Asianet Suvarna News Asianet Suvarna News

Council Election Karnataka : ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತವೆಂಬ ವಿಶ್ವಾಸ

  • ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮೈಸೂರು- ಚಾಮರಾಜನಗರ 
  •  ಬಿಜೆಪಿ ಅಭ್ಯರ್ಥಿ ಆರ್‌. ರಘು ಅವರ ಗೆಲುವು ನಿಶ್ಚಿತ ಎಂದು ಮಾಜಿ ಸಂಸದ ಸಿ.ಎಚ್‌. ವಿಜಯಶಂಕರ್‌ ವಿಶ್ವಾಸ 
Council Election BJP will win in Mysore says CH Vijayashankar snr
Author
Bengaluru, First Published Nov 29, 2021, 12:55 PM IST
  • Facebook
  • Twitter
  • Whatsapp

ಪಿರಿಯಾಪಟ್ಟಣ (ನ.29):  ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election ) ಮೈಸೂರು - ಚಾಮರಾಜನಗರ (Mysuru Chamarajanagar ) ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಆರ್‌. ರಘು ಅವರ ಗೆಲುವು ನಿಶ್ಚಿತ ಎಂದು ಮಾಜಿ ಸಂಸದ ಸಿ.ಎಚ್‌. ವಿಜಯ ಶಂಕರ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಬಿಜೆಪಿ (BJP) ಕಚೇರಿಯಲ್ಲಿ ವಿಧಾನ ಪರಿಷತ್‌ ಚುನಾವಣೆ (MLC Election) ಹಿನ್ನೆಲೆ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ತಳ ಹದಿಯ ಮೇಲೆ ಬಿಜೆಪಿ (BJP) ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದ್ದು, ಆರ್‌. ರಘು ಅವರು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಿದ್ದಾರೆ ಎಂದರು.

ಈಗಾಗಲೇ ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಭೇಟಿ ನೀಡಿ ಮತ ಯಾಚಿಸಿದ್ದು, ಪ್ರಥಮ ಪ್ರಾಶಸ್ತ್ಯ ಮತ ನೀಡುವಂತೆ ಕೋರಿದರು. ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ರಾಪಂ ಸದಸ್ಯರ ಗೌರವಧನ ಹೆಚ್ಚಳ ಜತೆಗೆ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Govt of karnataka) ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಮಾಜಿ ಶಾಸಕ ಎಚ್‌.ಸಿ. ಬಸವರಾಜು ಮಾತನಾಡಿ, ಪಕ್ಷದ ಅಭ್ಯರ್ಥಿಗೆ ತಾಲೂಕಿನಲ್ಲಿ ಹೆಚ್ಚು ಮತ ಪಡೆಯುವ ನಿಟ್ಟಿನಲ್ಲಿ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

ತಾಲೂಕು ಅಧ್ಯಕ್ಷ ಎಂ.ಎಂ. ರಾಜೇಗೌಡ ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ಪ್ರಚಾರ ಕೈಗೊಂಡು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಬಳಿ ಮತಯಾಚಿಸಿ ಪಕ್ಷದ ಅಭ್ಯರ್ಥಿ  ಆರ್‌. ರಘು ಅವರ ಗೆಲುವಿಗೆ ಶ್ರಮಿಸಲಾಗುತ್ತಿದೆ ಎಂದರು.

ಕೆಡಬ್ಲ್ಯುಎಸ್‌ಎಸ್‌ಬಿ (KWSSB) ನಿರ್ದೇಶಕ ಆರ್‌.ಟಿ. ಸತೀಶ್‌, ಜಿಲ್ಲಾ ಉಪಾಧ್ಯಕ್ಷ ಅಣ್ಣಪ್ಪ, ವಕ್ತಾರ ಕೆ. ವಸಂತ್‌ ಕುಮಾರ್‌, ಮುಖಂಡರಾದ ಪಿ.ಜೆ. ರವಿ, ಲೋಕಪಾಲಯ್ಯ, ಬೆಮ್ಮತ್ತಿ ಚಂದ್ರು, ಚನ್ನಬಸವರಾಜು ಮೊದಲಾದವರು ಇದ್ದರು.

ಜೆಡಿಎಸ್ ಕೋಟೆ ಭೇದಿಸಲು ಯತ್ನ  : 

 ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Election) ಸೋಲುಂಡರೂ ಈಗಲೂ ಜೆಡಿಎಸ್‌ (JDS) ಭದ್ರ ಕೋಟೆಯಾಗಿಯೇ ಉಳಿದಿರುವ ಮಂಡ್ಯ (Mandya) ಕ್ಷೇತ್ರ ಇದೀಗ ಜೆಡಿಎಸ್‌ ಜತೆಗೆ ಕಾಂಗ್ರೆಸ್‌ (congress) ಮತ್ತು ಬಿಜೆಪಿಗಳಿಗೂ (BJP) ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಮೂರೂ ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ವಿಭಿನ್ನ ರೀತಿಯ ಕಾರ್ಯತಂತ್ರ ರೂಪಿಸಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಈವರೆಗೆ ಪ್ರವೇಶ ಪಡೆದವರಲ್ಲಿ ಜೆಡಿಎಸ್‌ನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದ 24 ವರ್ಷದ ಇತಿಹಾಸವನ್ನೊಮ್ಮೆ ಗಮನಿಸಿದರೆ ಜಿ.ಬಿ.ಶಿವಕುಮಾರ್‌ , ಎಚ್‌.ಹೊನ್ನಪ್ಪ, ಬಿ.ರಾಮಕೃಷ್ಣ, ಎನ್‌.ಅಪ್ಪಾಜಿಗೌಡ (Appaki gowda) ಸೇರಿ ಪ್ರಮುಖರು ಜನತಾದಳದಿಂದ ವಿಧಾನ ಪರಿಷತ್‌ಗೆ (MLC) ಆಯ್ಕೆಯಾಗಿದ್ದರು. 2003ರಲ್ಲಿ ಎಸ್‌.ಎಂ.ಕೃಷ್ಣ (CM Krishna) ಸಿಎಂ ಆಗಿದ್ದ ಸಮಯದಲ್ಲಿ ಎಸ್‌.ಎಂ.ಶಂಕರ್‌ ಕಾಂಗ್ರೆಸ್‌ನಿಂದ ಪರಿಷತ್‌ ಪ್ರವೇಶಿಸಿದ್ದರು. 2015ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎನ್‌.ಅಪ್ಪಾಜಿ ಗೌಡರು ಇದೀಗ ಮರು ಆಯ್ಕೆ ಬಯಸಿ ಮತ್ತೊಮ್ಮೆ ಅಖಾಡದಲ್ಲಿ ಉಳಿದುಕೊಂಡಿದ್ದಾರೆ. ಜೆಡಿಎಸ್‌ನ 6 ಶಾಸಕರು, ಇಬ್ಬರು ಪರಿಷತ್‌ ಸದಸ್ಯರು ಎನ್‌.ಅಪ್ಪಾಜಿ ಗೌಡರ ಬೆನ್ನಿಗಿದ್ದಾರೆ. ಕಳೆದ ಗ್ರಾಪಂ ಚುನಾವಣೆಯಲ್ಲಿ (Grama Panchayat Election) ಜೆಡಿಎಸ್‌ ಬೆಂಬಲಿತರು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ ಎನ್ನಲಾಗಿದ್ದು, ಇದು ಪಕ್ಷದ ಗೆಲುವಿಗೆ ಸಹಕಾರಿಯಾಗಬಹುದು ಎಂಬ ನಿರೀಕ್ಷೆ ಇದೆ.

ಅಸ್ತಿತ್ವಕ್ಕಾಗಿ ‘ಕೈ’ ಹೋರಾಟ: 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 1 ಸ್ಥಾನವನ್ನೂ ಗೆಲ್ಲಲಾಗದ ಕಾಂಗ್ರೆಸ್‌ (Congress) ಪಾಲಿಗೆ ಈ ಪರಿಷತ್‌ ಚುನಾವಣೆ ಅಸ್ತಿತ್ವದ ಹೋರಾಟವಾಗಿದೆ. ಪಕ್ಷದ ಅಚ್ಚರಿಯ ಅಭ್ಯರ್ಥಿ ದಿನೇಶ್‌ ಗೂಳಿಗೌಡ (Dinesh Guligowda) ಅವರು ಎಲ್ಲಾ ನಾಯಕರನ್ನು ಒಗ್ಗೂಡಿಸಿಕೊಂಡು ತಾಲೂಕು ಕೇಂದ್ರಗಳಲ್ಲಿ ಪ್ರಚಾರದ ಧೂಳೆಬ್ಬಿಸಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್‌ - ಬಿಜೆಪಿಯೊಂದಿಗೆ ಮೈತ್ರಿ ಮಾತುಗಳು ಕೇಳಿ ಬಂದಿರುವುದರಿಂದ ಗೂಳಿಗೌಡಗೆ ವಿಜಯ ಮಾಲೆ ತೊಡಿಸಲು ಹೊಸ ರಣನೀತಿ ಅನುಸರಿಸುತ್ತಿದೆ. ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ (N cheluvarayaswamy), ಪಿ.ಎಂ.ನರೇಂದ್ರ ಸ್ವಾಮಿ ಪಕ್ಷದ ಚುನಾವಣಾ ಸಾರಥ್ಯ ವಹಿಸಿದ್ದಾರೆ.

ಬಿಜೆಪಿಗೆ ಗೆಲ್ಲುವ ಅನಿವಾರ್ಯತೆ:  ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡರಿಗೂ (Narayana Gowda) ಇದು ಪ್ರತಿಷ್ಠೆಯ ಚುನಾವಣೆ. ಕಳೆದ ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯ ಕೆಲವೆಡೆ ಬಿಜೆಪಿ (BJP) ಸ್ವಲ್ಪ ನೆಲೆ ಕಂಡುಕೊಂಡಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಅಧಿಕಾರ ಬಲದೊಂದಿಗೆ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿತರನ್ನು ಸೆಳೆಯುವ ಸಾಹಸಕ್ಕೆ ಮುಂದಾಗಿದೆ.

Follow Us:
Download App:
  • android
  • ios