* ರೈತರು, ಜನ ಸಾಮಾನ್ಯರು ಬದಕದಂತಹ ಪರಿಸ್ಥಿತಿ ​ತಂದೊ​ಡ್ಡಿ​ದ ಬಿಜೆ​ಪಿ* ಬಿಜೆಪಿಗೆ ಮುಂಬರುವ ದಿನದಲ್ಲಿ ತಕ್ಕ ಪಾಠ ಕಲಿಸಬೇಕು* ಬಿಜೆಪಿ ಸರಕಾರದ ಕರ್ಮಕಾಂಡ ಮನೆ-ಮನೆಗೆ ಮುಟ್ಟಿ​ಸ​ಬೇ​ಕು 

ಶಿಗ್ಗಾಂವಿ(ಜು.17): ಕಾಂಗ್ರೆಸ್‌ 54 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಸಾಕಷ್ಟು ದುರಾಡಳಿತ ಮಾಡಿದೆ ಎನ್ನುವ ಬಿಜೆಪಿ ಸರಕಾರ ಪೆಟ್ರೋಲ್‌-ಅಡುಗೆ ಅನಿಲ, ಜನಸಾಮಾನ್ಯರಿಗೆ ಹಾಗೂ ಮಧ್ಯಮ ವರ್ಗದ ಜನತೆಗೆ ಅಗತ್ಯ ವಸ್ತು​ಗಳ ಬೆಲೆ ಏರಿ​ಸಿದೆ. ಜನ​ರ​ನ್ನು ಸಂ​ಕ​ಷ್ಟ​ಕ್ಕೀಡು ಮಾಡಿ​ರು​ವ ಬಿಜೆಪಿ ಸರಕಾರವನ್ನು ಕಿತ್ತೆಸೆಯುವ ಕಾಲ ಬಂದಿದೆ ಎಂದು ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದ್ದಾರೆ. 

ತಾಲೂಕಿನ ತಡಸ ಜಿಪಂ ಕ್ಷೇತ್ರದ ಕುನ್ನೂರ ಗ್ರಾಮದ ಗ್ರಾಮ ದೇವಿ ದೇವಸ್ಥಾನದಲ್ಲಿ ಜರುಗಿದ ಕಾಂಗ್ರೆಸ್‌ ಪ್ರಜಾ ಪ್ರತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂದು ಕಾಂಗ್ರೆಸ್‌ನಿಂದಾಗಿ ನಮ್ಮ ಆರ್ಥಿಕ ವ್ಯವಸ್ಥೆ 15 ವರ್ಷಗಳ ಕಾಲ ಹಿಂದುಳಿದಿದೆ ಎಂದು ಹೇಳಿ ಬಿಜೆ​ಪಿ ಅಧಿಕಾರಕ್ಕೆ ಬಂದು ರೈತರು, ಜನ ಸಾಮಾನ್ಯರು ಬದಕದಂತಹ ಪರಿಸ್ಥಿತಿ ​ತಂದೊ​ಡ್ಡಿ​ದೆ. ಅಂಥವರಿಗೆ ಮುಂಬರುವ ದಿನದಲ್ಲಿ ತಕ್ಕ ಪಾಠ ಕಲಿಸಬೇಕು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಕರ್ಮಕಾಂಡವನ್ನು ತಿಳಿಸಲು ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರು ಎಲ್ಲರ ಮನೆ-ಮನೆಗೆ ಮುಟ್ಟಿ​ಸ​ಬೇ​ಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿ​ಸಿ​ದ್ದ ಶಿಗ್ಗಾಂವಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎನ್‌. ವೇಂಕೋಜಿ ಮಾತನಾಡಿ, ಕಾಂಗ್ರೆಸ್‌ ತನ್ನದೇ ಆದ ತತ್ವ ಸಿದ್ಧಾಂತವನ್ನು ಪಾಲಿಸುವ ಪಕ್ಷವಾಗಿದೆ. ಕೋವಿಡ್‌-19ರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಜನ ಮೃತರಾಗಿದ್ದಾರೆ. ಮೃತರಾದ ಕುಟುಂಬದ ಮಾಹಿತಿ ಸಂಗ್ರ​ಹಿ​ಸಿ. ಅಲ್ಲದೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಕೂಡಿಸಿಕೊಂಡು ಸಮಿತಿ ರಚಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಅಕ್ರಮ ಗಣಿಗಾರಿಕೆ: ತಜ್ಞರ ವರದಿ ಪಡೆದು ಕ್ರಮ, ಬೊಮ್ಮಾಯಿ

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಗುರುನಗೌಡ ಪಾಟೀಲ, ಕೆ.ಎಸ್‌. ಭಗಾಡೆ, ಜಿಪಂ ಮಾಜಿ ಸದಸ್ಯ ಸಿ.ಎಸ್‌. ಪಾಟೀಲ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀಕಾಂತ ದುಂಡಿಗೌಡ್ರ, ಪ್ರೇಮಾ ಪಾಟೀಲ್‌, ಚಂದ್ರಣ್ಣ ನಡುವಿನಮನಿ, ಶಿವಾನಂದ ಬಾಗೂರ, ಹನುಮರೆಡ್ಡಿ ನಡುವಿನಮನಿ, ಕಿರಣಗೌಡ ಎಂ. ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಸಂಗಮೇಶ ಕಂಬಾಳಿಮಠ, ಜಾವೇದ ಸವಣೂರ, ​ಶ್ರೀಕಾಂತ ಪೂಜಾರ, ಎಫ್‌.ಸಿ. ಪಾಟೀಲ, ಬಿ.ಸಿ. ಪಾಟೀಲ, ಗುರುಸಿದ್ದಗೌಡ್ರ ಪಾಟೀಲ, ಎಂ.ಎನ್‌. ಗೌಡರ, ಚಂದ್ರಣ್ಣ ಹೆಬ್ಬಾಳ, ಸುಧೀರ ಲಮಾಣಿ, ಬಾಬರ ಬಾವೋಜಿ, ವಸಂತಾ ಬಾಗೂರ, ರಬ್ಬಾನಿ ತರೀನ, ತಹಮೀದ ಖಾಜಿ, ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಇಂದೂರ, ಪಿ.ಡಿ. ಕಾಳಿ, ಡಿ.ಆರ್‌. ಬೊಮ್ಮನಹಳ್ಳಿ, ಮಾಬುಸಾಬ ಜಿಗಳೂರ ಸೇರಿದಂತೆ ಹಲವು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.