Karnataka Politics :ರಾಜಣ್ಣಗೆ ಸಚಿವ ಸ್ಥಾನ ಬಹುತೇಕ ಖಚಿತ
- ರಾಜಣ್ಣಗೆ ಸಚಿವ ಸ್ಥಾನ ಬಹುತೇಕ ಖಚಿತ
- ಮಧುಗಿರಿ ಅಭಿವೃದ್ಧಿಗೆ ರಾಜಣ್ಣನನ್ನು ಗೆಲ್ಲಿಸಿ
- ಕಾಲುವೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದ ಪರಿಷತ್ ಸದಸ್ಯ ಆರ್.ರಾಜೇಂದ್ರ
ಮಧುಗಿರಿ (ಡಿ.25): ಕ್ಷೇತ್ರದ ಜನತೆ ಅಭಿವೃದ್ಧಿ ದೃಷ್ಟಿಯಿಂದ ಮುಂಬರುವ ಅಸೆಂಬ್ಲಿ ಚುನಾವಣೆ ( Karnataka Assembly Election) ಗಮನದಲ್ಲಿಟ್ಟುಕೊಂಡು ಸದಾ ಅಭಿವೃದ್ಧಿ ಪರ ಚಿಂತಿಸುವ ಮಾಜಿ ಶಾಸಕ ಕೆ.ಎನ್.ರಾಜಣ್ಣ (KN Rajanna) ಅವರನ್ನು ಗೆಲ್ಲಿಸಿ ಕೊಡುವಂತೆ ವಿಧಾನ ಪರಿಷತ್ ಸದಸ್ಯ (MLC) ಆರ್.ರಾಜೇಂದ್ರ ಹೇಳಿದರು. ಇತ್ತೀಚೆಗೆ ತಾಲೂಕಿನ ಗಂಜಲಗುಂಟೆ ಗ್ರಾಪಂ ವ್ಯಾಪ್ತಿಯಲ್ಲಿನ ಕೆ.ಎನ್.ಆರ್. ಅಭಿಮಾನಿ ಬಳಗ , ಆರ್.ಆರ್.ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ (Congress) ಪಕ್ಷದ ವತಿಯಿಂದ ಆಯೋಜಿಸಿದ್ದ ಹತ್ತಾರು ವರ್ಷಗಳಿಂದ ಮುಚ್ಚಿ ಹೋಗಿದ್ದ ತಲಪುರಿಗೆ ಕಾಲುವೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
2015ರಲ್ಲಿ ಬಿಜವರ ಕೆರೆ ತುಂಬಿದಾಗ ಅಂದು ಶಾಸಕರಾಗಿದ್ದ ಕೆ.ಎನ್.ರಾಜಣ್ಣ (KN Rajanna) ಅವರು ಈ ಕಾಲುವೆಯನ್ನು ದುರಸ್ಥಿ ಮಾಡಿಸಿ ರೈತರಿಗೆ (Farmers) ಅನುಕೂಲ ಮಾಡಿಕೊಟ್ಟಿದ್ದರು. ಇದೀಗ ಮತ್ತೆ ಬಿಜವರ ಕೆರೆ ಕೋಡಿ ಬಿದ್ದಿದ್ದು, ಇದರಿಂದ ಕಾಲುವೆಗಳಲ್ಲಿ ನೀರು ಹರಿದರೆ ಅಂತರ್ಜಲ ವೃದ್ಧಿಸಿ ತಲಪುರಿಗೆಗಳಲ್ಲಿ ನಿರಂತರವಾಗಿ ನೀರು ಬರಲಿದೆ ಎಂದರು.
ರೈತರು (Farmers) ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಮನಸ್ತಾಪಗಳನ್ನು ಬದಿಗಿಟ್ಟು ಗ್ರಾಮಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಿಕೊಂಡು ಒಗ್ಗಟ್ಟಾಗಿ ಇದ್ದರೆ ಗ್ರಾಮಗಳು ಅಭಿವೃದ್ಧಿ ಹೊಂದಲಿವೆ. ಕೋವಿಡ್ (Covid) ಕಷ್ಟದ ಕಾಲದಲ್ಲಿ ಈ ಭಾಗದಲ್ಲಿ ಎಸ್ಸೆಸ್ಸೆನ್ (SSN) ಮೂಲಕ 10 ಕೋಟಿ ರು. ಗಳವರೆಗೂ ರೈತರಿಗೆ ಸಾಲವನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ (DCC Bank) ನಿರ್ದೇಶಕ ಬಿ.ನಾಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ (Block Congress) ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಜ ಗೋಪಾಲ್,ಗಂಜಲ ಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ಡಿ.ಎಚ್.ನಾಗರಾಜು, ಎಪಿಎಂಸಿ ಮಾಜಿ ಮಾಜಿ ಅಧ್ಯಕ್ಷ ಮರಿಯಣ್ಣ, ವಿಎಸ್ಸೆಸ್ಸೆನ್ ಅಧ್ಯಕ್ಷ ಪಾಜೀಲ್, ಗ್ರಾಪಂ ಉಪಾಧ್ಯಕ್ಷೆ ಚೇತನಾ, ಸದಸ್ಯರಾದ ಮಾಲಾ, ನಾಗಭೂಷಣ, ರಾಮಚಂದ್ರಪ್ಪ, ಲಕ್ಷ್ಮಿನಾರಾಯಣ, ರಂಗರಾಜು, ಅಮರಾವತಿ ದಾಸೇಗೌಡ, ವೀರೇಶ್, ಭಕ್ತರಹಳ್ಳಿ ವೀರನಾಗಪ್ಪ, ಜಿ.ಎನ್.ರವಿ, ತಿಮ್ಮಣ್ಣ, ಕೆ.ರಮೇಶ್, ಪಟೇಲ್ ರಾಮಣ್ಣ, ಬ್ಯಾಂಕ್ ರಾಮಚಂದ್ರಪ್ಪ, ಎಚ್.ಎಸ್.ನಾಗಭೂಷಣ, ರಂಗರಾಜು ಮುಂತಾದವರಿದ್ದರು.
ರಾಜಣ್ಣ ಮಂತ್ರಿಯಾಗುವುದು ಸತ್ಯ : ಕೆ.ಎನ್.ರಾಜಣ್ಣ ಶಾಸಕರಾಗಿದ್ದ ಕಾಲದಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಕಣ್ಮುಂದೆ ಇದೆ. 2023ರ ಚುನಾವಣೆಯಲ್ಲಿ ಅವರನ್ನು ಶಾಸಕರನ್ನಾಗಿಸಿ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತ, ಆಗ ರಾಜಣ್ಣನವರು ಮಂತ್ರಿಯಾಗುವುದು ಕೂಡ ಅಷ್ಟೇ ಸತ್ಯ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಭವಿಷ್ಯ ನುಡಿದರು.
2023ರ ಚುನಾವಣೆಯ ಭವಿಷ್ಯ :
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) ಪಕ್ಷಕ್ಕೆ ಶೇ.48ರಷ್ಟು ಮತ ಬಂದಿದ್ದು, ಇದು ಮುಂಬರುವ 2023ರ ವಿಧಾನಸಭಾ ಚುನಾವಣೆಗೆ (Assembly election) ದಿಕ್ಸೂಚಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಶೇ.41ರಷ್ಟುಮತ ಬಂದಿದ್ದರೆ, ಜೆಡಿಎಸ್ಗೆ (JDS) ಶೇ.12ರಷ್ಟು ಮಾತ್ರ ಮತ ಬಂದಿದೆ. ಹಾನಗಲ್ ಉಪ ಚುನಾವಣೆಯಲ್ಲೂ ಕಾಂಗ್ರೆಸ್ (Congress) ಪಕ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಮತ ಗಳಿಸಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಜನರು ಕಾಂಗ್ರೆಸ್ ಪಕ್ಷದತ್ತ ವಾಲಿದ್ದಾರೆ ಎಂಬುದರ ಸಂಕೇತವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನವಿರೋಧಿ ಸರ್ಕಾರ: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ (BJP) ನೇತೃತ್ವದ ಸರ್ಕಾರ ಜನವಿರೋಧಿಯಾಗಿದೆ. ತೈಲೋತ್ಪನ್ನ ಬೆಲೆಗಳು ಗಗನಕ್ಕೇರಿವೆ. ಸಿಲಿಂಡರ್ ಬೆಲೆ 350 ರು.ನಿಂದ 1000 ರು.ವರೆಗೂ ಹೆಚ್ಚಾಗಿದೆ. ವರ್ಷಕ್ಕೆ 15 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಈವರೆವಿಗೂ ಉದ್ಯೋಗ ಸೃಷ್ಟಿಗೆ ಆದ್ಯತೆಯನ್ನೇ ನೀಡಿಲ್ಲ ಎಂದು ಹರಿಹಾಯ್ದರು.
ದುರಹಂಕಾರ ಪ್ರದರ್ಶನ: ರೈತರ (Farmers) ವಿರೋಧದ ನಡುವೆಯೂ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿ ಒಂದು ವರ್ಷದ ಬಳಿಕ ವಾಪಸ್ ಪಡೆದಿದ್ದಾರೆ. ಇದರಿಂದಾಗಿ 700 ಮಂದಿ ರೈತರು ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ದುರಹಂಕಾರದ ನಡೆಯೇ ಕಾರಣ ಎಂದು ಟೀಕಿಸಿದರು.