ಬೆಂಗಳೂರು(ಜು.31): ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ (ಬುಧವಾರ ಸಂಜೆ 5ರಿಂದ ಗುರುವಾರ ಸಂಜೆ 5ರವರೆಗೆ ) ಹೊಸದಾಗಿ 2,233 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರ ನಡುವೆ 22 ಮಂದಿ ಸೋಂಕಿತರು ಸಾವನ್ನಪ್ಪುವ ಮೂಲಕ ನಗರದಲ್ಲಿ ಈ ವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ ಒಂದು ಸಾವಿರ ಗಡಿ ದಾಟಿದೆ.

ಗುರುವಾರದ ಹೊಸ ಸೋಂಕು ಪ್ರಕರಣಗಳೊಂದಿಗೆ ನಗರದ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 53,324ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 1,009ಕ್ಕೆ ಏರಿಕೆಯಾಗಿದೆ.

ಕುಮಾರಸ್ವಾಮಿ ಬಗ್ಗೆ ನಾನು ಈಗ ಮಾತನಾಡಲ್ಲ: ಸಿದ್ದರಾಮಯ್ಯ

ಈ ಮಧ್ಯೆ ಸೋಂಕಿನಿಂದ ಗುಣಮುಖರಾದ ದಾಖಲೆ ಸಂಖ್ಯೆಯ 1,912 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಈವರೆಗೆ ನಗರದಲ್ಲಿ ಕೋವಿಡ್‌ನಿಂದ ಚೇತರಿಕೆಯಾದವರ ಸಂಖ್ಯೆ 15,791ಕ್ಕೆ ಏರಿಕೆಯಾಗಿದೆ. ಉಳಿದಂತೆ 36,523 ಮಂದಿ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಗಂಭೀರ ಆರೋಗ್ಯ ಸ್ಥಿತಿ ಹಿನ್ನೆಲೆಯ 337 ಮಂದಿಗೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶೇ.25ರಷ್ಟುಸೋಂಕಿತರಿಗಷ್ಟೇ ಜ್ವರ: ಕೊರೋನಾ ಲಕ್ಷಣಕ್ಕೆ ಹೊಸ ಸೇರ್ಪಡೆ!

ಗುರುವಾರ ಮೃತಪಟ್ಟ22 ಮಂದಿಯಲ್ಲಿ 10 ಮಂದಿ ಮಹಿಳೆಯರು ಹಾಗೂ 22 ಮಂದಿ ಪುರುಷರು. ಈ ಪೈಕಿ 17 ಮಂದಿ ತೀವ್ರ ಉಸಿರಾಟ ತೊಂದರೆ (ಸಾರಿ) ಹಿನ್ನೆಲೆ ಹಾಗೂ ಐದು ಜನ ವಿಷಮ ಶೀತ ಜ್ವರ (ಐಎಲ್‌ಐ) ಸಮಸ್ಯೆ ಹಿನ್ನೆಲೆಯಿಂದ ಸೋಂಕು ದೃಢಪಟ್ಟವರಾಗಿದ್ದರು. ಜೊತೆಗೆ ಪೂರ್ವ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಹೇಳಿದೆ. ಇನ್ನು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,18,632ರಷ್ಟಿದೆ. ಇದರಲ್ಲಿ ಹೆಚ್ಚುಕಡಿಮೆ ಅರ್ಧದಷ್ಟುಮಂದಿ ನಗರದಲ್ಲಿ ಸೋಂಕಿತರಿದ್ದಾರೆ.