Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯೇ ಇಲ್ಲದೆ ಅಧಿಸೂಚನೆ!

ನಗರಸಭಾ ಚುನಾವಣೆ ಅಧಿಸೂಚನೆ ಹೊರಡಿಸಿ ಎರಡು ದಿನಗಳೇ ಕಳೆದರೂ ನಗರಸಭೆ ವ್ಯಾಪ್ತಿಯ ಮತದಾರರ ಪಟ್ಟಿನೀಡದ ಕಾರಣ ನಾಮಪತ್ರ ಸಲ್ಲಿಕೆಗೆ ಹಿನ್ನೆಡೆಯಾಗಿದೆ ಎಂದು ಆಕಾಂಕ್ಷಿಗಳು ಆರೋಪಿಸಿದ್ದಾರೆ. ಅಲ್ಲದೆ ಮತದಾರರ ಪಟ್ಟಿನೀಡದ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ.

Corporation polls notification released without proper arrangements in chikkaballapur
Author
Bangalore, First Published Jan 23, 2020, 10:35 AM IST

ಚಿಕ್ಕಬಳ್ಳಾಪುರ(ಜ.23): ಅಗತ್ಯ ಪೂರ್ವಸಿದ್ಧತೆಗಳಿಲ್ಲದೆ ನಗರಸಭಾ ಚುನಾವಣೆಗೆ ಅದಿಸೂಚನೆ ಹೊರಡಿಸಲಾಗಿದೆಯೇ ಎಂಬ ಅನುಮಾನ ಕಾಡುತ್ತಿದ್ದು, ಚುನಾವಣಾಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ನಗರಸಭೆಗೆ ಕಳೆದ ಜ.16 ರಂದೇ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಜ.21ರ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌. ಲತಾ ಅವರು ಅಧಿಸೂಚನೆ ಹೊರಡಿಸಿ, ನಾಮಪತ್ರ ಸ್ವೀಕರಿಸಲು ವಾರ್ಡುವಾರು ಅಧಿಕಾರಿಗಳನ್ನು ನೇಮಿಸಿ ಆದೇಶಿಸಿದ್ದಾರೆ.

ಮತದಾರರ ಪಟ್ಟಿಯೇ ಇಲ್ಲ!

ನಗರಸಭಾ ಚುನಾವಣೆ ಅಧಿಸೂಚನೆ ಹೊರಡಿಸಿ ಎರಡು ದಿನಗಳೇ ಕಳೆದರೂ ನಗರಸಭೆ ವ್ಯಾಪ್ತಿಯ ಮತದಾರರ ಪಟ್ಟಿನೀಡದ ಕಾರಣ ನಾಮಪತ್ರ ಸಲ್ಲಿಕೆಗೆ ಹಿನ್ನೆಡೆಯಾಗಿದೆ ಎಂದು ಆಕಾಂಕ್ಷಿಗಳು ಆರೋಪಿಸಿದ್ದಾರೆ. ಅಲ್ಲದೆ ಮತದಾರರ ಪಟ್ಟಿನೀಡದ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ.

ನಗರಸಭಾ ಚುನಾವಣೆ: ನಾಮಪತ್ರ ಸಲ್ಲಿಸಲು 28 ಕೊನೆಯ ದಿನ

ಮತದಾರರ ಪಟ್ಟಿಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ ನಂತರ ಚುನಾವಣೆಗೆ ಅಧಿಸೂಚನೆ ಹೊರಡಿಸಬೇಕು ಎಂಬುದು ನಿಯಮ. ಆದರೆ ಅಧಿಸೂಚನೆ ಹೊರಡಿಸಿ ಎರಡು ದಿನಗಳೇ ಕಳೆದರೂ ನೂತನ ಮತದಾರರಪಟ್ಟಿನೀಡದಿರುವುದು ಪ್ರಸ್ತುತ ಸಮಸ್ಯೆಯಾಗಿದೆ.

ಸಮಸ್ಯೆ ಏನು?

ನಾನಾ ವಾರ್ಡುಗಳಿಗೆ ಮೀಸಲಾತಿಯಂತೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ಹಲವು ಮತದಾರರು ಸೂಚಕರಾಗಿ ಸಹಿ ಮಾಡಬೇಕಿದೆ. ಅಲ್ಲದೆ ಸೂಚಕರಾಗಿ ಸಹಿ ಮಾಡಿದ ಮತದಾರರ ಪೂರ್ಣ ಹೆಸರು ಮತ್ತು ಮತದಾರರ ಪಟ್ಟಿಯಲ್ಲಿರುವ ಅವರ ಹೆಸರಿನ ಕ್ರಮಾಂಕವನ್ನು ತಪ್ಪದೇ ನಮೂದಿಸಬೇಕಿದೆ. ಇವು ನಮೂದಿಸದಿದ್ದರೆ ನಾಮಪತ್ರ ತಿರಸ್ಕೃತವಾಗಲಿದೆ.

ಚೆಲುವಿನ ಚಿತ್ತಾರದ ಪ್ರೇಮ ಕತೆಗೆ ಪೊಲೀಸರೇ ಹೀರೋಗಳು!

ಆದರೆ ಪ್ರಸ್ತುತ ಹಳೆಯ ಮತದಾರರ ಪಟ್ಟಿಯಲ್ಲಿರುವ ಕ್ರಮಾಂಕದಂತೆ ಸೂಚಕರು ನಾಮಪತ್ರದಲ್ಲಿ ನಮೂಡಿಸಿದರೆ, ನೂತನ ಮತದಾರರ ಪಟ್ಟಿಯಲ್ಲಿ ಕ್ರಮಾಂಕ ಬದಲಾಗಿದ್ದರೆ ಅಂತಹ ನಾಮಪತ್ರ ತಿರಸ್ಕೃತವಾಗಲಿದೆ ಎಂಬುದು ಅಭ್ಯರ್ಥಿಗಳ ಆತಂಕವಾಗಿದೆ. ಅಲ್ಲದೆ ನಾಮಪತ್ರ ಸಲ್ಲಿಸಲಿರುವ ಅಭ್ಯರ್ಥಿಗಳ ಹೆಸರಿನಂತೆ ಉತ್ತಮ ದಿನ ಮತ್ತು ಸಮಯ ನೋಡಿ ನಾಮಪತ್ರ ಸಲ್ಲಿಸುತ್ತಿದ್ದು, ಇದಕ್ಕೆ ಮತದಾರರ ಪಟ್ಟಿಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

ರಾಜ್ಯ ಆಯೋಗಕ್ಕೆ ದೂರು!

ಮತದಾರರ ಪಟ್ಟಿಯೇ ಇಲ್ಲದೆ ಚುನಾವಣಾ ಅಧಿಸೂಚನೆ ಹೊರಡಿಸುವ ಮೂಲಕ ಚುನಾವಣಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ ನಗರದ ರವಿಚಂದ್ರಕುಮಾರ್‌ ಎಂಬುವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಮತದಾರರ ಪಟ್ಟಿನೀಡದ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರವಾಣಿಯಲ್ಲಿ ದೂರು ಸಲ್ಲಿಸಿದರೆ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಜ.28 ಕೊನೆಯ ದಿನವಾಗಿದ್ದು, ಈಗಾಗಲೇ ಎರಡು ದಿನ ಪೂರ್ಣಗೊಂಡಿರುವ ಕಾರಣ ನಾಮಪತ್ರ ಸಲ್ಲಿಸಬೇಕಿರುವ ಅಭ್ಯ್ರಥಿಗಳು ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದು, ಸಿದ್ಧತೆಯೇ ನಡೆಸದೆ ಅಧಿಸೂಚನೆ ಹೊರಡಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಕರೆ ಸ್ವೀಕರಿಸದ ಅಧಿಕಾರಿಗಳು!

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯ ನೂತನ ಮತದಾರರಪಟ್ಟಿನೀಡದ ಬಗ್ಗೆ ಮಾಹಿತಿ ಕೇಳಲು ಜಿಲ್ಲಾಧಿಕಾರಿ ಆರ್‌. ಲತಾ ಮತ್ತು ಉಪ ವಿಭಾಗಾಧಿಕಾರಿ ರಘುನಂದನ್‌ ಅವರನ್ನು ಕನ್ನಡಪ್ರಭ ಸಂಪರ್ಕಿಸಿದರೆ ಕರೆ ಸ್ವೀಕರಿಸಲೇ ಇಲ್ಲ. ಇನ್ನು ಚುನಾವಣಾ ಶಾಖೆಯಲ್ಲಿ ಕರ್ತವ್ಯ ನರ್ವಹಿಸುವ ಹರೀಶ್‌ ಎಂಬುವರಿಗೆ ಕರೆ ಮಾಡಿದರೆ ಮತದಾರರಪಟ್ಟಿಬಂದಿಲ್ಲ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಹಸೀಲ್ದಾರ್‌ ಅವರನ್ನು ಕೇಳುವಂತೆ ಸಲಹೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದ ರಾಧಾ-ವೆಂಕಟೇಶ, ಪ್ರಿಯತಮೆಗೆ ವಿಷ ಕುಡಿಸಿದ!

ಮತದಾರರಪಟ್ಟಿಬರುವುದು ತಡವಾಗಿದೆ. ಪ್ರಸ್ತುತ ಬಂದಿದ್ದು, ಎಲ್ಲ ಪಟ್ಟಿಗಳಿಗೆ ಸೀಲ್‌ ಹಾಕುತ್ತಿದ್ದು, ಅಭ್ಯ್ರಥಿಗಳಿಗೆ ನೀಡಲಾಗುವುದು ಎಂದು ಚಿಕ್ಕಬಳ್ಳಾಪುರ ತಹಸೀಲ್ದಾರ್‌ ನರಸಿಂಹಮೂರ್ತಿ ಹೇಳಿದ್ದಾರೆ.

-ಅಶ್ವತ್ಥನಾರಾಯಣ ಎಲ್‌

Follow Us:
Download App:
  • android
  • ios