Asianet Suvarna News Asianet Suvarna News

Karnataka Govt Employees : ಸಚಿವರಿಗೆ ವರ್ಗಾವಣೆಯ ಅಧಿಕಾರ

  • ವಿವಿಧ ಇಲಾಖೆಗಳಲ್ಲಿನ ಬಿ, ಸಿ ಹಾಗೂ ಡಿ ದರ್ಜೆಯ ಅಧಿಕಾರಿ ಮತ್ತು ನೌಕರರ ವರ್ಗಾವಣೆ
  • ನೌಕರರ ವರ್ಗಾವಣೆ ಮಾಡಲು ಇಲಾಖಾ ಸಚಿವರಿಗೆ ಕೆಲವು ಷರತ್ತುಗಳೊಂದಿಗೆ ಒಂದು ತಿಂಗಳ ಸೀಮಿತ ಅವಧಿಯ ಅಧಿಕಾರ
karnataka Govt Gave Permission to Minister for Govt Employees Transfer  snr
Author
Bengaluru, First Published Nov 26, 2021, 12:08 PM IST
  • Facebook
  • Twitter
  • Whatsapp

ಬೆಂಗಳೂರು (ನ.26):   ವಿವಿಧ ಇಲಾಖೆಗಳಲ್ಲಿನ ಬಿ, ಸಿ ಹಾಗೂ ಡಿ ದರ್ಜೆಯ ಅಧಿಕಾರಿ ಮತ್ತು ನೌಕರರ (Employees) ವರ್ಗಾವಣೆ ಮಾಡಲು ಇಲಾಖಾ ಸಚಿವರಿಗೆ (Ministers) ಕೆಲವು ಷರತ್ತುಗಳೊಂದಿಗೆ ಒಂದು ತಿಂಗಳ ಸೀಮಿತ ಅವಧಿಯ ಅಧಿಕಾರ ನೀಡಿ ರಾಜ್ಯ ಸರ್ಕಾರ (karnataka govt) ಹೆಚ್ಚುವರಿ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಿದೆ. ಇದರಡಿ ಒಟ್ಟು ಸಿಬ್ಬಂದಿಯ ಶೇ.6ರಷ್ಟು ಮೀರದಂತೆ ಗ್ರೂಪ್-ಬಿ, ಗ್ರೂಪ್-ಸಿ ಹಾಗೂ ಡಿ ಗ್ರೂಪ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಲಭ್ಯವಿರುವ ಖಾಲಿ ಸ್ಥಾನಗಳಿಗೆ ಮಾತ್ರ ವರ್ಗಾವಣೆ ಮಾಡಬಹುದು. ಹಾಲಿ ಹುದ್ದೆಯಲ್ಲಿ ತಮ್ಮ ಕನಿಷ್ಠ ಸೇವಾವಧಿ ಪೂರೈಸಿರುವ ಅಧಿಕಾರಿ, ಸಿಬ್ಬಂದಿಯ ವರ್ಗಾವಣೆ ಮಾತ್ರ ಅನುಮೋದಿಸಬೇಕೆಂದು ಷರತ್ತು ವಿಧಿಸಲಾಗಿದೆ. 

ಈ ನಿಯಮ ಒಂದು ತಿಂಗಳವರೆಗೆ ಮಾತ್ರ ಅನ್ವಯವಾಗಲಿದ್ದು ಬಳಿಕ ಮುಂದಿನ ಸಾರ್ವತ್ರಿಕ ವರ್ಗಾವಣೆವರೆಗೆ ಯಾವುದೇ ಅವಧಿ ಪೂರ್ವ ವರ್ಗಾವಣೆ ಮಾಡುವಂತಿಲ್ಲ. ಮುಖ್ಯಮಂತ್ರಿಗಳಿಗೂ (CM)  ವರ್ಗಾವಣೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂದು ಮಾರ್ಗಸೂಚಿ ಯಲ್ಲಿ ಸ್ಪಷ್ಟಪಡಿಸಲಾಗಿದೆ. 

ವರ್ಗಾವಣೆ ಮಾರ್ಗಸೂಚಿ ಅನ್ವಯ ಕೆಲವು ವಿಶೇಷ ಪ್ರಕರಣಗಳಲ್ಲಿ ಹಾಗೂ ಸಾರ್ವತ್ರಿಕ ವರ್ಗಾವಣೆ ನಂತರ ಮಾಡುವ ವರ್ಗಾವಣೆಗಳಿಗೆ ಸಿಎಂರಿಂದ ಅನುಮೋದನೆ ಪಡೆವುದು ಕಡ್ಡಾಯವಾಗಿತ್ತು. ಆದರೆ, ಇದೀಗ ಮುಖ್ಯ ಮಂತ್ರಿಗಳ ಅನುಮೋದನೆಗೆ ಸಲ್ಲಿಸಿರುವ ಬಹುತೇಕ ವರ್ಗಾವಣೆಗಳು ನಿಯಮಿತ (ರೆಗ್ಯುಲರ್) ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳು. ಹೀಗಾಗಿ ಲಭ್ಯವಿರುವ ಖಾಲಿ ಸ್ಥಾನಗಳಿಗೆ ಮಾತ್ರ ತಮ್ಮ ಕನಿಷ್ಠ ಸೇವಾವಧಿ ಪೂರೈಸಿರುವ ಅಧಿಕಾರಿ, ಸಿಬ್ಬಂದಿಗಳ ವರ್ಗಾವಣೆಗಳನ್ನು ಅನುಮೋದಿಸಲು ಆಯಾ ಇಲಾಖೆ ಸಚಿವರಿಗೆ ಅಧಿ ಕಾರ ನೀಡಲಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

ಇದೇ ವೇಳೆ ಈ ರೀತಿ ವರ್ಗಾವಣೆ ಮಾಡಿದಾಗ ಅಂತಹ ವರ್ಗಾವಣೆಯಿಂದ ತೆರವಾದ ಸ್ಥಾನವನ್ನು ಮತ್ತೊಂದು ವರ್ಗಾವ ಣೆಯಿಂದ ಭರ್ತಿ ಮಾಡುವಂತಿಲ್ಲ. ಈ ಮಾರ್ಗಸೂಚಿ ಪ್ರಕಟವಾದ ದಿನಾಂಕದಿಂದ 1 ತಿಂಗಳ ಅವಧಿಗೆ ಈ ಅವಕಾಶ ಚಾಲ್ತಿಯಲ್ಲಿರಲಿದೆ. ಪ್ರತಿ ವರ್ಷ ಮೇ ಹಾಗೂ ಜೂನ್‌ನಲ್ಲಿ ಮಾತ್ರ ಷರತ್ತುಗಳಿಗೊ ಳಪಟ್ಟು ಸಾರ್ವತ್ರಿಕ ವರ್ಗಾವಣೆ ಮಾಡಬಹುದು. 2021-22ನೇ ಸಾಲಿಗೆ ಅನ್ವಯವಾಗುವಂತೆ ಬಿ, ಸಿ, ಡಿ ಗ್ರೂಪ್ ಅಧಿಕಾರಿ ಹಾಗೂ ನೌಕರರಿಗೆ ಮಾತ್ರ ಅನ್ವಯವಾಗುವಂತೆ ಕಾರ್ಯನಿರತ ವೃಂದದ ಶೇ. 6ರಷ್ಟನ್ನು ಮೀರದಂತೆ ವರ್ಗಾವಣೆ ಕ್ರಮ ಕೈಗೊಳ್ಳಲು ಜುಲೈ 22ರವರೆಗೆ ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿತ್ತು. ಈ ಅವಧಿ ಜು.22ಕ್ಕೆ ಮುಕ್ತಾಯಗೊಂಡಿದೆ. 

ಕಲ್ಯಾಣ ಕರ್ನಾಟಕದಲ್ಲಿ ನೇರ ನೇಮಕಕ್ಕೆ  ಅಸ್ತು ? 

ಕೊರೋನಾದಿಂದ (Corona) ಉಂಟಾದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ವೆಚ್ಚ ಕಡಿತ ಮಾಡಲು ಕಲ್ಯಾಣ ಕರ್ನಾಟಕ ಭಾಗದ ವಿವಿಧ ಹುದ್ದೆಗಳ ನೇಮಕಾತಿಗೆ ತಡೆ ನೀಡಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದ್ದು, ಷರತ್ತುಗಳೊಂ ದಿಗೆ ನೇರ ನೇಮಕಕ್ಕೆ ಅವಕಾಶ ನೀಡಿ ಆದೇಶ ನೀಡಿದೆ. ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆ ಉಂಟಾಗಿದೆ. 

ಹೀಗಾಗಿ ಆ ಭಾಗದಲ್ಲಿ ನೇರ ನೇಮ ಕಾತಿಯಲ್ಲಿ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಂತದಲ್ಲಿಯೇ ನೇಮಕಾತಿ ಪ್ರಕ್ರಿಯೆ ಮುಂದುವರೆಸಿ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕ ವೃಂದದಲ್ಲಿ ಈಗಾಗಲೇ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಸಹಮತಿ ನೀಡಿರುವ ಪ್ರಕರಣಗಳಲ್ಲಿ ನೇಮಕಾತಿ ಆದೇಶ ನೀಡಬೇಕು. ಉಳಿದ ಇಲಾಖೆಗಳಲ್ಲಿ ವೃಂದ ಬಲ ಶೇ.80ಕ್ಕಿಂತ ಕಡಿಮೆ ಇದ್ದರೆ ಮಾತ್ರ ವೃಂದದ ಶೇ.80ರಷ್ಟರವರೆಗಿನ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬಹುದು. 

ಇನ್ನು ಶೀಘ್ರ ಲಿಪಿಗಾರರು, ಬೆರಳಚ್ಚುಗಾರ, ವಾಹನ ಚಾಲಕ, ಡಿ- ದರ್ಜೆ ಹುದ್ದೆ ಗಳನ್ನು ಅನುದಾನದ ಲಭ್ಯತೆಗೆ ಅನ್ವಯವಾಗುವಂತೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಬೇಕು. ನೇರ ನೇಮಕಾತಿ ಮೂಲಕ ಭರ್ತಿಯಾಗುವ ಹುದ್ದೆಗಳಿಗೆ ಆಯವ್ಯಯದಲ್ಲಿ ಸೂಕ್ತ ಅನುದಾನ ಕಲ್ಪಿಸಬೇಕಿರುವುದರಿಂದ ನೇಮಕಾತಿ ಆದೇಶ ಹೊರಡಿಸುವ ಮೊದಲು ಆರ್ಥಿಕ ಇಲಾಖೆ ಅನುಮತಿ ಪಡೆಯ ಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶದಲ್ಲಿ ತಿಳಿಸಿದೆ.

Follow Us:
Download App:
  • android
  • ios