ಕುಷ್ಟಗಿ: ರಜೆಗೆ ಗ್ರಾಮಕ್ಕೆ ಬಂದ ಯೋಧನಿಗೂ ವಕ್ಕರಿಸಿತು ಕೊರೋನಾ...!

ಸಿಆರ್‌ಪಿಎಫ್‌ ಯೋಧನಿಗೆ ಕೊರೋನಾ ಸೋಂಕು ದೃಢ| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಯರಿಗೋನಾಳ ಗ್ರಾಮದಲ್ಲಿ ನಡೆದ ಘಟನೆ| ಹೈದರಾಬಾದ್‌ನಿಂದ ತನ್ನ ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದ ಯೋಧ|

Coronavirus Infected to Soldier in Kushtagi in Koppal District

ಕುಷ್ಟಗಿ(ಜೂ.29): ಹೈದರಾಬಾದ್‌ನಿಂದ ಕುಷ್ಟಗಿ ತಾಲೂಕಿನ ಯರಿಗೋನಾಳದಲ್ಲಿರುವ ತನ್ನ ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದ ಸಿಆರ್‌ಪಿಎಫ್‌ ಯೋಧನಿಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ, ಅಕ್ಕ-ಪಕ್ಕದ 11 ಮನೆಗಳ ನಿವಾಸಿಗಳನ್ನು ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಸಿಆರ್‌ಪಿಎಫ್‌ ಯೋಧ ಕಳೆದ 15 ದಿನಗಳ ಹಿಂದೆ ಬಂದಿರುವ ಹಿನ್ನೆಲೆಯಲ್ಲಿ 7 ದಿನಗಳ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿತ್ತು. ಕ್ವಾರಂಟೈನ್‌ ಮುಗಿಯುತ್ತಿದ್ದಂತೆ ಸ್ಥಳೀಯ ಹೂಲಗೇರಾ ಆಸ್ಪತ್ರೆಯಲ್ಲಿ ಗಂಟಲು ದ್ರವ ಸಂಗ್ರಹಿಸಲಾಗಿತ್ತು. 

ಕೊಪ್ಪಳ: ಸಚಿವ ಸುರೇಶ್‌ ಕುಮಾರ್‌ಗೆ SSLC ವಿದ್ಯಾರ್ಥಿಗಳಿಂದ ಅಭಿನಂದನಾ ಪತ್ರ

ಸೋಂಕು ದೃಢಪಟ್ಟಿದ್ದು, ಪಿಡಿಒ ವೆಂಕಟೇಶ ವಂದಾಲ್‌ ನೇತೃತ್ವದಲ್ಲಿ ಯೋಧನ ಮನೆಯ ಅಕ್ಕಪಕ್ಕದ 11 ಮನೆಗಳ ನಿವಾಸಿಗಳಿಗೆ ಹೋಂ ಕೋರಂಟೈನ್‌ ಕಡ್ಡಾಯಗೊಳಿಸಲಾಯಿತು.
 

Latest Videos
Follow Us:
Download App:
  • android
  • ios