Mud Therapy : ಅಂಗಾಲ ಮೇಲೆ ಮಣ್ಣಿನ ಚಿಕಿತ್ಸೆ, ಮಾಯವಾಗೋದು ಹಲವು ಕಾಯಿಲೆ
ಆಯುರ್ವೇದ (Ayurveda) ನಂಬಿಕೆಗಳ ಪ್ರಕಾರ, ನಮ್ಮ ದೇಹ ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶ ಎಂಬ ಐದು ಅಗತ್ಯ ಅಂಶಗಳಿಂದ ಕೂಡಿದೆ. ಮಣ್ಣು, ಜೇಡಿಮಣ್ಣು, ದೇಹವನ್ನು ಒಳಗಿನಿಂದ ಗುಣಪಡಿಸುವ ಮತ್ತು ಯಾವುದೇ ಅಸಮತೋಲನವನ್ನು ಸರಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ದೇಹದ ಅನೇಕ ಸಮಸ್ಯೆಗಳು ದೂರವಾಗುತ್ತವೆ.

ದೇಹದಲ್ಲಿನ ಕೆಟ್ಟ ವಿಷದ ವಿರುದ್ಧ ಹೋರಾಡುವ ಬಹಳಷ್ಟು ಪ್ರಮುಖ ಖನಿಜಗಳನ್ನು ಮಣ್ಣು ಒಳಗೊಂಡಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದರಿಂದ,ಅನೇಕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು ಮತ್ತು ಕಾಯಿಲೆಗಳನ್ನು ಸಹ ಗುಣಪಡಿಸಬಹುದು. ಮಣ್ಣಿನ ಥೆರಪಿಯಿಂದ (mud therapy) ಏನೆಲ್ಲಾ ಪ್ರಯೋಜನಗಳಿವೆ ನೋಡಿ..
ದೇಹದಲ್ಲಿ ಹೆಚ್ಚಿದ ವಿಷವು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಮೆದುಳು, ಚರ್ಮ ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತದೆ. ಈ ವಿಷಗಳನ್ನು ತೆಗೆದು ಹಾಕಲು ದೇಹದ ನಿರ್ವಿಷೀಕರಣವು ಬಹಳ ಮುಖ್ಯ. ಆದ್ದರಿಂದ ದೇಹವನ್ನು ನಿರ್ವಿಷಗೊಳಿಸಲು ಉತ್ತಮ ಮಾರ್ಗವನ್ನು ಹೇಳುತ್ತಿದ್ದೇವೆ. ಅಂಗಾಲುಗಳ ಮೇಲೆ ಒಂದು ನಿರ್ದಿಷ್ಟ ರೀತಿಯ ಮಣ್ಣನ್ನು ಹಚ್ಚುವುದರಿಂದ ನೀವು ದೇಹವನ್ನು ನಿರ್ವಿಷಗೊಳಿಸಬಹುದು. ಅಷ್ಟೇ ಅಲ್ಲ, ಅದರಿಂದ ನಿಮಗೆ 3 ಅದ್ಭುತ ಪ್ರಯೋಜನಗಳು ಸಿಗುತ್ತದೆ. ಅದರ ಬಗ್ಗೆ ನೋಡೋಣ.
ಅಂಗಾಲುಗಳ ಮೇಲೆ ಯಾವ ಮಣ್ಣನ್ನು ಹಚ್ಚಬೇಕು?
ಅಂಗಾಲ ಮೇಲೆ ಹಚ್ಚುವ ಮಡ್ ಫೂಟ್ ಪ್ಯಾಕ್ (mud foot pack) . ಈ ಮಣ್ಣು ಒಂದು ವಿಶೇಷ ರೀತಿಯದ್ದಾಗಿದೆ, ಇದನ್ನು ಆಳವಾದ ಜಲಾಶಯ ಅಥವಾ ಸರೋವರದ ನೆಲದಿಂದ ಹೊರತೆಗೆಯಲಾಗುತ್ತದೆ ಮತ್ತು ನಂತರ ಸಂಸ್ಕರಿಸಲಾಗುತ್ತದೆ. ಈ ಮಣ್ಣಿನಲ್ಲಿ ಅಂಗಾಲುಗಳ ಮೂಲಕ ದೇಹದಿಂದ ವಿಷವನ್ನು ತೆಗೆದುಹಾಕುವ ಗುಣಗಳು ಮತ್ತು ಅಂಶಗಳು ಕಂಡುಬರುತ್ತವೆ.
ಮಡ್ ಫೂಟ್ ಪ್ಯಾಕ್ ಹಚ್ಚುವುದು ಹೇಗೆ?
ಮಡ್ ಫೂಟ್ ಪ್ಯಾಕ್ ಮಾರುಕಟ್ಟೆಯಿಂದ ಸುಲಭವಾಗಿ ಖರೀದಿಸಬಹುದು ಅಥವಾ ಮಡ್ ಫೂಟ್ ಪ್ಯಾಕ್ ಗಳನ್ನು ಪಾದಗಳ ಅಂಗಾಲುಗಳಿಗೆ ಮಾತ್ರ ಹಚ್ಚಬಹುದು. ಮೊದಲು ಸೋಪಿನಿಂದ ಅಂಗಾಲುಗಳನ್ನು ತೊಳೆಯಿರಿ. ನಂತರ ಮಡ್ ಫೂಟ್ ಪ್ಯಾಕ್ ನಿಂದ ಮಣ್ಣನ್ನು ತೆಗೆದು ಅಂಗಾಲ ಮೇಲೆ ಚೆನ್ನಾಗಿ ಹಚ್ಚಿ. ನಂತರ ಕನಿಷ್ಠ 30 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಸ್ವಚ್ಛ ನೀರಿನಿಂದ ಅಂಗಾಲುಗಳನ್ನು ಸ್ವಚ್ಛಗೊಳಿಸಿ.
ಮಡ್ ಫೂಟ್ ಪ್ಯಾಕ್ ಸಿಗದಿದ್ದರೆ ಮನೆಯಲ್ಲಿ ಮುಲ್ತಾನಿ ಮಿಟ್ಟಿಯನ್ನೂ (Multani Mitti) ಬಳಸಬಹುದು. ಮುಲ್ತಾನಿ ಮಿಟ್ಟಿ ಕೂಡ ಈ ಎಲ್ಲಾ ಪ್ರಯೋಜನಗಳನ್ನು ನೀಡುತ್ತದೆ. ಮುಲ್ತಾನಿ ಮಿಟ್ಟಿಯನ್ನು ಬಳಸಲು ಇಷ್ಟವಿಲ್ಲದಿದ್ದರೆ, ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ಶೀಟ್ ಮಾಸ್ಕ್ ಗಳನ್ನು ಸಹ ಬಳಸಬಹುದು. ಇದು ದೇಹವನ್ನು ನಿರ್ವಿಷೀಕರಣಗೊಳಿಸಲು ಸಹಾಯ ಮಾಡುತ್ತದೆ.
ಮಣ್ಣಿನ ಫುಟ್ ಪ್ಯಾಕ್ ಅನ್ನು ಹಚ್ಚುವುದರಿಂದ ಉಂಟಾಗುವ 3 ಅದ್ಭುತ ಪ್ರಯೋಜನಗಳು
ಹೊಳೆಯುವ ಚರ್ಮ (shiny skin): ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರತೆಗೆದಾಗ, ಅದು ಮೊದಲು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮ ಹೊಳೆಯಲು ಪ್ರಾರಂಭಿಸುತ್ತದೆ ಮತ್ತು ಮೊಡವೆ, ಕಪ್ಪು ಕಲೆಗಳು, ಸುಕ್ಕುಗಳು ಮುಂತಾದ ಸಮಸ್ಯೆಗಳು ಕಣ್ಮರೆಯಾಗಲು ಪ್ರಾರಂಭಿಸುತ್ತವೆ.
ಶಾಂತ ಮನಸ್ಸು (peaceful mind): ಮಣ್ಣು ದೇಹದಿಂದ ವಿಷ ಮತ್ತು ಹೆಚ್ಚುವರಿ ಶಾಖವನ್ನು ಅಂಗಾಲ ಮೂಲಕ ತೆಗೆದು ಹಾಕುತ್ತದೆ. ಇದು ಮೆದುಳಿನ ಮೇಲೆ ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ದಿನವಿಡೀ ನೀವು ಶಾಂತ ಮನಸ್ಸಿನಿಂದ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.
ಪಾದಗಳ ವಾಸನೆಯನ್ನು ನಿವಾರಿಸಿ (get rid from smelly feet) : ಬೆವರುವುದು ಅಥವಾ ಹೆಚ್ಚು ಕಾಲ ಅಂಗಾಲ ಮೇಲೆ ತೇವಾಂಶದಿಂದ ಇರುವುದು ದುರ್ವಾಸನೆಯ ಪಾದದ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದರೆ ಮಣ್ಣಿನ ಪ್ಯಾಕ್ ವಿಷವನ್ನು ತೆಗೆದುಹಾಕುತ್ತದೆ. ಬೆವರುವ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಪಾದಗಳ ವಾಸನೆಯನ್ನು ನಿವಾರಿಸುತ್ತದೆ. ಅದೇ ಸಮಯದಲ್ಲಿ, ಅಂಗಾಲ ಮೃದು ಮತ್ತು ಸುಂದರವಾಗುತ್ತವೆ.