict action in chamarajanagar Border snr
Author
Bengaluru, First Published Nov 21, 2021, 1:48 PM IST

ಚಾಮರಾಜನಗರ (ನ.21): ಕೇರಳದ (Kerala) ವೈನಾಡಿನಲ್ಲಿ ನ್ಯೂರೋ ವೈರಸ್ (neuro virus) ಪತ್ತೆಯಾಗಿದ್ದು,  ಚಾಮರಾಜನಗರ (Chamarajanagar) ಜಿಲ್ಲೆ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.  ಬಂಡೀಪುರದ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಪ್ರಯಾಣಿಕರ ತಪಾಸಣೆ  ಮಾಡಲಾಗುತ್ತಿದೆ.

ವಾಂತಿ, ಭೇದಿ, ಹೊಟ್ಟೆ ನೋವು ಲಕ್ಷಣ ಇರುವ ಪ್ರಯಾಣಿಕರ ಚಿಕಿತ್ಸೆಗೆ (Treatment) ವ್ಯವಸ್ಥೆ ಮಾಡಲಾಗುತ್ತಿದೆ. ಗಡಿ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (Primary Health Centre) 24 ಚಿಕಿತ್ಸಾ ಸೌಲಭ್ಯಕ್ಕೆ ಡಿಎಚ್ಓ (DHO) ಸೂಚನೆ. ಗುಂಡ್ಲು ಪೇಟೆ ಪಟ್ಟಣದ ಮಾರುಕಟ್ಟೆ ಬೀದಿಗಳಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ವಾಂತಿ ಭೇದಿ ಹೊಟ್ಟೆ ನೋವಿನ ಲಕ್ಷಣವಿದ್ದಲ್ಲಿ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. 

ವಿದೇಶದಿಂದ ಬರುವವರಿಗೆ ಹೊಸ ಕೋವಿಡ್ ರೂಲ್ಸ್ :  ಅನೇಕ ದೇಶಗಳಲ್ಲಿ ಕೊರೋನಾ(Coronavirus) ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶ ಗಳಿಂದ (Foreign) ವಿಮಾನ ನಿಲ್ದಾಣ(Airport) ಹಾಗೂ ಬಂದರು(Port) ಮೂಲಕ ರಾಜ್ಯಕ್ಕೆ(Karnataka) ಆಗಮಿಸುವ ಪ್ರಯಾಣಿಕರಿಗೆ ಕೊರೋನಾ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು, ಎ-ಕೆಟಗರಿಯಲ್ಲಿರುವ 99 ದೇಶಗಳಿಂದ ಬರುವವರಿಗೆ ಎರಡೂ ಡೋಸ್‌ ಲಸಿಕೆ ಪಡೆದಿದ್ದರೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.

ಹೆಚ್ಚು ಅಪಾಯಕಾರಿ ಎಂದು ಗುರುತಿಸಿರುವ ಯೂರೋಪ್‌ ರಾಷ್ಟ್ರಗಳು(European countries), ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾದೇಶ, ಬೊಟ್ಸಾವನಾ, ಚೀನಾ, ಮಾರಿಷಸ್‌, ನ್ಯೂಜಿಲೆಂಡ್‌ ದೇಶಗಳಿಂದ ಬರುವವರು ಆಗಮಿಸುವ ಮೊದಲೂ 72 ಗಂಟೆಗಳಿಗಿಂತ ಹಳೆಯ ಆರ್‌ಟಿ-ಪಿಸಿಆರ್‌(RTPCR) ನೆಗೆಟಿವ್‌ ವರದಿ ಅಪ್‌ಲೋಡ್‌ ಮಾಡಬೇಕು. ಜತೆಗೆ ರಾಜ್ಯಕ್ಕೆ ಆಗಮಿಸಿದ ಬಳಿಕವೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್‌ ಬಂದರೂ 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ(Home Quarantine) ಒಳಪಡಬೇಕು. 8ನೇ ದಿನ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕು.

ಭಾರತದ(India) ಜೊತೆಗೆ ಲಸಿಕೆ ಒಡಂಬಡಿಕೆ ಮಾಡಿಕೊಂಡಿರುವ ದೇಶಗಳಿಗೆ ಕೆಲ ವಿನಾಯಿತಿಗಳನ್ನು ನೀಡಲಾಗಿದೆ. ಎ-ಕೆಟಗರಿಯಲ್ಲಿದ್ದ ಇಂತಹ ದೇಶಗಳ ಪಟ್ಟಿಯನ್ನು 11 ರಿಂದ 99ಕ್ಕೆ ಏರಿಕೆ ಮಾಡಲಾಗಿದೆ. ಸಿಂಗಾಪೂರ್‌ ಹಾಗೂ ಜಿಂಬಾಂಬ್ವೆ ದೇಶಗಳನ್ನು ಹೈ-ರಿಸ್ಕ್‌ ಪಟ್ಟಿಯಿಂದ ತೆಗೆದು ಎ-ಕೆಟಗರಿಗೆ ಸೇರಿಸಲಾಗಿದೆ.

ಇಸ್ರೇಲ್‌, ಆಸ್ಪ್ರೇಲಿಯಾ, ಫ್ರಾನ್ಸ್‌, ಈಜಿಪ್ಟ್‌ ಸೇರಿದಂತೆ 99 ದೇಶಗಳಿಂದ ಬರುವವರು ಡಬ್ಲ್ಯೂಎಚ್‌ಒ ಅನುಮೋದನೆ ಪಡೆದಿರುವ ಎರಡೂ ಡೋಸ್‌ ಲಸಿಕೆ(Vaccine) ಪಡೆದಿದ್ದರೆ ಕಡ್ಡಾಯ ಹೋಂ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವಿಲ್ಲ. ಇವರು 72 ಗಂಟೆ ಹಳೆಯದಲ್ಲದ ನೆಗೆಟಿವ್‌ ವರದಿ ನೀಡಿ ಸ್ವಯಂ ನಿಗಾದಲ್ಲಿದ್ದಾರೆ ಸಾಕು ಎಂದು ಸ್ಪಷ್ಟಪಡಿಸಲಾಗಿದೆ.

ಉಳಿದಂತೆ ಲಸಿಕೆ ಪಡೆಯದ ಹಾಗೂ ಒಂದು ಡೋಸ್‌ ಮಾತ್ರ ಪಡೆದಿರುವವರು ಏರ್‌ಪೋರ್ಟ್‌ಗೆ ಬಂದ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ಬಳಿಕ ಬಳಿಕ 7 ದಿನ ಹೋಂ ಕ್ವಾರಂಟೈನ್‌ಲ್ಲಿದ್ದು ಎಂಟನೇ ದಿನ ಮರು ಪರೀಕ್ಷೆಗೆ ಒಳಪಡಬೇಕು. ಈ ವೇಳೆ ನೆಗೆಟಿವ್‌ ಬಂದರೂ ಮತ್ತೆ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ತಿಳಿಸಲಾಗಿದೆ.

ದೇಶಕ್ಕೆ ಆಗಮಿಸುವ ಎಲ್ಲ ದೇಶಗಳ ಪ್ರಯಾಣಿಕರು ‘ಏರ್‌ ಸುವಿಧ’(Air Suvidha) ಪೋರ್ಟಲ್‌ನಲ್ಲಿ 72 ಗಂಟೆಗಿಂತ ಹಳೆಯದಲ್ಲದ ನೆಗೆಟಿವ್‌ ವರದಿ(Negative Report) ಅಪ್‌ಲೋಡ್‌ ಮಾಡಬೇಕು. ಜತೆಗೆ ನೆಲದ ಕಾನೂನಿಗೆ ತಕ್ಕಂತೆ ನಡೆದುಕೊಳ್ಳುವುದಾಗಿ ಸ್ವಯಂ ಘೋಷಣಾ ಪತ್ರ ಅಪ್‌ಲೋಡ್‌ ಮಾಡಬೇಕು. ರಾಜ್ಯಕ್ಕೆ ಆಗಮಿಸುವ ವೇಳೆ ಥರ್ಮಲ್‌ ಸ್ಕ್ರೀನಿಂಗ್‌ನಲ್ಲಿ ರೋಗ ಲಕ್ಷಣಗಳು ಪತ್ತೆಯಾದರೆ ಯಾವ ದೇಶದಿಂದ ಬಂದಿದ್ದರೂ ಪರೀಕ್ಷೆ ಮಾಡಿ ಕ್ವಾರಂಟೈನ್‌ ವಿಧಿಸಲಾಗುವುದು. ರೋಗ ಲಕ್ಷಣ ಇಲ್ಲದಿದ್ದರೆ ಸ್ವಯಂ ನಿಗಾದಲ್ಲಿರಲು ಸೂಚಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ.

Follow Us:
Download App:
  • android
  • ios