ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ

ಚಿಕ್ಕಮಗಳೂರು ನಗರದ ಎಐಟಿ ಕಾಲೇಜ್ ಆವರಣದಲ್ಲಿ ಜಿಲ್ಲಾ ಬಿಜೆಪಿ ಯುವಮೋರ್ಚಾದ ವತಿಯಿಂದ ಯುವ ಸಂಗಮ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
 

BJP Leader CT Ravi Slams On JDS At Chikkamagaluru gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.04): ಚಿಕ್ಕಮಗಳೂರು ನಗರದ ಎಐಟಿ ಕಾಲೇಜ್ ಆವರಣದಲ್ಲಿ ಜಿಲ್ಲಾ ಬಿಜೆಪಿ ಯುವಮೋರ್ಚಾದ ವತಿಯಿಂದ ಯುವ ಸಂಗಮ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಿಕ್ಕಮಗಳೂರು ಶಾಸಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಧ್ಯಕ್ಷತೆ ವಹಿಸಿ ಮಾತಾಡಿ ಜೆಡಿಎಸ್ ಪಕ್ಷದ ವಿರುದ್ದ ಸಿ.ಟಿ ರವಿ ಲೇವಡಿ ಮಾಡಿದರು. 

ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ  ತಪ್ಪಾಗಿ ಅರ್ಥೈಸಿಕೊಂಡಿದೆ: ಸಂವಿಧಾನದ ಆಶಯ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂದು ಇದೆ. ಆದರೆ, ನಮ್ಮ ಜೆಡಿಎಸ್ ಕುಮಾರಣ್ಣ ಅದನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಜೆಡಿಎಸ್ ಡಿಕ್ಷನರಿಯಲ್ಲಿ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೊಸ್ಕರ ಎಂದು ಲೇವಡಿ ಮಾಡಿದರು. ಜೆಡಿಎಸ್  ಪಾರ್ಟಿಗೂ ದೇಶಕ್ಕೂ ಸಂಬಂಧವೇ ಇಲ್ಲ. ಸಂವಿಧಾನದ ಆಶಯ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂದು ಇದೆ. ಆದರೆ, ಕುಮಾರಣ್ಣ ಅದನ್ನ ತಪ್ಪಾಗಿ ಅರ್ಥೈಸಿಕೊಂಡು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 40 ಕೋಟಿ ರು. ಭ್ರಷ್ಟಾಚಾರ ಆರೋಪ: ತನಿಖೆಗೆ ಪಿಸಿಸಿಎಫ್‌ ಆದೇಶ

ಹಾಸನದಲ್ಲಿ ಜಗಳ ನಡೆಯುತ್ತಿದೆ ಏಕೆ. ದೇಶ-ರಾಜ್ಯದ ಅಭಿವೃದ್ಧಿಗಾಗಿ ಅಲ್ಲ. ಕುಟುಂಬಕ್ಕಾಗಿ. ಒಂದೇ ಒಂದು ತಪ್ಪಾಗಿದೆ. ಅವರ ಮನೆಯಲ್ಲಿ 224 ಕ್ಷೇತ್ರಗಳಿಗೆ ಆಗುವಷ್ಟು ಜನ ಇಲ್ಲ. ಇದ್ದಿದ್ದರೆ, 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಹುಡುಕುವ ಪ್ರಮಯವೇ ಬರುತ್ತಿರಲಿಲ್ಲ ಎಂದು ಜೆಡಿಎಸ್ ಕಾಲೆಳೆದಿದ್ದಾರೆ. ಎಲ್ಲೋ ಓದಿದ್ದೆ. 36 ಜನ ಹೆಂಡ್ರು. 316 ಮಕ್ಕಳು. ಹಾಗೇನಾದರೂ ಇದ್ದಿದ್ದರೆ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಹುಡುಕುವ ಅಗತ್ಯವೇ ಇರುತ್ತಿರಲಿಲ್ಲ. ಅವರ ಪ್ರೀತಿ ಏನಿದ್ದರೂ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಅಷ್ಟೆ ಎಂದು ಜೆಡಿಎಸ್‌ಗೆ ಟಾಂಗ್ ಕೊಟ್ಟಿದ್ದಾರೆ.

ಬಿಜೆಪಿ ಬಳಿ ನೀತಿ-ನಿಯತ್ತು-ನೇತೃತ್ವ ಮೂರು ಇದೆ: ನಮ್ಮ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಿವೆ. ನಾವು ಐದು ಜನ ಪಂಚಪಂಡಾವರು ಇದ್ದೇವೆ ಎಂದು ನಾನು ಆಗಾಗ ಹೇಳುತ್ತಿರುತ್ತೇನೆ. ಧರ್ಮರಾಯ ಯಾರು ಅಂದ್ರೆ ಯಾರಿಗೆ ಜಾಸ್ತಿ ವಯಸ್ಸಾಗಿದ್ಯೋ ಅವರು ಧರ್ಮರಾಯ. ಭೀಮಾ ಯಾರು ಅಂದ್ರೆ, ಕಡೂರು ಬೆಳ್ಳಿ ಪ್ರಕಾಶ್ ಭೀಮಾ. ಅವರ ಪಾತ್ರ ಯಾರಿಗೂ ಇಲ್ಲ. ಅದೇನಿದ್ದರೂ ಬೆಳ್ಳಿ ಪ್ರಕಾಶ್ಗೆ ಮಾತ್ರ ಎಂದು ಬೆಳ್ಳಿಗೆ ತಮಾಷೆ ಮಾಡಿದರು. 

ಸಿಂಧನೂರಿನ ಬಿಜೆಪಿ ಟಿಕೆಟ್‌ಗಾಗಿ 9 ಜನ ಆಕಾಂಕ್ಷಿಗಳು ಓಡಾಟ: ಟಿಕೆಟ್ ಘೋಷಣೆ ಮಾಡಲು ಹೈಕಮಾಂಡ್ ವಿಳಂಬ

ಇನ್ನು ಅರ್ಜುನ ಯಾರು. ಯಾರು ಚಕ್ರವ್ಯೂಹವನ್ನ ಬೇಧಿಸಬಲ್ಲರೋ, ಯಾರು ಶತ್ರುಗಳಿಗೆ ಸೋಲಿನ ರುಚಿಯನ್ನ ತೋರಿಸಬಲ್ಲರೋ ಅವರು ಮಾತ್ರ ಅರ್ಜುನ. ನಕುಲ-ಸಹದೇವರು ನಮ್ಮ ಜೊತೆಯೇ ಇದ್ದಾರೆ. ಕಾಂಗ್ರೆಸ್-ಜನತಾದಳದವರು ಕೌರವರು ಮಾತ್ರ. ಕುರುಕ್ಷೇತ್ರ ಯದ್ಧದಲ್ಲಿ ಗೆದ್ದವರು ಯಾರು. ಕೌರವರು ಸೋತರು. ಪಾಂಡವರು ಗೆದ್ದರು. ಈ ಬಾರಿ ನಮ್ಮ ಜಿಲ್ಲೆಯಲ್ಲಿ ಐದಕ್ಕೆ ಐದು ಬಿಜೆಪಿ ಗೆಲ್ಲುತ್ತೆ. ನಾವು ಐದು ಜನ ಪಾಂಡವರು ಗೆದ್ದೆ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ. ಯಾಕೆ ಗೆಲ್ಲಬೇಕು ಅಂದರೆ, ನಮ್ಮ ಬಳಿ ನೀತಿ-ನಿಯತ್ತು-ನೇತೃತ್ವ ಮೂರು ಇದೆ. ಅದಕ್ಕೆ ಗೆಲ್ಲಬೇಕು ಎಂದಿದ್ದಾರೆ.

Latest Videos
Follow Us:
Download App:
  • android
  • ios