MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರಿನ ವಿಲ್ಲಾ ಪಾರ್ಟಿ & ರೇ*ಪ್ : ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್‌ ಬಂಧನ

ಬೆಂಗಳೂರಿನ ವಿಲ್ಲಾ ಪಾರ್ಟಿ & ರೇ*ಪ್ : ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್‌ ಬಂಧನ

ಬೆಂಗಳೂರಿನ ಅಮೃತಹಳ್ಳಿಯ ವಿದ್ಯಾರ್ಥಿನಿ ಮೇಲಿನ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಿಖಿಲ್‌ನ ಸ್ನೇಹಿತನಾಗಿರುವ ಈತ, ಘಟನೆ ನಡೆದಿದೆ ಎನ್ನಲಾದ ವಿಲ್ಲಾವನ್ನು ಬುಕ್ ಮಾಡಿದ್ದನು. 

1 Min read
Author : Mahmad Rafik
Published : Mar 01 2026, 11:08 AM IST
Share this Photo Gallery
  • FB
  • TW
  • Linkdin
  • Whatsapp
15
ಅನಿರುಧ್
Image Credit : Asianet News

ಅನಿರುಧ್

ಬೆಂಗಳೂರಿನ ಅಮೃತಹಳ್ಳಿಯ ವಿದ್ಯಾರ್ಥಿನಿ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿ ಪುತ್ರನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅನಿರುಧ್ ಎಂದು ಗುರುತಿಸಲಾಗಿದೆ. ಅನಿರುಧ್ ಸೇರಿದಂತೆ ಒಟ್ಟು ಐವರ ಬಂಧನವಾಗಿದೆ.

25
ಮಾಜಿ ಕಾರ್ಪೋರೇಟರ್ ಪುತ್ರ
Image Credit : Asianet News

ಮಾಜಿ ಕಾರ್ಪೋರೇಟರ್ ಪುತ್ರ

ಮಾಜಿ ಕಾರ್ಪೋರೇಟರ್ ಪುತ್ರನಾಗಿರುವ ಅನಿರುಧ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅತ್ಯಾ*ಚಾರ ನಡೆದಿದೆ ಸ್ಥಳ ಎನ್ನಲಾದ ವಿಲ್ಲಾ ಬುಕಿಂಗ್ ಸಂಬಂಧ ವಿಚಾರಣೆ ನಡೆಸಲು ಅನಿರುಧ್‌ಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆ ಬಳಿಕ ಹೆಚ್ಚಿನ ತನಿಖೆಗಾಗಿ ಅನಿರುಧ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Related Articles

Related image1
ಇಸ್ರೇಲ್-ಇರಾನ್ ಸಂಘರ್ಷ: ಟೆಹ್ರಾನ್‌ನಲ್ಲಿ ಸಿಲುಕಿದ 150ಕ್ಕೂ ಹೆಚ್ಚು ಕನ್ನಡಿಗರು; ಸಂಪರ್ಕ ಸಿಗದೇ ಪೋಷಕರು ಕಂಗಾಲು!
Related image2
'ಬೆಂಕಿಯಿಲ್ದೇ ಹೊಗೆ ಆಡೋದಿಲ್ಲ'.. ಸಂದೀಪ್ ವಂಗಾ-ಪ್ರಭಾಸ್ ಜೋಡಿಯ 'ಸ್ಪಿರಿಟ್'ನಿಂದ ಪ್ರಕಾಶ್ ರಾಜ್ ಔಟ್ ಆಗಿರೋದು ಪಕ್ಕಾ?
35
ನಿಖಿಲ್‌ ಸ್ನೇಹಿತನೇ ಈ ಅನಿರುಧ್
Image Credit : Asianet News

ನಿಖಿಲ್‌ ಸ್ನೇಹಿತನೇ ಈ ಅನಿರುಧ್

ಗುತ್ತಿಗೆದಾರನಾಗಿರುವ ಅನಿರುಧ್, ದಾವಣಗೆರೆ ಮೂಲದ ನಿವಾಸಿ. ಅನಿರುಧ್ ತಂದೆ ದಾವಣಗೆರೆಯ ಮಾಜಿ ನಗರ ಪಾಲಿಕೆ ಸದಸ್ಯ ಎಂದು ಹೇಳಲಾಗುತ್ತಿದೆ. ಅನಿರುಧ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅನಿರುಧ್ ಪ್ರಮುಖ ಆರೋಪಿಯಾಗಿರುವ ನಿಖಿಲ್‌ ಸ್ನೇಹಿತನಾಗಿದ್ದಾನೆ. ಅನಿರುದ್ಧ್, ಮೋಹಿತ್, ಶರವಣ್, ನಿಖಿಲ್, ಡಿಕ್ಸನ್ ಬಂಧಿತ ಆರೋಪಿಗಳು

45
ಕಾರು ಮಾರಾಟ ಮಳಿಗೆ
Image Credit : Asianet News

ಕಾರು ಮಾರಾಟ ಮಳಿಗೆ

ರಾಜಾಜಿನಗರದ ಸಮೀಪ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನಿಖಿಲ್‌ ಹೊಂದಿದ್ದಾನೆ. ಮಲ್ಲೇಶ್ವರದಲ್ಲಿ ನಿಖಿಲ್ ವಾಸವಾಗಿದ್ದ. ಮೋಜು ಮಸ್ತಿಗೆ ಜೀವನಕ್ಕೆ ಬಿದ್ದಿದ್ದ ಈತ, ವಾರಾಂತ್ಯಗಳಲ್ಲಿ ಪಾರ್ಟಿಗಳು ಹಾಗೂ ಆಫ್ಟರ್‌ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದನು.

ಇದನ್ನೂ ಓದಿ: ಜಕ್ಕೂರು ವಿಲ್ಲಾ ಪಾರ್ಟಿಯಲ್ಲಿದ್ದ ಸಂತ್ರಸ್ತೆಯೂ ಸೇರಿದಂತೆ 10 ಮಂದಿಗೆ ಡ್ರಗ್ಸ್ ಪರೀಕ್ಷೆ

55
ಪಶ್ಚಿಮ ಬಂಗಾಳ ಮೂಲದ ಡಿಕ್ಸೆನ್
Image Credit : Asianet News

ಪಶ್ಚಿಮ ಬಂಗಾಳ ಮೂಲದ ಡಿಕ್ಸೆನ್

ಇನ್ನು ಪಶ್ಚಿಮ ಬಂಗಾಳ ಮೂಲದ ಡಿಕ್ಸೆನ್ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ನಂತರ ಡೇಟಿಂಗ್, ಫೋಟೋಶೂಟ್ ಹೆಸರಿನಲ್ಲಿ ಯುವತಿಯರೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಿದ್ದನು.

ಇದನ್ನೂ ಓದಿ: ಲಿವ್‌ ಇನ್ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌, ಒಪ್ಪಿದ ಹೈಕೋರ್ಟ್‌!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ಅತ್ಯಾಚಾರ ಪ್ರಕರಣ
ದಾವಣಗೆರೆ

Latest Videos
Recommended Stories
Recommended image1
ಖಮೇನಿ ಹತ್ಯೆ; ರಾಜ್ಯದ ಮಿನಿ ಇರಾನ್‌ನಲ್ಲಿ ಮೂರು ದಿನ ಶೋಕಾಚರಣೆ
Recommended image2
ಜಕ್ಕೂರು ವಿಲ್ಲಾ ಪಾರ್ಟಿಯಲ್ಲಿದ್ದ ಸಂತ್ರಸ್ತೆಯೂ ಸೇರಿದಂತೆ 10 ಮಂದಿಗೆ ಡ್ರಗ್ಸ್ ಪರೀಕ್ಷೆ
Recommended image3
ಪ್ರತಿಭಾವಂತನ ಸ್ಥಾನವನ್ನು ನೂರು ಕಂಪ್ಯೂಟರ್ ತುಂಬಿಸಲಾಗದು : ಇಸ್ರೋ ವಿಜ್ಞಾನಿ ಡಾ.ದಾರುಕೇಶ
Related Stories
Recommended image1
ಇಸ್ರೇಲ್-ಇರಾನ್ ಸಂಘರ್ಷ: ಟೆಹ್ರಾನ್‌ನಲ್ಲಿ ಸಿಲುಕಿದ 150ಕ್ಕೂ ಹೆಚ್ಚು ಕನ್ನಡಿಗರು; ಸಂಪರ್ಕ ಸಿಗದೇ ಪೋಷಕರು ಕಂಗಾಲು!
Recommended image2
'ಬೆಂಕಿಯಿಲ್ದೇ ಹೊಗೆ ಆಡೋದಿಲ್ಲ'.. ಸಂದೀಪ್ ವಂಗಾ-ಪ್ರಭಾಸ್ ಜೋಡಿಯ 'ಸ್ಪಿರಿಟ್'ನಿಂದ ಪ್ರಕಾಶ್ ರಾಜ್ ಔಟ್ ಆಗಿರೋದು ಪಕ್ಕಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved