Asianet Suvarna News Asianet Suvarna News

Mysuru: ಕೇಂದ್ರ ಸರ್ಕಾರದ ವಿರುದ್ಧ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಕೇಂದ್ರ ಸರ್ಕಾರವು ನ.26ರ ಸಂವಿಧಾನ ಸಮರ್ಪಣಾ ದಿನವನ್ನು ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ಚಾತುರ್ವರ್ಣ ಮತ್ತು ತಾರತಮ್ಯದ ಜಾತಿ ಪದ್ಧತಿಯ ವೈಭವೀಕರಣ ದಿವನ್ನಾಗಿ ಬದಲಾಯಿಸಲು ಹೊರಟಿದೆ ಎಂದು ಆರೋಪಿಸಿ ಹಾಗೂ ಸಂವಿಧಾನ ವಿರೋಧಿ ಸೂಚನಾ ಪತ್ರ ಹರಿದು ಹಾಕುವ ಮೂಲಕ ದಲಿತ ಸಂಘರ್ಷ ಸಮಿತಿಯವರು ಮೈಸೂರಿನ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.

Dalit Sangharsha Committee protest against Central Govt at Mysuru gvd
Author
First Published Nov 27, 2022, 7:22 PM IST

ಮೈಸೂರು (ನ.27): ಕೇಂದ್ರ ಸರ್ಕಾರವು ನ.26ರ ಸಂವಿಧಾನ ಸಮರ್ಪಣಾ ದಿನವನ್ನು ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ಚಾತುರ್ವರ್ಣ ಮತ್ತು ತಾರತಮ್ಯದ ಜಾತಿ ಪದ್ಧತಿಯ ವೈಭವೀಕರಣ ದಿವನ್ನಾಗಿ ಬದಲಾಯಿಸಲು ಹೊರಟಿದೆ ಎಂದು ಆರೋಪಿಸಿ ಹಾಗೂ ಸಂವಿಧಾನ ವಿರೋಧಿ ಸೂಚನಾ ಪತ್ರ ಹರಿದು ಹಾಕುವ ಮೂಲಕ ದಲಿತ ಸಂಘರ್ಷ ಸಮಿತಿಯವರು ಮೈಸೂರಿನ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.

ಕೇಂದ್ರ ಸರ್ಕಾರವು ನ.26 ರಂದು ಭಾರತ ಪ್ರಜಾತಂತ್ರದ ಜನನಿ ಎಂಬ ಹೆಸರಿನಲ್ಲಿ ದೇಶಾದ್ಯಂತ ಎಲ್ಲಾ ರಾಜ್ಯ ಸರ್ಕಾರಗಳು, ವಿಶ್ವವಿದ್ಯಾನಿಲಯಗಳು ಹಾಗೂ ಕೇಂದ್ರ ಕಚೇರಿಗಳು ಆಚರಿಸಬೇಕೆಂದು ಸೂಚನೆ ಹೊರಡಿಸಿದೆ. ಹೀಗೆ ನೀಡಿರುವ ಸೂಚನೆಯಲ್ಲಿ ಒಮ್ಮೆಯೂ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ನೆನೆಯದೆ ಅವಮಾನಿಸಿದೆ ಎಂದು ಅವರು ಕಿಡಿಕಾರಿದರು.

ಮೈಸೂರು: ಗುಂಬಜ್ ಮಾದರಿ ಬಸ್ ಶೆಲ್ಟರ್ ವಿವಾದ ಅಂತ್ಯ, ರಾಮದಾಸ್‌ಗೆ ಪ್ರತಾಪ್‌ ಸಿಂಹ ಧನ್ಯವಾದ

ಅಲ್ಲದೆ, ವೇದಗಳ ಕಾಲದಲ್ಲಿಯೇ ಪ್ರಜಾಪ್ರಭುತ್ವವಿತ್ತು. ಗ್ರಾಮಗಳಲ್ಲಿದ್ದ ಪಂಚಾಯಿತಿ ಹಾಗೂ ಖಾಪ ರೂಪದಲ್ಲಿ ಮುಂದುವರಿಯಿತು. ಭಗವದ್ಗೀತೆಯು ಪ್ರಜಾತಂತ್ರದ ಭಾಗವಾಗಿತ್ತು. ಗ್ರೀಕ್‌ ಮತ್ತು ರೋಮನ್‌ ಪ್ರಜಾಪ್ರಭುತ್ವದಂತೆ ಭಾರತದಲ್ಲಿ ಹುಟ್ಟಿನ ಆಧಾರದಲ್ಲಿ ಜ್ಞಾನ, ಸಂಪತ್ತು ಮತ್ತು ರಾಜ್ಯಾಧಿಕಾರಗಳನ್ನು ಒಂದೆಡೆ ಹಿಡಿದಿಟ್ಟುಕೊಂಡು ನಿರಂಕುಶ ಸಾಮ್ರಾಜ್ಯ ರೂಪಗೊಂಡಿರಲಿಲ್ಲ. ಹೀಗೆ ಒಂದರ ಹಿಂದೆ ಒಂದರಂತೆ ಸುಳ್ಳಿನ ಸರಮಾಲೆಯನ್ನೇ ಪೋಣಿಸಿದೆ. ಈ ಮೂಲಕ ಚಾತುರ್ವರ್ಣ ಪದ್ಧತಿ, ಜಾತಿ ಪದ್ಧತಿಯನ್ನು ಶ್ರೇಷ್ಠವೆಂದು ಪರಿಗಣಿಸುವ ಆರ್‌ಎಸ್‌ಎಸ್‌ ವಾದವನ್ನು ಸಂವಿಧಾನ ಸಮರ್ಪಣ ದಿನದಂದೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ಆಚರಿಸಲು ಕರೆ ಕೊಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಭಾರತದ ಪ್ರಜಾಪಭುತ್ವದ ಕಲ್ಪನೆಯ ಮೂಲವನ್ನು ಭೌದ್ಧ ಧರ್ಮದಲ್ಲಿ ಕಂಡಿದ್ದರು. ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವ ಪರಿಕಲ್ಪನೆಗಳನ್ನು ನಾನು ಬೌದ್ಧ ಧಮ್ಮದಿಂದ ಪಡೆದುಕೊಂಡಿದ್ದೇನೆ ಎಂದಿದ್ದರು. ಬೌದ್ಧ ಬಿಕ್ಕು ಸಂಘಗಳಲ್ಲಿ ಪ್ರಜಾಪ್ರಭುತ್ವದ ಬೇರುಗಳಿವೆ ಎಂದು ಗುರುತಿಸಿದ್ದರು.

ವಿಪರ್ಯಾಸವೆಂದರೆ ಪ್ರಧಾನಿ ಮೋದಿ ಅವರ ಸೆಕ್ರೆಟೇರಿಯಟ್‌ ಹೊರಡಿಸಿರುವ ಟಿಪ್ಪಣಿಯಲ್ಲಿ ಬುದ್ಧ ಗುರುವಿನ ಬಗ್ಗೆ ಪ್ರಸ್ತಾಪವೇ ಇಲ್ಲ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಬದಲಾಗಿ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಸಂವಿಧಾನವನ್ನು ಪ್ರಶ್ನಿಸುತ್ತಾ, ಅದರಲ್ಲಿ ಬ್ರಾಹ್ಮಣಶಾಹಿ ಅಂಶಗಳಿಲ್ಲವೆಂದು ಯಾವುದನ್ನು ಪ್ರತಿಪಾದಿಸಿದ್ದರೋ ಆ ಬ್ರಾಹ್ಮಣ ಶಾಹಿ ಅಂಶಗಳನ್ನೇ ಇಂದು ಸಂವಿಧಾನದೊಳಗೆ ಸೇರಿಸುವ ಕೆಲಸವನ್ನು ಈ ಟಿಪ್ಪಣಿ ಮಾಡಿದೆ ಎಂದು ಅವರು ಆರೋಪಿಸಿದರು.

Ticket Fight: ಘಟಾನುಘಟಿಗಳ ಪೈಪೋಟಿಗೆ ಸಜ್ಜಾಗುತ್ತಿದೆ ಮೈಸೂರು ಜಿಲ್ಲೆ

ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್‌, ಚುಂಚನಳ್ಳಿ ಮಲ್ಲೇಶ್‌, ಬನ್ನಹಳ್ಳಿ ಸೋಮಣ್ಣ, ಭುಗತಗಳ್ಳಿ ಕೆ. ಮಣಿಯಯ್ಯ, ಕಾರ್ಯ ಬಸವಣ್ಣ, ಮುಖಂಡರಾದ ಕಲ್ಲಹಳ್ಳಿ ಕುಮಾರ್‌, ಶಂಕರಪುರ ಮಂಜು, ಕುಮಾರಸ್ವಾಮಿ, ರಾಜು, ಸೋಮಶೇಖರ್‌, ಮಂಜು, ವರದಯ್ಯ, ನಿರಂಜನರಾಧ್ಯ, ನಾರಾಯಣ್‌, ರಾಜು, ಸುನಿತಾ, ವಸಂತ, ಅಪ್ಸರ್‌, ಮಹದೇವಸ್ವಾಮಿ, ಪ್ರೊ. ಪಂಡಿತಾರಾಧ್ಯ, ಬಸವರಾಜು ಮೊದಲಾದವರು ಇದ್ದರು.

Follow Us:
Download App:
  • android
  • ios