ಕಾಂಗ್ರೆಸ್ ಪಕ್ಷದಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಲವ ಕುಶ ಇದ್ದಂತೆ ಅವರು ಯಾವ ನಾಯಿಗೆ ಕಾಂಗ್ರೆಸ್ ಟವಲ್ ಹೊದಿಸಿ ಕಳುಹಿಸಿದರೂ ಅವರನ್ನು ಗೆಲ್ಲಿಸುತ್ತೇವೆ

 ಅರಕಲಗೂಡು (ಜು.17): ಕಾಂಗ್ರೆಸ್ ಪಕ್ಷದಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಲವ ಕುಶ ಇದ್ದಂತೆ. ಅವರು ಯಾವ ನಾಯಿಗೆ ಕಾಂಗ್ರೆಸ್ ಟವಲ್ ಹೊದಿಸಿ ಕಳುಹಿಸಿದರೂ ಅವರನ್ನು ಗೆಲ್ಲಿಸಿ ಕಳುಹಿಸಿಕೊಡುವಂತ ಕಾರ್ಯಕರ್ತರು ಇಂದು ಇಲ್ಲಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಸರ್ಕಾರ ಕಿತ್ತೆಸೆಯುವ ಕಾಲ ಬಂದಿದೆ: ಸೋಮಣ್ಣ ಬೇವಿನಮರದ

ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ವಿರೋಧಿಸಿ ಶುಕ್ರವಾರ ಆಯೋಜಿಸಿದ್ದ ಸೈಕಲ್ ಜಾಥಾದ ನಂತರ ಇಲ್ಲಿ ಅನಕೃ ವೃತ್ತದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಹಿಂದೆ ಸಿದ್ದರಾಮಯ್ಯ ಅವರು ಕೊಟ್ಟ 168 ಯೋಜನೆಗಳನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ ಎಂದರು. 

ಜನರು ಬದಲಾವಣೆ ಬಯಸುತ್ತಿದ್ದು, ಅರಕಲಗೂಡು ವಿಧಾನಸಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದರು. 

ಅಲ್ಲದೇ ರಾಜ್ಯದಲ್ಲಿ ಸರ್ಕಾರ ಅಲುಗಾಡುತ್ತಿದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ ಎಸ್‌ ವೈ ವಿರುದ್ಧ ವಾಗ್ದಾಳಿ ನಡೆಸಿದರು.