ಬೆಂಗಳೂರು (ಜೂ.02):  ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖ ಬೆನ್ನಲ್ಲೇ  ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಬೆಡ್ ಬೇಡಿಕೆಯು ಇಳಿದಿದೆ.

ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಕೊಂಚ ಮಟ್ಟಿಗೆ ಸೋಂಕು ಇಳಿಕೆಯಾಗಿದೆ. ಇದರಿಂದ  ಆಸ್ಪತ್ರೆ ಗಳಲ್ಲಿ ಬೆಡ್ಗಳು ಖಾಲಿ ಖಾಲಿಯಾಗಿವೆ. ಬೆಂಗಳೂರಿನ ಆಸ್ಪತ್ರೆ ಗಳಲ್ಲಿ ಈಗ ಬಹುತೇಕ ಬೆಡ್‌ಗಳು ಖಾಲಿಯಾಗಿವೆ.

ಮೇ ತಿಂಗಳಲ್ಲಿ ಸೋಂಕಿತರಿಗಾಗಿ ಬೆಡ್ ಪಡೆಯಲು ಎಲ್ಲೆಲ್ಲೂ ಹಾಹಾಕಾರ ಉಂಟಾಗಿದ್ದು ಇದೀಗ ಜೂನ್ ನಲ್ಲಿ ಯಾವುದೇ ಸಮಸ್ಯೆ ಎದುರಾಗುತ್ತಿಲ್ಲ. ಹಲವು ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಇವೆ. 

ಕರ್ನಾಟಕದಲ್ಲಿ ಕೊರೋನಾ ಪಾಸಿವಿಟಿವಿ ಪ್ರಮಾಣ ಇಳಿಕೆ, ಕೊಂಚ ನಿರಾಳ ಭಾವ ..

ಸರ್ಕಾರಿ ಕೋಟಾದಲ್ಲಿ ರಾಜಧಾನಿಯಲ್ಲಿ 13,383 ಬೆಡ್ ಲಭ್ಯವಿದ್ದು, 8366 ಬೆಡ್ ಖಾಲಿ ಇವೆ. ನಗರದಲ್ಲಿ ಇನ್ನೂ 4920 ಸೋಂಕಿತರು ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಕೋಟಾದಲ್ಲಿ ಜನರಲ್ ಬೆಡ್ಗಳು 7191 ಇದ್ದು,  ಜನರಲ್ ಬೆಡ್ ನಲ್ಲಿ 1304 ಸೋಂಕಿತರು ದಾಖಲಾಗಿದ್ದಾರೆ.  5,848 ಬೆಡ್ ಖಾಲಿ ಇವೆ.

ಹೆಚ್ ಡಿಯು ಬೆಡ್ 2,475 ಖಾಲಿ ಇವೆ.  4964 ಹೆಚ್ ಡಿಯು ಬೆಡ್ ನಲ್ಲಿ 2445 ಮಂದಿ ಸೋಂಕಿತರು ದಾಖಲಾಗಿದ್ದಾರೆ.  

639 ಐಸಿಯು ವೆಂಟಿಲೇಟರ್ ಬೆಡ್ ಗಳಲ್ಲಿ 618 ಸೋಂಕಿತರು ದಾಖಲಾಗಿದ್ದು,  17 ಬೆಡ್ ಖಾಲಿ ಇದೆ. 

ನಗರದಲ್ಲಿ, 589 ಐಸಿಯು ಬೆಡ್ ನಲ್ಲಿ 550 ಬೆಡ್ ನಲ್ಲಿ ಸೋಂಕಿತರು ದಾಖಲಾಗಿದ್ದು 25 ಐಸಿಯು ಬೆಡ್ ಖಾಲಿ ಇವೆ. 

ನಗರದಲ್ಲಿ ಸೋಂಕು ಇಳಿಕೆ ಮುಖ ಬೆನ್ನಲ್ಲೇ ಬೆಡ್ ಗಳು ಖಾಲಿಯಾಗಿದ್ದು, ಒಂದು ತಿಂಗಳ ಬಳಿಕ ಜನತೆ ನಿಟ್ಟಿಸಿರು ಬಿಟ್ಟಿದ್ದಾರೆ. ಒಂದು ತಿಂಗಳ ಹಿಂದೆ ನಗರದಲ್ಲಿ ಬೆಡ್ ಸಿಗದೆ ಹಾದಿಬೀದಿಯಲ್ಲಿ ಸಾವುಗಳಾಗುತ್ತಿದ್ದು, ಇದು ಬೆಂಗಳೂರಿಗರ ಪಾಲಿಗೆ ಸಮಾಧಾನದ ಸಂಗತಿಯಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona