ಮೈಸೂರು(ಜು.31): ‘ಎಚ್‌.ಡಿ. ಕುಮಾರಸ್ವಾಮಿ ಬಗ್ಗೆ ನಾನು ಈಗ ಮಾತನಾಡಲ್ಲ, ಇನ್ನೊಮ್ಮೆ ಬಂದಾಗ ಮಾತನಾಡುತ್ತೇನೆ’

-ಇದು ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್‌ ಅತಿರಥ ಮಹಾರಥರು ಪಕ್ಷದ ಟ್ವೀಟರ್‌ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ’ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ.

'ಜನ ದಂಗೆ ಏಳ್ತಾರೆ' ಬಿಎಸ್‌ವೈಗೆ ರೇವಣ್ಣ ವಾರದ ಡೆಡ್ ಲೈನ್!

ರಾಜ್ಯ ಸರ್ಕಾರ ಒಂದು ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿಲು ನಿರಾಕರಿಸಿದ ಅವರು, ನಾನು ಪಲಾಯನ ಮಾಡುತ್ತಿಲ್ಲ. ಈಗ ಉದ್ದೇಶಿತ ಸಂವಾದ ಕಾರ್ಯಕ್ರಮಕ್ಕೆ ಸಂಬಂಧಿಸಿ ಪ್ರಶ್ನೆ ಇದ್ದರೆ ಕೇಳಿ. ಮತ್ತೊಮ್ಮೆ ಬಂದಾಗ ಕುಮಾರಸ್ವಾಮಿ ವಿಚಾರಕ್ಕೂ ಉತ್ತರ ಕೊಡುತ್ತೇನೆ. ಒಂದು ವರ್ಷದ ಸರ್ಕಾರದ ಆಡಳಿತದಲ್ಲಿ ಕುಮಾರಸ್ವಾಮಿ ಎಲ್ಲಿ ಬರುತ್ತಾರೆ ಎಂದು ಸುದ್ದಿಗಾರರೊಬ್ಬರ ಪ್ರಶ್ನೆಗೆ ಗರಂ ಆದರು.