Uranium in Ground Water :ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿಷಪೂರಿತವಾದ ಅಂತರ್ಜಲ

  • ಯಾವುದೇ ಶಾಶ್ವತ ನದಿ, ನಾಲೆಗಳು ಇಲ್ಲದೇ ಬರೀ ಅಂತರ್ಜಲವನ್ನೆ ದಶಕಗಳಿಂದ ನಂಬಿದ ಜನ
  • ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಬಳಕೆ ಮಾಡುತ್ತಿರುವ ಅಂತರ್ಜಲ ವಿಷಪೂರಿತ
Research Reveals Uranium content in Chikkaballapur Groundwater snr

ವರದಿ :  ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ಡಿ.14):  ಯಾವುದೇ ಶಾಶ್ವತ ನದಿ (River ), ನಾಲೆಗಳು ಇಲ್ಲದೇ ಬರೀ ಅಂತರ್ಜಲವನ್ನೆ (Ground Water) ದಶಕಗಳಿಂದ ನಂಬಿ ಉಸಿರಾಗಿಕೊಂಡು ಜೀವನ ಸಾಗಿಸುತ್ತಿರುವ ಅವಿಭಜಿತ ಕೋಲಾರ (Kolar) ಚಿಕ್ಕಬಳ್ಳಾಪುರ (chikkaballapura) ಜಿಲ್ಲೆಯ ಜನತೆ ಬಳಕೆ ಮಾಡುತ್ತಿರುವ ಅಂತರ್ಜಲ ವಿಷಪೂರಿತ ಎನ್ನುವುದರ ಬಗ್ಗೆ ಸಂಶೋಧನಾ ವಿಜ್ಞಾನಿಗಳು(Scientist) ನಡೆಸಿರುವ ವರದಿಯಲ್ಲಿ ಬಹಿರಂಗೊಳಿಸಿದೆ.

ಹೌದು, ಕ್ಯಾನ್ಸರ್‌ನಂತಜ (Cancer) ಹಲವು ಮಾರಕ ರೋಗಗಳಿಗೆ ಕಾರಣವಾಗಿರುವ ಅಪಾಯಕಾರಿ ಯುರೇನಿಯಂ ಅಂಶ ಜಿಲ್ಲೆಯ ಅಂತರ್ಜಲದಲ್ಲಿ ಅತಿಯಾದ ಪ್ರಮಾಣದಲ್ಲಿ ಇರುವುದು ಇಂಡಿಯನ್‌ ಇನ್ಸ್‌ಟ್ಯೂಟ್‌ (indian institute of science )  ಆಫ್‌ ಸೈನ್ಸ್‌ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದ್ದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಈ ವರದಿ ಸಹಜವಾಗಿಯೆ ಆತಂಕದ ಕರಿಛಾಯೆ ಮೂಡಿಸಿದೆ.

27 ಗ್ರಾಮಗಳಲ್ಲಿ ಅಧ್ಯಯನ:  ಐಐಎಸ್‌ಸಿ (IISC) ಸಂಶೋಧನಾ ವಿಜ್ಞಾನಿಗಳು ರಾಜ್ಯದ ವಿವಿಧ ಜಿಲ್ಲೆಗಳನ್ನು ಕೇಂದ್ರೀಕರಿಸಿ 73 ಗ್ರಾಮಗಳಲ್ಲಿ ಮಾಡಿರುವ ಅಧ್ಯಯನದಲ್ಲಿ ಅವಿಭಜಿತ ಕೋಲಾರ (kolar) ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಅಂತರ್ಜಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಸಾಂದ್ರತೆ ಇರುವುದು ಪತ್ತೆಯಾಗಿದ್ದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಒಟ್ಟು 27 ಹಳ್ಳಿಗಳಲ್ಲಿ ಅಧ್ಯಯನ ನಡೆಸಿರುವ ಐಐಎಸ್‌ಸಿ ಸಂಶೋಧನಾ ವಿಜ್ಞಾನಿಗಳ ತಂಡಕ್ಕೆ 1 ಲೀಟರ್‌ ನೀರಿಗೆ (water) ಬರೋಬ್ಬರಿ 1000 ಮೈಕ್ರೋ ಗ್ರಾಂನಷ್ಟುಯುರೇನಿಯಮ್‌ ಸಾಂದ್ರತೆ ಇರುವುದನ್ನು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು 73 ಹಳ್ಳಿಗಳಲ್ಲಿ (Village) ಕೈಗೊಂಡಿದ್ದ ಅಧ್ಯಯನ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 27 ಹಳ್ಳಿಗಳಲ್ಲಿ ಹಾಗೂ ಪಕ್ಕದ ಕೋಲಾರ (Kolar) ಜಿಲ್ಲೆಯಲ್ಲಿ ಒಟ್ಟು 14 ಗ್ರಾಮಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಕೋಲಾರದಲ್ಲಿ ಅಧ್ಯಯನ ನಡೆಸಿದ 14 ರ ಪೈಕಿ 5 ಹಳ್ಳಿಗಳಲ್ಲಿನ ಅಂತರ್ಜಲದಲ್ಲಿ 1000 ಮೈಕ್ರೋ ಗ್ರಾಂ ನಷ್ಟು ಯುರೇನಿಯಮ್‌ ಸಾಂದ್ರತೆ ಇರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಎಲ್ಲಲ್ಲಿ ಅಧ್ಯಯನ:  ಜಿಲ್ಲೆಯ ಒಟ್ಟು 27 ಗ್ರಾಮಗಳ ಪೈಕಿ ಚಿಕ್ಕಬಳ್ಳಾಪುರ (chikkaballapura) ತಾಲೂಕಿನಲ್ಲಿ ಚಲುಮೇನಹಳ್ಳಿ, ಜಾತವಾರ, ಚಿಂತಾಮಣಿ ತಾಲೂಕಿನಲ್ಲಿ ಚಿಂತಾಮಣಿ, ಗುಡು ಮಾರ್ಲಹಳ್ಳಿ, ಹಿರೇ ಕಟ್ಟಿಗೇನ ಹಳ್ಳಿ, ಪುಲಗುಂಡ್ಲಹಳ್ಳಿ, ಸಿದ್ದೇಪಲ್ಲಿ, ಗೌರಿ ಬಿದನೂರು ತಾಲೂಕಿನಲ್ಲಿ ಕೃಷ್ಣರಾಜಪುರ ತಾಂಡ, ಮದುಗೆರೆ, ಸಂಗಾನಹಳ್ಳಿ, ಸುಬ್ಬರಾಯನಹಳ್ಳಿ, ಗುಡಿಬಂಡೆ ತಾಲೂಕಿನ ದೊಡ್ಡಕುರುಬರಹಳ್ಳಿ, ಗಂಗನಹಳ್ಳಿ, ಮಿಂಚೇನಹಳ್ಳಿ, ಸೋಮೇನಹಳ್ಳಿ ಹಾಗು ಶಿಡ್ಲಘಟ್ಟತಾಲೂಕಿನಲ್ಲಿ ಬ್ರಾಹ್ಮಣಹಳ್ಳಿ ಹಾಗೂ ಸಾದಹಳ್ಳಿ ಹಾಗೂ ಬಾಗೇಪಲ್ಲಿ ತಾಲೂಕಿನ ಚೆನ್ನರಾನಹಳ್ಳಿ, ಡಿ.ಕೋತ್ತಪಲ್ಲಿ, ಕೊತ್ತೂರು, ಮದ್ದಲಖಾನೆ, ಜಿ.ಮದ್ದೇಪಲ್ಲಿ, ಪೋತಪಲ್ಲಿ , ಸುಜ್ಜೇಪಲ್ಲಿ, ಶಂಕವಾರಪಲ್ಲಿ ಹಾಗೂ ತಿಮ್ಮಪಲ್ಲಿ ಹಾಗೂ ಯಲ್ಲಂಪಲ್ಲಿ ಗ್ರಾಮಗಳಲ್ಲಿ ಅಂತರ್ಜಲದ ನೀರಿನಲ್ಲಿ ಯುರೇನಿಯಂ ಪ್ರಮಾಣವನ್ನು ಸಂಶೋಧನೆ ಮೂಲಕ ಪರೀಕ್ಷಿಸಲಾಗಿದೆ.

ಶಾಶ್ವತ ನೀರಾವರಿ ಸಮಿತಿ ಕಳವಳ  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿರುವ ಅಧ್ಯಯನ ವರದಿ ಪ್ರಕಾರ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಗಳಲ್ಲಿನ ಅಂತರ್ಜಲದಲ್ಲಿ ಅಪಾಯಕಾರಿ ಯುರೇನಿಯಂ ಅಧಿಕ ಪ್ರಮಾಣದಲ್ಲಿ ಇರುವುದು ಸಂಶೋಧನೆ ವೇಳೆ ದೃಢಪಟ್ಟಿದೆ. ಕೇವಲ ಯುರೇನಿಯಂ ಬಗ್ಗೆ ಮಾತ್ರ ಪರೀಕ್ಷಿಸಲಾಗಿದೆ. ಇದೇ ನೀರನ್ನು ನಾವು ಕುಡಿಯುವುದಕ್ಕೂ, ಹೈನುಗಾರಿಕೆ ಹಾಗೂ ಕೃಷಿಗೆ (agriculture) ಬಳಕೆ ಮಾಡುತ್ತಿದ್ದೇವೆ. ಇತಂಹ ಸಂದರ್ಭದಲ್ಲಿ ಅಂತಹ ನೀರಿಗೆ ಬೆಂಗಳೂರಿನ ಕೊಳಚೆ ನೀರು ಮೂರನೇ ಹಂತದ ಶುದ್ದೀಕರಣ ಮಾಡದೇ ಕೆರೆಗಳಿಗೆ ಹರಿಸುವುದು ಎಷ್ಟು ಮಾತ್ರ ಸರಿ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿ ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios