Asianet Suvarna News Asianet Suvarna News

ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ: ಸಚಿವ ಜಮೀರ್‌ ಅಹಮ್ಮದ್‌

ಅಭಿವೃದ್ಧಿಯೊಂದೇ ನಮ್ಮ ಸರ್ಕಾರದ ಗುರಿ, ಯಾವುದೇ ವಿವಾದಗಳಿಗೂ ಅವಕಾಶವಿಲ್ಲ ಎಂದು ವಸತಿ ಮತ್ತು ಅಲ್ಪಸಂಖ್ಯಾತ, ವಕ್ಫ್ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಹೇಳಿದರು. 

The development of the state is the aim of our government Says Minister Zameer Ahmed Khan gvd
Author
First Published May 31, 2023, 9:03 PM IST

ದಾಬಸ್‌ಪೇಟೆ (ಮೇ.31): ಅಭಿವೃದ್ಧಿಯೊಂದೇ ನಮ್ಮ ಸರ್ಕಾರದ ಗುರಿ, ಯಾವುದೇ ವಿವಾದಗಳಿಗೂ ಅವಕಾಶವಿಲ್ಲ ಎಂದು ವಸತಿ ಮತ್ತು ಅಲ್ಪಸಂಖ್ಯಾತ, ವಕ್ಫ್ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಹೇಳಿದರು. ಸೋಂಪುರ ಹೋಬಳಿಯ ಲಕ್ಕೂರಿನ ಮದರಸಾ ಕೇಂದ್ರಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರು ಮತ್ತು ಮುಸ್ಲಿಂ ಮುಖಂಡರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಪ್ರತಿಬಾರಿ ಮಂತ್ರಿಯಾದ ಸಂದರ್ಭದಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುತ್ತೇನೆ. ಇದೀಗ ಮತ್ತೆ ಮಂತ್ರಿಯಾಗಿದ್ದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. 2006ರಲ್ಲಿ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಿಗೆ ನಮಿಸಿ, ಅಧಿಕಾರ ನಡೆಸಿದೆ. ಮುಂದೆಯೂ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದು ಹೇಳಿದರು.

ಪಠ್ಯ ಕ್ರಮದ ಬದಲಾವಣೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನು ಪಠ್ಯಕ್ರಮದ ಬಗ್ಗೆ ಮಾತನಾಡುವುದಿಲ್ಲ, ಪಠ್ಯಕ್ರಮ ಕೇಸರಿಕರಣ ಬಿಜೆಪಿಯವರು ಮಾಡುತ್ತಾರೆ. ನಾವು ಅಭಿವೃದ್ಧಿ ಮಾಡುವುದಷ್ಟೆನಮ್ಮ ಕೆಲಸ. ಗ್ಯಾರಂಟಿ ಯೋಜನೆಗಳನ್ನು ಅದಷ್ಟು ಶೀಘ್ರವಾಗಿ ಜಾರಿಗೆ ತರುತ್ತೇವೆ. ಜನರು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬಯಸಿದ್ದರೂ, ನಾನು ಕಳೆದ ಬಾರಿ ಚುನಾವಣೆ ಪೂರ್ವವಾಗಿ ಪ್ರಚಾರ ಮಾಡಲು ಆಗಮಿಸಿದಾಗ ಇದೇ ದಾಬಸ್‌ಪೇಟೆಯಲ್ಲಿ ಸಿಎಂ ಸಿದ್ದರಾಮಯ್ಯ ಆಗಲಿ ಎಂದು ಘೋಷಿಸಿದ್ದೆ. ಸಿದ್ದರಾಮಯ್ಯ ಸಿಎಂ ಆಗಿರುವುದು ಇಡೀ ರಾಜ್ಯಕ್ಕೆ ಸಂತಸ ತಂದಿದೆ ಎಂದು ಹೇಳಿದರು.

ಯಾವುದೇ ಅನುಮಾನ ಬೇಡ, ಗ್ಯಾರಂಟಿ ಅನುಷ್ಠಾನ ಖಚಿತ: ಡಾ.ಜಿ.ಪರಮೇಶ್ವರ್‌

ಹಿಜಾಬ್‌ ವಿವಾದ: ಶಾಲೆಗಳಲ್ಲಿ ಹಿಜಾಬ್‌ ಧರಿಸುವುದರ ಬಗ್ಗೆ ಕಾಂಗ್ರೆಸ್‌ ಯಾವುದೇ ವಿವಾದ ಮಾಡಲ್ಲ, ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆಯೂ ನಾನು ಮಾತನಾಡಲ್ಲ. ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಒದಗಿಸುವುದೆ ನಮ್ಮ ಸರ್ಕಾರದ ಗುರಿ ಎಂದು ಹೇಳಿದರು. ಸಚಿವರು ನಮ್ಮ ಗ್ರಾಮದ ಹಜರತ್‌ ಖಲೀಲ್‌ ಅಹ್ಮದ್‌ ಷಾ ಅದಾ -ಉಲ್‌-ಅಮಿರಿ ಎಜುಕೇಷನ್‌ ಅಂಡ್‌ ಚಾರಿಟಬಲ್‌ ಟ್ರಸ್ಟ್‌ಗೆ ಭೇಟಿ ನೀಡಿ, ಖಲೀಲ್‌ ಅಹಮ್ಮದ್‌ ಘೋರಿಗೆ ನಮಿಸಿದರು. ಸಮುದಾಯದ ಲಕ್ಕೂರು ಖಲೀಂ ಉಲ್ಲಾ, ಕಾಂಗ್ರೆಸ್‌ ಪಕ್ಷದ ಮುಖಂಡ ಅಗಳಕುಪ್ಪೆ ಗೋವಿಂದರಾಜು, ಮದರಸದ ಮುಖ್ಯಸ್ಥ ಇರ್ಫಾನ್‌ ಅಹಮ್ಮದ್‌ ಷಾ, ಹಾಲೇನಹಳ್ಳಿ ಹಾಲಿನ ಡೇರಿ ಅಧ್ಯಕ್ಷ ನಯಾಜ್‌ ಖಾನ್‌, ಗ್ರಾಪಂ ಮಾಜಿ ಸದಸ್ಯ ಚಾಂದ್‌ ಪಾಷಾ, ಮುಜೀಬ್‌ ಉಲ್ಲಾ, ಸಿದ್ದರ ಬೆಟ್ಟದ ಮಹಮ್ಮದ್‌ ಪಾಷಾ, ಚಾಂದ್‌ ಪಾಷಾ, ಅಪ್ಸರ್‌ ಅಹಮ್ಮದ್‌ ಆರೀಫ್‌, ಇಕ್ಬಾಲ್‌ ಅಹಮ್ಮದ್‌, ದಾನಿ ಮುನ್ನಾವರ್‌ ಪಾಷಾ, ಅಫ್ಸರ್‌ ಪಾಷಾ, ಅಹಮದ್‌ ಖಾನ್‌, ಇಸ್ಮಾಯಿಲ್‌ ಷರೀಫ್‌, ಇಬ್ರಾಹಿಂ ಖಾನ್‌ ಇನ್ನಿತರರಿದ್ದರು.

ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ: ಮಾಗಡಿ ಶಾಸಕ ಬಾಲ​ಕೃಷ್ಣ

ನನಗೆ ಸಿಕ್ಕ ಖಾತೆಯಲ್ಲಿ ಬಡವರ ಸೇವೆಗೆ ಅವಕಾಶವಿದೆ: ಮುಖ್ಯಮಂತ್ರಿ ನನಗೆ ನೀಡಿರುವ ಖಾತೆಯಲ್ಲಿ ಬಡವರ ಸೇವೆ ಮಾಡಲು ಅವಕಾಶ ಇದೆ. ಹಾಗಾಗಿ ಈ ಖಾತೆ ಸಿಕ್ಕಿರುವುದು ನನಗೆ ಖುಷಿ ತಂದಿದೆ ಎಂದು ನೂತನ ವಸತಿ ಹಾಗೂ ವಕ್ಫ್ ಖಾತೆ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದರು. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನೀಡಿರುವ ಖಾತೆಯಲ್ಲಿ ಕೆಲಸ ಮಾಡಲು ತೃಪ್ತಿ ಇದೆ. ರಾಜ್ಯದ ಬಡವರ ಸೇವೆಗೆ ಇದೊಂದು ಸುವರ್ಣಾವಕಾಶವನ್ನು ಮುಖ್ಯಮಂತ್ರಿಗಳು ಕಲ್ಪಿಸಿಕೊಟ್ಟಿದ್ದಾರೆ ಎಂದರು.

Follow Us:
Download App:
  • android
  • ios