ಉರ್ದು ಭಾಷೆಗೆ ತನ್ನದೆಯಾದ ಸೊಗಡಿದೆ : ಸಿ.ಟಿ. ರವಿ

ದೇಶದಲ್ಲಿ ಉರ್ದು ಪ್ರಭಾವಿ ಭಾಷೆಯಾಗಿ ಪರಿವರ್ತನೆಯಾಗಿದೆ. ಆಲಿಸಲು, ಮಾತನಾಡಲು ಹಾಗೂ ಬರೆಯಲು ಉರ್ದು ಭಾಷೆ ತನ್ನದೆಯಾದ ಸೊಗಡನ್ನು ಹೊಂದಿದೆ ಎಂದು ಶಾಸಕ ಸಿ.ಟಿ.ರವಿ(CT Ravi) ಹೇಳಿದರು.

CT ravi speech in All India Poets Conference 2023 at chikkamagaluru rav

, ಚಿಕ್ಕಮಗಳೂರು (ಮಾ.6) : ದೇಶದಲ್ಲಿ ಉರ್ದು ಪ್ರಭಾವಿ ಭಾಷೆಯಾಗಿ ಪರಿವರ್ತನೆಯಾಗಿದೆ. ಆಲಿಸಲು, ಮಾತನಾಡಲು ಹಾಗೂ ಬರೆಯಲು ಉರ್ದು ಭಾಷೆ ತನ್ನದೆಯಾದ ಸೊಗಡನ್ನು ಹೊಂದಿದೆ ಎಂದು ಶಾಸಕ ಸಿ.ಟಿ.ರವಿ(CT Ravi) ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಉರ್ದು ಅದಬ್‌ ಚಿಕ್ಕಮಗಳೂರು(Urdu Adab Chikkamagaluru) ವತಿಯಿಂದ ವಿದ್ಯಾಭಾರತಿ ಶಾಲೆ ಸಹಯೋಗದಲ್ಲಿ ನಡೆದ ಅಖಿಲ ಭಾರತ ಕವಿ ಸಮ್ಮೇಳನ-2023(All India Poets Conference-2023)ರಲ್ಲಿ ಅವರು ಮಾತನಾಡಿದರು. ಹಲವು ಭಾಷೆಗಳ ಸಮ್ಮಿಳಿತದಿಂದ ಶ್ರೀಮಂತಿಕೆ ಪಡೆದ ಉರ್ದು ಭಾಷೆ, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಸೇನೆಯಲ್ಲಿ ಪ್ರಭಾವಿ ಭಾಷೆಯಾಗಿ ಮಾರ್ಪಟ್ಟಿದ್ದನ್ನು ಇತಿಹಾಸದಿಂದ ತಿಳಿಯಬಹುದು. ರಾಜ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಉರ್ದು ಸಮ್ಮೇಳನ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್‌ ನಾಯಕರು ಎಲೆಕ್ಷನ್‌ ಟೈಂನ ಹಿಂದೂಗಳು: ಸಿ.ಟಿ.ರವಿ

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಉರ್ದು ಭಾಷೆಗೆ ಮುಸ್ಲಿಂ ಸಮುದಾಯ(Muslim community)ದವರು ಕೊಟ್ಟಿರುವ ಮಹತ್ವದ ಕೊಡುಗೆಯನ್ನು ನಾಡಿನ ಕನ್ನಡ ಭಾಷೆಗೂ ನೀಡಿ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು. ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ ಮುಮೀನ್‌ ಮುನಾವರ್‌ ಮಾತನಾಡಿ, ಉರ್ದು ಸಮ್ಮೇಳನ ಏರ್ಪಡಿಸುವ ಮೂಲಕ ಉರ್ದು ಭಾಷೆಯ ಮಹತ್ವ ಹಾಗೂ ಹಿರಿಮೆಯನ್ನು ತೆರೆದಿಟ್ಟಂತಾಗಿದೆ. ಕನ್ನಡಿಗರಾದ ನಾವು ಕನ್ನಡ ಮತ್ತು ಇತರೆ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಮಾತೃಭಾಷೆ ಉರ್ದುವಿಗೆ ನೀಡಬೇಕು ಎಂದು ಹೇಳಿದರು.

ವಿದ್ಯಾಭಾರತಿ ವಿದ್ಯಾಸಂಸ್ಥೆ ಸಂಸ್ಥಾಪಕ ಅಪ್ಸರ್‌ ಅಹ್ಮದ್‌ ಮಾತನಾಡಿ, ಮೊಬೈಲ್‌ ಬಳಕೆಯಿಂದ ವಿದ್ಯಾರ್ಥಿಗಳ ಓದಿಗೆ ಕುತ್ತು ಬರುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳು ಮೊಬೈಲ್‌ ಬಳಕೆಯನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ಮಾಡಿಕೊಳ್ಳಬೇಕು. ಪುರಾತನ ಇತಿಹಾಸ ಹೊಂದಿರುವ ಉರ್ದು ಭಾಷೆಯನ್ನು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಉರ್ದು ಅದಬ್‌ ಅಧ್ಯಕ್ಷ ದಾವೂದ್‌ ಆಲಿ ಜಂಶೀದ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 26 ಉರ್ದು ಸಾಹಿತಿಗಳು ಉರ್ದು ಕವಿತೆಗಳನ್ನು ಹೇಳುವ ಮೂಲಕ ಸಭಿಕರ ಮನರಂಜಿಸಿದರು.

 

ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಉರ್ದು ಅದಬ್‌ ಉಪಾಧ್ಯಕ್ಷ ಫೈರೋಜ್‌ ಅಹ್ಮದ್‌, ಕಾಲಿದ್‌ ರೆಹಮಾನ್‌, ಮುಖಂಡರಾದ ಎಸ್‌.ಕೆ.ಭಾಷ, ಶಫೀಕ್‌ ಅಹ್ಮದ್‌, ಮುಖ್ಯ ಶಿಕ್ಷಕಿ ಸಾಹೇರ ಫಾತಿಮಾ, ಪರ್ದಾನ ಫಾರನ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios