ಕಾಂಗ್ರೆಸ್‌ ನಾಯಕರು ಎಲೆಕ್ಷನ್‌ ಟೈಂನ ಹಿಂದೂಗಳು: ಸಿ.ಟಿ.ರವಿ

ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಕೆಲವು ನಾಯಕರು ಎಲೆಕ್ಷನ್‌ ಟೈಂನ ಹಿಂದೂಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ. 

BJP Leader CT Ravi Outraged Against Congress At Chikkamagaluru gvd

ಚಿಕ್ಕಮಗಳೂರು (ಮಾ.05): ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಕೆಲವು ನಾಯಕರು ಎಲೆಕ್ಷನ್‌ ಟೈಂನ ಹಿಂದೂಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ. ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಯುವ ಸಂಗಮದಲ್ಲಿ ಮಾತನಾಡಿದ ಅವರು, ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ವಿಷಯದಲ್ಲಿ ಅನ್ಯಾಯ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ, ನೆನಪಿರಲಿ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದತ್ತಪೀಠಕ್ಕೆ ಅನ್ಯಾಯವಾಗುತ್ತೆ ಎಂದರು.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿಯೂ ಬಿಜೆಪಿ ಗೆಲುವು ಖಚಿತ. ಬಿಜೆಪಿಯ ನಾವುಗಳು ಪಾಂಡವರು, ಕಾಂಗ್ರೆಸ್ಸಿಗರು ಕೌರವರು. ಪಾಂಡವರಿಗೆ ಸೋಲಿಲ್ಲ, ಕೌರವರಿಗೆ ಸೋಲು ಕಟ್ಟಿಟ್ಟಬುತ್ತಿ. ಆ ಪಕ್ಷಕ್ಕೆ ನೀತಿಯೂ ಇಲ್ಲ, ನೇತೃತ್ವವೂ ಇಲ್ಲ ವೆಂದರು. ನಮ್ಮ ಸರ್ಕಾರ ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ 245 ಕೆರೆಗಳಿಗೆ ಭದ್ರಾ ನೀರು ತುಂಬಿಸಲು 1281 ಕೋಟಿ ರು. ಬಿಡುಗಡೆ ಮಾಡಿದೆ. ಇಲ್ಲಿ ನಿಮ್ಮ ಪಾತ್ರವೇನು ಎಂದು ಪ್ರತಿಪಕ್ಷಗಳಿಗೆ ಪ್ರಶ್ನಿಸಿದರು.

ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ

ಮೊನ್ನೆ ಜೆಡಿಎಸ್‌ ನಾಯಕರು ಜಿಲ್ಲೆಗೆ ಬಂದಿದ್ದರು, ಅವರು ಸಿಎಂ ಆಗಿದ್ದಾಗ ಜಿಲ್ಲೆಗೆ ಏನ್‌ ಕೊಟ್ರು ಅವರು ಹೇಳಬೇಕಾಗಿತ್ತು. ಅವರು ಮಾಡಿದ್ದು ಎರಡೇ ಕೆಲಸ ಬೆಳವಾಡಿ ಮತ್ತು ಮತ್ತಾವರದಲ್ಲಿ ಗ್ರಾಮ ವಾಸ್ತವ್ಯ. ರಾತ್ರಿ ಮಲಗಿದ್ರು, ಬೆಳಿಗ್ಗೆ ಅವರು ಎದ್ದು ಹೋಗುತ್ತಿದ್ದಂತೆ ಅವರ ಕಾರ್ಯಕರ್ತರು ಹಾಸಿಗೆ, ದಿಂಬು ಎತ್ತಿಕೊಂಡು ಹೋದ್ರು, ಬರೀ ಇಷ್ಟೇ ಅಲ್ಲ, ಕಟ್ಟಿಕೊಟ್ಟಿದ್ದ ಶೌಚಾಲಯದಲ್ಲಿದ್ದ ಕಮೋಡ್‌ ಕೂಡ ಎತ್ತಿಕೊಂಡು ಹೋದ್ರು, ಇದು ಕುಮಾರಣ್ಣನ ಕಥೆ. ಜಿಲ್ಲೆಗೆ ಜೆಡಿಎಸ್‌ ಕೊಡುಗೆ ಏನೂ ಇಲ್ಲ ಎಂದು ಹೇಳಿದರು.

ಬಿಜೆಪಿ ಬಳಿ ನೀತಿ-ನಿಯತ್ತು-ನೇತೃತ್ವ ಮೂರು ಇದೆ: ನಮ್ಮ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಿವೆ. ನಾವು ಐದು ಜನ ಪಂಚಪಂಡಾವರು ಇದ್ದೇವೆ ಎಂದು ನಾನು ಆಗಾಗ ಹೇಳುತ್ತಿರುತ್ತೇನೆ. ಧರ್ಮರಾಯ ಯಾರು ಅಂದ್ರೆ ಯಾರಿಗೆ ಜಾಸ್ತಿ ವಯಸ್ಸಾಗಿದ್ಯೋ ಅವರು ಧರ್ಮರಾಯ. ಭೀಮಾ ಯಾರು ಅಂದ್ರೆ, ಕಡೂರು ಬೆಳ್ಳಿ ಪ್ರಕಾಶ್ ಭೀಮಾ. ಅವರ ಪಾತ್ರ ಯಾರಿಗೂ ಇಲ್ಲ. ಅದೇನಿದ್ದರೂ ಬೆಳ್ಳಿ ಪ್ರಕಾಶ್ಗೆ ಮಾತ್ರ ಎಂದು ಬೆಳ್ಳಿಗೆ ತಮಾಷೆ ಮಾಡಿದರು. ಇನ್ನು ಅರ್ಜುನ ಯಾರು. ಯಾರು ಚಕ್ರವ್ಯೂಹವನ್ನ ಬೇಧಿಸಬಲ್ಲರೋ, ಯಾರು ಶತ್ರುಗಳಿಗೆ ಸೋಲಿನ ರುಚಿಯನ್ನ ತೋರಿಸಬಲ್ಲರೋ ಅವರು ಮಾತ್ರ ಅರ್ಜುನ. ನಕುಲ-ಸಹದೇವರು ನಮ್ಮ ಜೊತೆಯೇ ಇದ್ದಾರೆ. 

ಯಡಿಯೂರಪ್ಪ ಸವಾಲು ಹಾಕಿದರೆ ಏನಾಗುತ್ತೆ ಎಂದು ನಮಗಿಂತ ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತು: ಬಿ.ವೈ.ವಿಜಯೇಂದ್ರ

224 ಕ್ಷೇತ್ರಗಳಿಗೆ ಸ್ಪರ್ಧೆ ಮಾಡುವಷ್ಟು ಜನರಿಲ್ಲ: ಹಾಸನದಲ್ಲಿ ಜಗಳ ನಡೆದಿದೆ, ದೇಶಕ್ಕಾಗಿ ಅಲ್ಲ, ಹಾಸನದ ಜನರಿಗಾಗಿಯೂ ಅಲ್ಲ, ಕುಟುಂಬಕ್ಕಾಗಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ಶನಿವಾರ ಏರ್ಪಡಿಸಿದ್ದ ಯುವ ಸಂಗಮ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದೇ ಒಂದು ತಪ್ಪಾಗಿರುವುದು 224 ಕ್ಷೇತ್ರಗಳಿಗೆ ಆಗುವಷ್ಟು ಜನ ಒಂದೇ ಫ್ಯಾಮಿಲಿಯಲ್ಲಿ ಇಲ್ಲ ಎಂದು ವ್ಯಂಗ್ಯವಾಡಿದರು. ಎಲ್ಲೋ ಒಂದು ಕಡೆ ಕೇಳಿದ್ವಿ, 36 ಹೆಂಡ್ರು, 314 ಮಕ್ಕಳು, ಹಂಗೇನು ಆಗಿದ್ರೆ, 224 ಕ್ಷೇತ್ರಗಳಿಗೆ ಕ್ಯಾಂಡಿಡೇಟ್‌ ನೋಡುವ ರಗಳೆ ಇರ್ತಾ ಇರಲಿಲ್ಲ. ಹಾಗಿಲ್ಲದಿದ್ದರೂ ಜಗಳ. ಯಾಕೆ ಅಂದ್ರೆ ಅವರ ನೀತಿ ಕುಟುಂಬದಿಂದ ಕುಟುಂಬಕ್ಕಾಗಿ, ಕುಟುಂಬಗೋಸ್ಕರ. ನಮ್ಮ ನೀತಿ ದೇಶಕ್ಕಾಗಿಯೇ, ದೇಶಗೋಸ್ಕರವೇ, ಜನರಿಗೋಸ್ಕರವೇ ನರೇಂದ್ರ ಮೋದಿ ನೀತಿ ಎಂದು ಹೇಳಿದರು.

Latest Videos
Follow Us:
Download App:
  • android
  • ios