ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ: ಶಾಸಕ ಕೊತ್ತೂರು ಮಂಜುನಾಥ್‌

ಜಿಡ್ಡುಗಟ್ಟಿದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುವೇ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯನ್ನು ಜನಸ್ನೇಹಿಯಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದರೊಂದಿಗೆ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕುವುದಾಗಿ ಶಾಸಕ ಕೊತ್ತೂರು ಮಂಜುನಾಥ್‌ ತಿಳಿಸಿದರು. 

Curb the scourge of brokers in offices Says MLA Kothur Manjunath gvd

ಕೋಲಾರ (ಮೇ.31): ಜಿಡ್ಡುಗಟ್ಟಿದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುವೇ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯನ್ನು ಜನಸ್ನೇಹಿಯಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದರೊಂದಿಗೆ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕುವುದಾಗಿ ಶಾಸಕ ಕೊತ್ತೂರು ಮಂಜುನಾಥ್‌ ತಿಳಿಸಿದರು. ಶಾಸಕರಾದ ನಂತರ ಮೊದಲ ಬಾರಿಗೆ ನಗರದಲ್ಲಿನ ಕೋಲಾರಮ್ಮ ದೇವಾಲಯ, ಮಸೀದಿ, ಚಚ್‌ರ್‍ಗಳಿಗೆ ಅಭಿಮಾನಿಗಳೊಂದಿಗೆ ಭೇಟಿ ನೀಡಿದ ನಂತರ ನಗರ ಹೊರವಲಯದ ನಂದಿನಿ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಹಾಗು ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿ, ವಾರದಲ್ಲಿ 6 ದಿನ ಇಲ್ಲೇ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು.

ಗೆಲುವಿಗೆ ಸ್ರಮಿಸಿದವರಿಗೆ ಧನ್ಯವಾದ: ನಾನು ಯಾರ ಮೇಲೂ ದೂಷಣೆ ಮಾಡುವುದಿಲ್ಲ, ನಾನು ಮುಖಂಡ ಎಂದು ಭಾವಿಸಿಲ್ಲ ನಾನೂ ಒಬ್ಬ ಕಾರ್ಯಕರ್ತನಂತಿದ್ದು, ಜನರ ನಡುವೆ ಇದ್ದು ಕೆಲಸ ಮಾಡುವೆ. ನಾನು ಸೋಲುವೆ ಎಂದು ಹೇಳುತ್ತಿದ್ದರು, ಆದರೆ ಅದನ್ನೇ ನಾನು ಸವಾಲಾಗಿ ಸ್ವೀಕರಿಸಿದೆ, ನನ್ನ ಗೆಲುವಿಗೆ ಸಹಕಾರ ನೀಡಿದ ಸಿದ್ದರಾಮಯ್ಯ, ರಮೇಶ್‌ಕುಮಾರ್‌, ಶ್ರೀನಿವಾಸಗೌಡ, ಕೃಷ್ಣಬೈರೇಗೌಡ, ಸಿ.ಎಂ.ಮುನಿಯಪ್ಪ, ಅನಿಲ್‌ಕುಮಾರ್‌, ನಸೀರ್‌ ಅಹಮದ್‌ ಎಲ್ಲರಿಗೂ ಧನ್ಯವಾದ ಎಂದರು. ನಾಳೆಯಿಂದ ನಾಲ್ಕು ದಿನಗಳ ಕಾಲ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸುತ್ತೇನೆ. ನಂತರ 25 ಪಂಚಾಯಿತಿ ಸೇರಿದಂತೆ ನಗರದ 35 ವಾರ್ಡುಗಳನ್ನು ಅಧಿಕಾರಿಗಳ ಸಮೇತ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿ ಪ್ರತಿ ಗ್ರಾಮಕ್ಕೆ ಭೇಟಿ ನೀಡುವ ಕೆಲಸ ಮಾಡುತ್ತೇನೆ ಎಂದು ಕೊತ್ತೂರು ಹೇಳಿದರು.

ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ: ಸಚಿವ ಜಮೀರ್‌ ಅಹಮ್ಮದ್‌

2 ದಶಕ ಬಳಿಕ ಕಾಂಗ್ರೆಸ್‌ ಶಾಸಕ ಆಯ್ಕೆ: ವಿಧಾನಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಮಾತನಾಡಿ, ಕೋಲಾರ ಕ್ಷೇತ್ರದಲ್ಲಿ ಸ್ಥಳೀಯವಾದ ಹಲವು ತಪ್ಪುಗಳಿಂದ 20 ವರ್ಷಗಳಿಂದ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಿರಲಿಲ್ಲ, ಅದು ಕಾಂಗ್ರೆಸ್‌ ನವರ ತಪ್ಪುಗಳಿಂದಲೆ ಸೋಲಬೆಕಾಗಿತ್ತು, ಕಡೆ ಗಳಿಗೆಯಲ್ಲಿ ಈ ಕ್ಷೇತ್ರಕ್ಕೆ ಕೊತ್ತೂರು ಮಂಜುನಾಥ್‌ ಎಂಬ ಒಳ್ಳೆಯ ಅಭ್ಯರ್ಥಿಯನ್ನು ನೀಡಿದಕ್ಕಾಗಿ ಕಾಂಗ್ರೆಸ್‌ ನಿಂದ ಬೇಸತ್ತು ಹೊರ ಹೋದವರನ್ನೂ ನಿಷ್ಕಿ್ರಯೆ ಗೊಂಡಿದ್ದವರನ್ನೂ ಚುರುಕುಗೊಳಿಸಿ ಆದರೆ ಕೇವಲ 15 ದಿನಗಳಲ್ಲಿ ಪಕ್ಷವನ್ನು ಸಂಘಟಿಸಿ ಕೊತ್ತೂರು ಮಂಜುನಾಥ್‌ ಗೆಲುವು ಸಾಧಿಸಲು ಸಹಕರಿಸಿದ ಕಾರ್ಯಕರ್ತರಿಗೆ ಹಾಗು ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ಮೂಲ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ: ಶಾಸಕ ಬಾಲ​ಕೃ​ಷ್ಣ

ವಿಧಾನಪರಿಷತ್‌ ಸದಸ್ಯ ನಸೀರ್‌ ಅಹಮದ್‌ ಮಾತನಾಡಿ, ಇತಿಹಾಸದಲ್ಲಿ ಕೋಲಾರದಲ್ಲಿ14 ದಿನಗಳಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು ಹೆಮ್ಮೆ ವಿಷಯ, ನೂತನ ಶಾಸಕರು ತಾಲ್ಲೂಕಿನ ಅಭಿವೃದ್ದಿ ಜತೆಗೆ ಯಾರನ್ನು ಕಡೆಗಾಣಿಸದೇ ಎಲ್ಲಾ ಜಾತಿ,ಧರ್ಮದವರನ್ನು ಒಟ್ಟಾಗಿ ಕರೆದೊಯ್ಯು ಹೊಣೆಗಾರಿಕೆ ಕೊತ್ತೂರು ಮಂಜುನಾಥ್‌ ಮೇಲಿದ್ದು, ಅದನ್ನು ಅವರು ನಿಭಾಯಿಸುತ್ತಾರೆ, ಅವರ ಕೆಲಸಗಳಿಗೆ ನಾವು ಜತೆ ಇರುವುದಾಗಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮೇನಾರಾಯಣ, ಮುಖಂಡರಾದ ಚಂಜಿಮಲೆ ರಮೇಶ್‌, ನಂದಿನಿ ಪ್ರವೀಣ್‌, ದಯಾನಂದ್‌, ಅನ್ವರ್‌, ರಾಮಕೃಷ್ಣೇಗೌಡ, ಇಕ್ಬಾಲ್‌ ಅಹಮದ್‌, ನಗರಸಭಾ ಸದಸ್ಯ ಅಂಬರೀಶ್‌, ಅಬ್ದುಲ್‌ ಅಯೂಬ್‌, ಮುನಿಆಂಜಪ್ಪ, ಮೈಲಾಂಡಹಳ್ಳಿ ಮುರಳಿ, ಸೀಸಂದ್ರ ಗೋಪಾಲಗೌಡ, ಶ್ರೀಕೃಷ್ಣ, ವರದೇನಹಳ್ಳಿ ವೆಂಕಟೇಶ್‌, ರವಿರಮಸ್ವಾಮಿ, ಜನ್ನಪ್ಪನಹಳ್ಳಿ ನವೀನ್‌ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios