ಮೈಸೂರು: ಗುಂಬಜ್ ಮಾದರಿ ಬಸ್ ಶೆಲ್ಟರ್ ವಿವಾದ ಅಂತ್ಯ, ರಾಮದಾಸ್‌ಗೆ ಪ್ರತಾಪ್‌ ಸಿಂಹ ಧನ್ಯವಾದ

ಗುಂಬಜ್ ಮಾದರಿ ಬಸ್ ಶೆಲ್ಟರ್ ನಿರ್ಮಾಣ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್‌.ಎ.ರಾಮ್‌ದಾಸ್ ನಡುವೆ ಏರ್ಪಟ್ಟಿದ್ದ ಶೀಥಲ ಸಮರ 

Pratap Singh thanks to SA Ramdas For Gumbaj Model Bus Shelter Dispute End in Mysuru grg

ಮೈಸೂರು(ನ.27):  ನಗರದ ಗುಂಬಜ್ ಮಾದರಿ ಬಸ್ ಶೆಲ್ಟರ್ ನಿರ್ಮಾಣ ವಿವಾದಕ್ಕೆ ಶಾಸಕ ಎಸ್.ಎ.ರಾಮ್‌ದಾಸ ಅಂತ್ಯ ಹಾಡಿದ್ದಾರೆ. ಬಸ್ ಶೆಲ್ಟರ್ ಮೇಲಿದ್ದ ಮೂರು ಗೋಪುರಗಳ ಪೈಕಿ ಒಂದು ಗೋಪುರ ಉಳಿಸಿಕೊಂಡು, ಮತ್ತೆರಡು ಗೋಪುರಗಳನ್ನ ತೆರವುಗೊಳಿಸಲಾಗಿದೆ. 

ರಾತ್ರೋರಾತ್ರಿ ಬಸ್ ಶೆಲ್ಟರ್ ಮೇಲಿದ್ದ ಎರಡು ಗೋಪುರಗಳನ್ನ ಅಧಿಕಾರಿಗಳು ತೆರವು ಮಾಡಿದ್ದಾರೆ. ಮೈಸೂರು ಅರಮನೆ ಪರಂಪರೆಗಾಗಿ ಬಸ್ ಶೆಲ್ಟರ್ ಮಾಡಲಾಗುತ್ತಿತ್ತು. ಶಾಸಕರ ಅನುಧಾನದಲ್ಲಿ 12 ಬಸ್ ಶೆಲ್ಟರ್ ನಿರ್ಮಿಸಲಾಗುತ್ತಿತ್ತು. ವಿನಾಕಾರಣ ಧರ್ಮದ ಹೆಸರಿನಲ್ಲಿ ವಿವಾದ ಸೃಷ್ಟಿಸಲಾಗಿತ್ತು. ಇದು ಮುಂದೆ ವಿವಾದಿತ ಜಾಗ ಆಗಬಾರದು. ಇದಕ್ಕಾಗಿ ಬಸ್ ಶೆಲ್ಟರ್ ಮೇಲಿನ ಮಧ್ಯದ ಡೂಮ್ ಉಳಿಸಿಕೊಳ್ಳಲು ಒಪ್ಪಿಗೆ ಪಡೆಯಲಾಗಿದೆ. ಸಾರ್ವಜನಿಕರು ನನ್ನ ಅಭಿವೃದ್ಧಿ ಮಂತ್ರವನ್ನು ಅನ್ಯತಾ ಭಾವಿಸಬಾರದು ಅಂತ ಶಾಸಕ ಎಸ್.ಎ.ರಾಮ್‌ದಾಸ್. ಸ್ಪಷ್ಟನೆ ನೀಡಿದ್ದಾರೆ. 

 

ಗುಂಬಜ್‌ ಮೇಲೆ ಕಳಸ ಹಾಕಿದ್ದು ನಾನಾ, ನೀನಾ? ಪ್ರತಾಪ್‌ ಸಿಂಹ-ರಾಮದಾಸ್‌ ಶೀತಲ ಸಮರ!

ಗುಂಬಜ್ ಮಾದರಿ ಬಸ್ ಶೆಲ್ಟರ್ ನಿರ್ಮಾಣ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್‌.ಎ.ರಾಮ್‌ದಾಸ್ ನಡುವೆ ಶೀಥಲ ಸಮರ ಏರ್ಪಟ್ಟಿತ್ತು.

ಬಸ್ ಶೆಲ್ಟರ್ ಮೇಲಿದ್ದ ಎರಡು ಗೋಪುರಗಳ ತೆರವು ಮಾಡಿದ್ದಕ್ಕೆ ಶಾಸಕ ಎಸ್‌.ಎ.ರಾಮ್‌ದಾಸ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಧನ್ಯವಾದಗಳನ್ನ ತಿಳಿಸಿದ್ದಾರೆ.

ಈ ಸಂಬಂಧ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಪ್ರತಾಪ್‌ ಸಿಂಹ, ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು ಅಂತ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios