Asianet Suvarna News Asianet Suvarna News

Karnataka Politics : BSY ಮಾತು ಕೇಳಿದ್ರೆ ನನ್ನ ರಾಜ​ಕೀಯ ಸ್ಥಾನ ಬೇರೆ​ಯದ್ದೇ ಆಗಿ​ರು​ತ್ತಿತ್ತು - ಕೈ ಮುಖಂಡ

  • ಎಚ್‌ಡಿಡಿಗಾಗಿ ನನ್ನ ರಾಜ​ಕೀಯ ಜೀವನ ತ್ಯಾಗ ಮಾಡಿ​ದ್ದೇನೆ
  •  ಇಂದು ನನ್ನ ರಾಜ​ಕೀಯ ಸ್ಥಾನಮಾನ ಬೇರೆ​ಯದ್ದೇ ಆಗಿ​ರು​ತ್ತಿತ್ತು: ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ
Congress Leader HC Balakrishna unhappy over JDS Leaders  snr
Author
Bengaluru, First Published Dec 25, 2021, 1:16 PM IST

  ರಾಮ​ನ​ಗರ (ಡಿ.25): ಬಿಜೆ​ಪಿ​ಯ​ಲ್ಲಿ​ದ್ದಾಗ (BJP) ನನ್ನ ಅಕ್ಕ ಪಕ್ಕ ಕೂರು​ತ್ತಿದ್ದ ಸದಾ​ನಂದ ಗೌಡ ಹಾಗೂ ಜಗ​ದೀಶ್‌ ಶೆಟ್ಟರ್‌ ಮುಖ್ಯ​ಮಂತ್ರಿ​ಗ​ಳಾ​ದರು (CM). ಕಾಗೇ​ರಿ​ಯ​ವರು ಸ್ಪೀಕರ್‌ ಆಗಿ​ದ್ದಾರೆ. ಅಂದು ಬಿ.ಎ​ಸ್‌. ​ಯ​ಡಿ​ಯೂ​ರಪ್ಪ (BS Yediyurappa) ಅವರ ಮಾತನ್ನು ಪಾಲಿ​ಸಿ​ದ್ದರೆ ಇಂದು ನನ್ನ ರಾಜ​ಕೀಯ (Politics) ಸ್ಥಾನಮಾನ ಬೇರೆ​ಯದ್ದೇ ಆಗಿ​ರು​ತ್ತಿತ್ತು. ಆದರೆ, ದೇವೇ​ಗೌಡ (Devegowda) ಅವ​ರಿ​ಗಾಗಿ ನನ್ನ ರಾಜ​ಕೀಯ ಜೀವನ ತ್ಯಾಗ ಮಾಡಿ​ದ್ದನ್ನು ಜೆಡಿ​ಎಸ್‌ ನಾಯ​ಕರು ಅರಿ​ಯ​ಬೇಕು ಎಂದು ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ತಿಳಿ​ಸಿ​ದರು.

ಬಿಡ​ದಿ ಬಳಿ ಇರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಸಾತ​ನೂರು ವಿಧಾ​ನ​ಸಭಾ ಕ್ಷೇತ್ರ​ದಿಂದ ಡಿ.ಕೆ.​ಶಿ​ವ​ಕು​ಮಾರ್‌ (DK Shivakumar), ಎಚ್‌.​ಡಿ.​ದೇ​ವೇ​ಗೌ​ಡರ (Devegowda) ವಿರುದ್ಧ ಸ್ಪರ್ಧಿ​ಸು​ವಂತೆ ಬಿಜೆಪಿ (BJP) ನಾಯಕ ಬಿ.ಎ​ಸ್‌.​ಯ​ಡಿ​ಯೂ​ರಪ್ಪ (Yediyurappa) ಹೇಳಿ​ದ್ದರು. ಆದರೆ ಎಚ್‌.​ಡಿ.​ದೇ​ವೇ​ಗೌ​ಡರ (Devegowda) ಮೇಲಿದ್ದ ಗೌರ​ವ​ದಿಂದ ನಾನು ಸ್ಪರ್ಧಿ​ಸ​ಲಿಲ್ಲ ಎಂದ​ರು.

ಎಚ್‌.​ಡಿ.​ಕು​ಮಾ​ರ​ ಸ್ವಾ​ಮಿ​ಯ​ವರು ರಾಜ​ಕೀ​ಯಕ್ಕೆ (Politics) ಬರುವ ಮುನ್ನ ನಾನು ಶಾಸ​ಕ​ನಾ​ಗಿದ್ದೆ. ನಾನು ಬಿಜೆಪಿ (BJP) ತೊರೆದು ಜೆಡಿ​ಎಸ್‌ (JDS) ಸೇರಿದ ವೇಳೆ ಮಾಗಡಿ ಕ್ಷೇತ್ರ​ದಲ್ಲಿ ಜಾತ್ಯಾ​ತೀತ ಜನತಾ ದಳಕ್ಕೆ ನೆಲೆ ಇರ​ಲಿಲ್ಲ. ಎಚ್‌.​ಡಿ.​ದೇ​ವೇ​ಗೌ​ಡರು (HD Devegowda) ಲೋಕ​ಸ​ಭೆಗೆ ಸ್ಪರ್ಧಿ​ಸಿ​ದಾಗ ಮಾಗ​ಡಿ​ ಕ್ಷೇತ್ರ​ದಲ್ಲಿ 11 ಸಾವಿರ ಲೀಡ್‌ ಕೊಡಿ​ಸಿ​ದ್ದೇನೆ. ಬಿಜೆ​ಪಿ​ಯ​ಲ್ಲಿದ್ದ ಎಂ.ಶ್ರೀ​ನಿ​ವಾಸ್‌ ಅವ​ರನ್ನು ಜೆಡಿ​ಎಸ್‌ಗೆ (JDS) ಕರೆ​ತಂದಿದ್ದೆ ನಾನು. ಆದರೆ, ದೇವೇ​ಗೌ​ಡರು ಗೆದ್ದ ನಂತರ ಶ್ರೀನಿ​ವಾಸ್‌ ಅವ​ರನ್ನು ಮೂಲೆ​ಗುಂಪು ಮಾಡಿ​ದರು ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದರು.

ಕುಮಾ​ರ​ಸ್ವಾಮಿ (Kumaraswamy) ಮಗ್ಗಲು ಚೂರಿ:  ಮಾಜಿ ಸಿಎಂ ಕುಮಾರಸ್ವಾಮಿ ಸ್ಲೋ ಪಾಯಿಸನ್‌ ಇದ್ದಂತೆ ಅವರು ಜೊತೆಯಲ್ಲಿದ್ದವರಿಗೆ ಮಗ್ಗಲು ಚೂರಿ. ಅವರು ಚುಚ್ಚೋದೆ ಗೋತ್ತಾಗು​ವು​ದಿಲ್ಲ. ಪಕ್ಷದ ಮುಖಂಡರ ಏಳಿಗೆಯನ್ನೇ ಅವರು ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ನಾನೂ ಕೂಡ ಅವರಿಂದ ಚುಚ್ಚಿಸಿಕೊಂಡಿದ್ದೇನೆ ಎಂದು ಟೀಕಿ​ಸಿ​ದರು.

ಈಗಾಗಲೇ ಹಲವು ನಾಯಕರನ್ನು ನಂಬಿಸಿ, ವಂಚಿಸಿದ್ದಾರೆ. ಅವರ ವಂಚನೆಗೆ ಬಲಿಯಾದವರಲ್ಲಿ ನಾನು ಒಬ್ಬ. ನನ್ನ ತಮ್ಮನಿಗೆ ಜಿಪಂ ಟಿಕೆಟ್‌ ಕೊಟ್ಟು, ಮುಖಂಡರಿಗೆ ಮತ ಹಾಕಿಸಬೇಡಿ ಎಂದು ಕುಮಾ​ರ​ಸ್ವಾಮಿ (Kumaraswamy) ಹೇಳಿದ್ದರು. ಈಗ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ (Election) ಕನಕಪುರದ ನಿಷ್ಠಾವಂತ ಜೆಡಿಎಸ್‌ ಮುಖಂಡ ಡಿ.ಎಂ. ವಿಶ್ವನಾಥ್‌ ಗೆ (Vishwanath) ಮತ ಹಾಕಬೇಡಿ ಎಂದು ಸಂದೇಶ ನೀಡಿದ್ದಾರೆ ಎಂದು ಆರೋಪಿಸಿದರು.

ನನ್ನಂತೆಯೇ ಹಲವರಿಗೆ ಅವರು ಪಕ್ಕದಲ್ಲಿಟ್ಟುಕೊಂಡೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಇದಕ್ಕೆ ಪರಿಷತ್‌ ಚುನಾವಣೆಯಲ್ಲಿ ಮತದಾರರು ತಕ್ಕ ಬುದ್ಧಿ ಕಲಿಸಿದ್ದಾರೆ. ಇನ್ನು ಅವರೊಂದಿಗಿರುವ ಮಂದಿಯೂ ಪಕ್ಷ ಬಿಟ್ಟು ಹೊರ ಬರಲಿದ್ದು, ಅವರು ಮತ್ಯಾವ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ ಎಂದು ಕುಮಾ​ರ​ಸ್ವಾಮಿ ಅವ​ರನ್ನು ಕುಟುಕಿದರು. ಈಗಾಗಲೇ ಹಲವು ಶಾಸಕರು ಜೆಡಿಎಸ್‌ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟುಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ. ಶಾಸಕರಾದ ಪುಟ್ಟರಾಜು, ಶಿವಲಿಂಗೇಗೌಡ ಸೇರಿದಂತೆ ಹಲವು ಶಾಸಕರು ಪಕ್ಷ ಬಿಡುತ್ತಾರೆ ಎಂದು ಬಾಲ​ಕೃ​ಷ್ಣ ಭವಿಷ್ಯ ನುಡಿದರು.

ಸುದ್ದಿ​ಗೋ​ಷ್ಠಿ​ಯಲ್ಲಿ ಕಾಂಗ್ರೆಸ್‌ ಮುಖಂಡ​ರಾದ ಗಾಣ​ಕಲ್‌ ನಟ​ರಾಜು, ಅಬ್ಬ​ನ​ಕುಪ್ಪೆ ರಮೇಶ್‌ , ಬೆಟ್ಟ​ಸ್ವಾಮಿ, ಚಂದ್ರ​ಶೇ​ಖರ್‌ , ಕಾವ್ಯ, ಗಿರಿ​ಧರ್‌ ಇದ್ದ​ರು.

  • ಎಚ್‌ಡಿಡಿಗಾಗಿ ನನ್ನ ರಾಜ​ಕೀಯ ಜೀವನ ತ್ಯಾಗ ಮಾಡಿ​ದ್ದೇನೆ
  • ನನ್ನ ರಾಜ​ಕೀಯ ಜೀವನ ತ್ಯಾಗ ಮಾಡಿ​ದ್ದನ್ನು ಜೆಡಿ​ಎಸ್‌ ನಾಯ​ಕರು ಅರಿ​ಯ​ಬೇಕು 
  • ಎಚ್‌.​ಡಿ.​ಕು​ಮಾ​ರ​ಸ್ವಾ​ಮಿ​ಯ​ವರು ರಾಜ​ಕೀ​ಯಕ್ಕೆ ಬರುವ ಮುನ್ನ ನಾನು ಶಾಸ​ಕ​ನಾ​ಗಿದ್ದೆ
  •  ನನ್ನ ರಾಜ​ಕೀಯ ಸ್ಥಾನಮಾನ ಬೇರೆ​ಯದ್ದೇ ಆಗಿ​ರು​ತ್ತಿತ್ತು - ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ
  • ನಾನು ಬಿಜೆಪಿ ತೊರೆದು ಜೆಡಿ​ಎಸ್‌ ಸೇರಿದ ವೇಳೆ ಮಾಗಡಿ ಕ್ಷೇತ್ರ​ದಲ್ಲಿ ಜಾತ್ಯಾ​ತೀತ ಜನತಾ ದಳಕ್ಕೆ ನೆಲೆ ಇರ​ಲಿಲ್ಲ
Follow Us:
Download App:
  • android
  • ios