ಕೆ.ಶೆಟ್ಟಹಳ್ಳಿಯಿಂದ ಆರು ಮಂದಿ ಮಹಿಳೆಯರು ಗೊರವನಹಳ್ಳಿ ದೇವಾಲಯಕ್ಕೆ ಹೋಗಲು ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ನಾ ಮುಂದು, ತಾ ಮುಂದು ಎಂದು ಬಸ್ ಹತ್ತಲು ಮುಂದಾದಾಗ ಬಸ್ ಏಕಾಏಕಿ ಹಿಂದಕ್ಕೆ ಚಲಿಸಿದ್ದರಿಂದ ಎರಡು ಬಸ್‌ಗಳ ನಡುವೆ ಸಿಕ್ಕಿದ ಪುಟ್ಟತಾಯಮ್ಮ ಹಾಗೂ ಪಂಕಜ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ತುಮಕೂರು(ಸೆ.16): ಗೊರವನಹಳ್ಳಿ ದೇವಸ್ಥಾನಕ್ಕೆ ತೆರಳಿದ್ದ ಇಬ್ಬರು ಮಹಿಳೆಯರು ಎರಡು ಬಸ್‌ಗಳ ಮಧ್ಯೆ ಸಿಲುಕಿ ಮೃತಪಟ್ಟಿರುವ ಘಟನೆ ತುಮಕೂರಿನ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯ ಪುಟ್ಟತಾಯಮ್ಮ ಹಾಗೂ ಪಂಕಜ ಮೃತ ಮಹಿಳೆಯರು. 

ಕೆ.ಶೆಟ್ಟಹಳ್ಳಿಯಿಂದ ಆರು ಮಂದಿ ಮಹಿಳೆಯರು ಗೊರವನಹಳ್ಳಿ ದೇವಾಲಯಕ್ಕೆ ಹೋಗಲು ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ನಾ ಮುಂದು, ತಾ ಮುಂದು ಎಂದು ಬಸ್ ಹತ್ತಲು ಮುಂದಾದಾಗ ಬಸ್ ಏಕಾಏಕಿ ಹಿಂದಕ್ಕೆ ಚಲಿಸಿದ್ದರಿಂದ ಎರಡು ಬಸ್‌ಗಳ ನಡುವೆ ಸಿಕ್ಕಿದ ಪುಟ್ಟತಾಯಮ್ಮ ಹಾಗೂ ಪಂಕಜ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

"ಶಕ್ತಿ'' ಯೋಜನೆಗೆ ಮೂರು ತಿಂಗಳು: 13.20 ಕೋಟಿ ಮಹಿಳೆಯರ ಪ್ರಯಾಣ

ಈ ವೇಳೆ ಜೊತೆಯಲ್ಲಿದ್ದ ನಾಲ್ವರು ಮಹಿಳೆಯರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆ ನಂತರ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತಪಟ್ಟ ಮಹಿಳೆಯರ ಶವಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

ಉಚಿತ ಬಸ್ ಎಂದು ಮಹಿಳೆಯರು ದುಂಬಾಲು ಬಿದ್ದು ದೇವಸ್ಥಾನಕ್ಕೆ ಹೊರಟಿದ್ದರು. ಈ ಸಂಬಂಧ ತುಮಕೂರು ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.