Council Election Karnataka : ಬಿಜೆಪಿ, ಕಾಂಗ್ರೆಸ್ ಸಮಬಲ : ರೋಚಕ ಫಲಿತಾಂಶ
- ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆಗೆ ಅಖಾಡ ಸಿದ್ಧ
- ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ
ವರದಿ : ಶೇಷಮೂರ್ತಿ ಅವಧಾನಿ
ಕಲಬುರಗಿ (ನ.29): ಕಲಬುರಗಿ-ಯಾದಗಿರಿ (Kalaburagi - Yadgir) ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ (MLC Election) ಅಖಾಡ ಸಿದ್ಧವಾಗಿದ್ದು ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯಿಂದ (BJP) ಪುನರಾಯ್ಕೆ ಬಯಸಿ ಉದ್ದಿಮೆ ದಾರ ಬಿ.ಜಿ.ಪಾಟೀಲ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೆ, ಕಾಂಗ್ರೆಸ್ (congress) ಹೊಸಮುಖವಾಗಿ ಜಿ.ಪಂ. ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್ (Shivananda Patil) ಮರತೂರ್ ಅವರನ್ನು ಕಣಕ್ಕಿಳಿಸಿದೆ. ಕೈ - ಕಮಲದ ಹಣಾಹಣಿಯ ನಡುವೆ ಪಕ್ಷೇತರರಾಗಿ ಮಲ್ಲಿಕಾರ್ಜುನ ಶರಣಪ್ಪ (Mallikarjun Sharanappa) ಕೋಡ್ಲಿ ಕಣದಲ್ಲಿದ್ದಾರೆ.
ಬಿಜೆಪಿಯ (BJP) ಬಿ.ಜಿ.ಪಾಟೀಲ್, ಕಾಂಗ್ರೆಸ್‌ನ (Congress) ಶಿವಾನಂದ ಇವರಿಬ್ಬರೂ ಪ್ರಬಲ ಲಿಂಗಾಯತ ಸಮಾಜದವರೇ ಆಗಿರುವುದರಿಂದ ಕಣದಲ್ಲಿ ಜಾತಿ, ಉಪ ಜಾತಿಗಳ ಚರ್ಚೆ ಬಲಗೊಳ್ಳುತ್ತಿದೆ. ಬಿಜೆಪಿ (BJP), ಕಾಂಗ್ರೆಸ್ (Congress) ಪಕ್ಷಗಳವರು ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರ ಸಭೆ, ಪಾಲಿಕೆಗಳಲ್ಲಿ ಹೆಚ್ಚು ಕಮ್ಮಿ ಸಮಬಲ ಇರುವುದರಿಂದ ಹಣಾಹಣಿ ಹೀಗೇ ಆಗುತ್ತದೆ ಎಂದು ಹೇಳಲಾಗದು. ಹಲವಾರು ಸಂಗತಿಗಳು ಮತದಾನದ ಮೇಲೆ ಪ್ರಭಾವ ಬೀರುವುದರಿಂದ ಫಲಿತಾಂಶ ರೋಚಕವಾಗಿರಲಿದೆ ಎಂದು ಮತದಾರರೇ ಹೇಳುತ್ತಿದ್ದಾರೆ.
ಪುನರಾಯ್ಕೆ ಬಯಸಿರುವ ಬಿಜೆಪಿಯ ಬಿ.ಜಿ.ಪಾಟೀಲರು ಪರಿಷತ್‌ಗೆ ಆಯ್ಕೆಯಾದ ಮೇಲೆ 6 ವರ್ಷದಲ್ಲಿ ಒಮ್ಮೆಯೂ ತಮ್ಮತ್ತ ನೋಡಿಲ್ಲ. ಪಂಚಾಯ್ತಿಗಳವರ ಸಂಕಷ್ಟಗಳಿಗೆ ಸ್ಪಂದಿಸಿದ್ದು ಅಷ್ಟಕ್ಕಷ್ಟೆಎಂಬ ಚರ್ಚೆಗಳು ಕೇಳಿ ಬರುತ್ತವೆಯಾದರೂ ಇವನ್ನೆಲ್ಲ ಮೆಟ್ಟಿನಿಲ್ಲುವ ವಿಶ್ವಾಸವನ್ನು ಬಿಜೆಪಿ (BJP) ವ್ಯಕ್ತಪಡಿಸುತ್ತಿದೆ. ಇನ್ನು ಕಾಂಗ್ರೆಸ್‌ನ (Congress) ಶಿವಾನಂದ ಪಾಟೀಲ್ ಪಂಚಾಯ್ತಿ ಹಂತದಲ್ಲಿ ಚಿರಪರಿಚಿತರಾದರೂ ಮೇಲ್ಮನೆ ಕಣದಲ್ಲಿ ಹೊಸಮುಖ. ತಾಪಂ, ಜಿಪಂ ಹಿನ್ನೆಲೆಯವರೆಂದು ಮತದಾರರ ಮುಂದೆ ಸಾಗುತ್ತಿದ್ದು, ಉಭಯ ಜಿಲ್ಲೆಗಳ ಕೈ ನಾಯಕರ ಬೆಂಬಲ ಇವರಿಗೆ ಅದ್ಯಾವ ಪ್ರಮಾಣದಲ್ಲಿ ಸಿಗುವುದು ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.
ಕಣದಲಿರುವ ಅಭ್ಯರ್ಥಿಗಳು
1) ಶಿವಾನಂದ ಪಾಟೀಲ್ ಮರತೂರ್- ಕಾಂಗ್ರೆಸ್
2) ಬಿಜಿ ಪಾಟೀಲ್- ಬಿಜೆಪಿ
3) ಮಲ್ಲಿಕಾರ್ಜುನ ಕೋಡ್ಲಿ- ಪಕ್ಷೇತರ
ಒಟ್ಟು ಮತದಾರರು- 7, 089
ಕಲಬುರಗಿ ಜಿಲ್ಲೆ- 4, 632
ಯಾದಗಿರಿ ಜಿಲ್ಲೆ- 2, 457
ಪುರುಷರು- 5562
ಮಹಿಳೆಯರು- 6159
2015ರ ಚುನಾವಣೆ ಫಲಿತಾಂಶ
ಬಿ.ಜಿ.ಪಾಟೀಲ್(ಬಿಜೆಪಿ)-3854
ಅಲ್ಲಂಪ್ರಭು ಪಾಟೀಲ್ ನೆಲೋಗಿ(ಕಾಂಗ್ರೆಸ್)-3041
ಪುರುಷರು- 2, 208
ಮಹಿಳೆಯರು- 2, 424
ಪುರುಷರು- 3, 354
ಮಹಿಳೆಯರು- 3, 735
ಜೆಡಿಎಸ್ ಮೇಲೆ ಕಣ್ಣು
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಕುರಿತು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನೆರಡು ದಿನದಲ್ಲಿ ಪ್ರತಿಕ್ರಿಯೆ ನೀಡಬಹುದು. ಕಾದು ನೋಡೋಣ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ(Vidhan Parishat Election) ಜೆಡಿಎಸ್‌ನೊಂದಿಗೆ(JDS) ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ನಾನೇ ಪ್ರಸ್ತಾಪ ಮಾಡಿದ್ದೇನೆ. ಕುಮಾರಸ್ವಾಮಿ(HD Kumaraswamy) ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡೋಣ ಎಂದರು.
ಪರಿಷತ್ ಚುನಾವಣೆಯಲ್ಲಿ ಬಜೆಪಿ(BJP) ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಅದರಲ್ಲಿ ಅನುಮಾನ ಬೇಡ. 20 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅದರಲ್ಲಿ ಕನಿಷ್ಠ 15 ಸ್ಥಾನದಲ್ಲಿ ನಾವು ಗೆಲುವು ಸಾಧಿಸುವುದು ನಿಶ್ಚಿತ. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಬಿಜೆಪಿ ಪರವಾದ ಅಭಿಪ್ರಾಯ ಕೇಳಿಬರುತ್ತಿದೆ. ಅಲ್ಲದೆ, ಸರ್ಕಾರದ(Government of Karnataka) ಅಭಿವೃದ್ಧಿ ಕೆಲಸವನ್ನು ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಇದೆಲ್ಲವೂ ನಮಗೆ ವರದಾನವಾಗಲಿದೆ ಎಂದರು.