ಕರ್ನಾಟಕದಲ್ಲಿ ಕೊರೋನಾ ಪಾಸಿವಿಟಿವಿ ಪ್ರಮಾಣ ಇಳಿಕೆ, ಕೊಂಚ ನಿರಾಳ ಭಾವ

* ರಾಜ್ಯದಲ್ಲಿ ಕೊರೋನಾ ಪಾಸಿವಿಟಿವಿ ಪ್ರಮಾಣ ಇಳಿಕೆ
* ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಳ
* ರಾಜ್ಯದ ಜನತೆಯಲ್ಲಿ ಕೊಂಚ ನಿರಾಳ ಭಾವ

Karnataka covid update  14304 new cases 29271 recoveries on June 1st rbj

ಬೆಂಗಳೂರು, (ಜೂನ್.01): ರಾಜ್ಯದಲ್ಲಿ ಕೊರೋನಾ ಪಾಸಿವಿಟಿವಿ ಪ್ರಮಾಣ ಇಳಿಕೆಯಾಗುತ್ತಿದೆ. ಇದರ ಜತೆಗೆ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದು ಕೊಂಚ ನಿರಾಳ ಭಾವ ಮೂಡಿಸಿದೆ.

ಇಂದು (ಮಂಗಳವಾರ) 14304 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು,  464  ಜನರು ಸಾವನ್ನಪ್ಪಿದ್ದಾರೆ. ಇನ್ನು ಒಂದೇ ದಿನ 29271 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಚೇತರಿಕೆ ಹಾದಿಗೆ ಕರ್ನಾಟಕ,  44473 ಡಿಸ್ಚಾರ್ಜ್, ಪಾಸಿಟಿವಿಟಿ ದರ ಶೇ. 13.5ಕ್ಕೆ ಇಳಿಕೆ

ಇದರೊಂದಿಗೆ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 2,6187,35 ಆಗಿದ್ರೆ, ಈವರೆಗೆ ಗುಣಮುಖರಾದವರೆ ಸಂಖ್ಯೆ 22,90,861 ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.  

ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 15,304ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,98,299ಕ್ಕೆ ಇಳಿಕೆಯಾಗಿದೆ. ಇದರಿಂದ ಪಾಸಿಟಿವಿಟಿ ಪ್ರಮಾಣ ಶೇ.12.30ಕ್ಕೆ ಇಳಿಕೆಯಾಗಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 3418 ಕೊರೋನಾ ಸೋಂಕು ಪ್ರಕರಣಗಳು ಕಂಡು ಬಂದಿದ್ದು, 276 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ 
ಬಾಗಲಕೋಟೆ-217, ಬಳ್ಳಾರಿ-399, ಬೆಳಗಾವಿ-891, ಬೆಂಗಳೂರು ಗ್ರಾಮಾಂತರ-202, ಬೆಂಗಳೂರು ನಗರ-3418, ಬೀದರ್-22, ಚಾಮರಾಜನಗರ-80, ಚಿಕ್ಕಬಳ್ಳಾಪುರ-152, ಚಿಕ್ಕಮಗಳೂರು-504, ಚಿತ್ರದುರ್ಗ-637, ದಕ್ಷಿಣ ಕನ್ನಡ-536, ದಾವಣಗೆರೆ-178, ಧಾರವಾಡ-267, ಗದಗ-214, ಹಾಸನ-1127, ಹಾವೇರಿ-219, ಕಲಬುರಗಿ-82, ಕೊಡಗು-162, ಕೋಲಾರ-338, ಕೊಪ್ಪಳ-272, ಮಂಡ್ಯ-337, ಮೈಸೂರು-1153, ರಾಯಚೂರು-133, ರಾಮನಗರ-138, ಶಿವಮೊಗ್ಗ-520, ತುಮಕೂರು-769, ಉಡುಪಿ-735, ಉತ್ತರ ಕನ್ನಡ-332, ವಿಜಯಪುರ-163, ಯಾದಗಿರಿ-107.

Latest Videos
Follow Us:
Download App:
  • android
  • ios