ಬೆಂಗಳೂರು(ಜು.15): ನಗರದ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕೊರೋನಾ ಸೋಂಕಿತರು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ವಾರ್ಡ್‌ನಲ್ಲಿ 16 ಮಂದಿ ಸೋಂಕಿತರನ್ನು ಇರಿಸಲಾಗಿದೆ.

ಆಸ್ಪತ್ರೆಯಲ್ಲಿ ಕುಡಿಯಲು ಬಿಸಿನೀರಿಲ್ಲ. ಸ್ನಾನಕ್ಕೆ ಬಿಸಿ ನೀರು ಸಿಗುತ್ತಿಲ್ಲ. ಮಧ್ಯಾಹ್ನ ಕೊಡುವ ಊಟವನ್ನೇ ರಾತ್ರಿಯೂ ಕೊಡುತ್ತಾರೆ. ಎಷ್ಟೋ ಬಾರಿ ಹಳಸಿರುವ ಊಟ ನೀಡಿದ್ದಾರೆ. ಹಿಂದಿನ ದಿನ ಕತ್ತರಿಸಿದ ಹಣ್ಣುಗಳನ್ನು ನೀಡುತ್ತಾರೆ.

ಬೆಂಗ್ಳೂರಿಂದ ಬಂದವರನ್ನು ಅನುಮಾನದಿಂದ ನೋಡ್ಬೇಡಿ: ಹರತಾಳು ಹಾಲಪ್ಪ

ಕೊರೋನಾ ಪಾಸಿಟಿವ್‌ ಎಂದು ಆರು ದಿನದ ಹಿಂದೆ ದಾಖಲು ಮಾಡಿದ್ದು, ಈವರೆಗೂ ಚಿಕಿತ್ಸೆ ಆರಂಭಿಸಿಲ್ಲ. ಬೇರೆ ಆಸ್ಪತ್ರೆಗೆ ತೆರಳುತ್ತೇವೆ ಎಂದರೂ ಬಿಡುತ್ತಿಲ್ಲ ಎಂದು ಸೋಂಕಿತರು ವಿಡಿಯೊವೊಂದರಲ್ಲಿ ಆಸ್ಪತ್ರೆಗೆ ಅವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ.

ಕೊರೋನಾ ದೃಢಪಟ್ಟು 24 ಗಂಟೆ ಕಳೆದರೂ ಬಾರದ ಆ್ಯಂಬುಲೆನ್ಸ್‌

ಆನೇಕಲ್‌ ಠಾಣಾ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಮಹಿಳೆಯೋರ್ವಳಿಗೆ ಕೊರೋನಾ ಪಾಸಿಟಿವ್‌ ಬಂದು ಆಸ್ಪತ್ರೆಗೆ ಮಾಹಿತಿ ನೀಡಿ 24 ಗಂಟೆಯಾದರೂ ಆ್ಯಂಬುಲೆನ್ಸ್‌ ಒದಗಿಸದ ಘಟನೆ ನಡೆದಿದೆ.

ಶಿವಮೊಗ್ಗ ಲಾಕ್‌ಡೌನ್ ಕುರಿತು ಇಂದು ನಿರ್ಧಾರ: ಸಚಿವ ಈಶ್ವರಪ್ಪ

ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕಿ, 51 ವಯೋಮಾನದ ಮಹಿಳೆ ಬಿಆರ್‌ಎನ್‌ ಆಶಿಶ್‌ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಕೊರೋನಾ ಪಾಸಿಟಿವ್‌ ಎಂದು ವರದಿ ಬಂದಿದ್ದು ಆಕೆ ಆಸ್ಪತ್ರೆಗೆ ಬರಲು ಸಿದ್ಧವಾಗಿದ್ದರೂ ತಾಲೂಕು ವೈದ್ಯಾಧಿಕಾರಿ ಆ್ಯಂಬುಲೆನ್ಸ್‌ ಕಳಿಸಲು ತಡ ಮಾಡಿದ್ದಾರೆ. ಇದುವರೆಗೂ ವೈದ್ಯಕೀಯ ಸಿಬ್ಬಂದಿಯಾಗಲಿ ಅಥವಾ ಕೊರೋನಾ ವಾರಿಯರ್ಸ್‌ ತಂಡವಾಗಲಿ ಆಕೆಯ ನೆರವಿಗೆ ಬಂದಿಲ್ಲ. ಇದರಿಂದಾಗಿ ಕಾರಣ ಕುಟುಂಬ ಸದಸ್ಯರಲ್ಲಿ ಆತಂಕ ಮನೆ ಮಾಡಿದೆ.