Asianet Suvarna News Asianet Suvarna News

ಕಲಬುರಗಿ: ಗ್ಯಾಸ್ ಸಿಲಿಂಡರ್ ವಾಹನ- ಬೈಕ್ ಮಧ್ಯೆ ಅಪಘಾತ, ದಂಪತಿ ಸಾವು

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕುರಕುಂಟಾ ಗ್ರಾಮದ ಟಿ ಕ್ರಾಸ್ ಬಳಿ ನಡೆದ ದುರ್ಘಟನೆ. 

Couple Dies Due to Road Accident at Sedam in Kalaburagi grg
Author
First Published Sep 22, 2023, 9:06 PM IST

ಕಲಬುರಗಿ(ಸೆ.22): ಮಹೇಂದ್ರ ಮ್ಯಾಕ್ಸ್ ಪಿಕಪ್ ಗ್ಯಾಸ್ ಸಿಲಿಂಡರ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಮೇಲೆ ಹೊರಟಿದ್ದ ಪತಿ-ಪತ್ನಿ ಮೃತಪಟ್ಟ ಘಟನೆ ಸೇಡಂ ತಾಲೂಕಿನ ಕುರಕುಂಟಾ ಗ್ರಾಮದ ಟಿ ಕ್ರಾಸ್ ಬಳಿ ನಡೆದಿದೆ. 

ಮೃತರನ್ನು ಕುರಕುಂಟಾ ಗ್ರಾಮದ ಶೇಕ್ ಸಲಿಂ (42) ಮತ್ತು ಅವರ ಪತ್ನಿ ರೈಜಾ ಬೇಗಂ (40) ಎಂದು ಗುರುತಿಸಲಾಗಿದೆ. ಪತಿ-ಪತ್ನಿ ಕುರಕುಂಟಾ ಗ್ರಾಮದಿಂದ ಸೇಡಂಗೆ ಹೊರಟಿದ್ದರು ಎಂದು ತಿಳಿದುಬಂದಿದೆ.

ಉಚಿತ ಬಸ್ ಎಂದು ನಾರಿಮಣಿಯರ ದುಂಬಾಲು: ಬಸ್‌ಗಳ ಮಧ್ಯೆ ಸಿಲುಕಿ ಇಬ್ಬರು ಮಹಿಳೆಯರು ಸಾವು 

ಬೈಕ್‍ಗೆ ಗ್ಯಾಸ್ ಸಿಲಿಂಡರ್ ಸರಬರಾಜು ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಕಲಬುರಗಿಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಕುರಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios