ಗದಗ, [ಆ.09]: ಇಂದು [ಶುಕ್ರವಾರ] ಎಚ್.ಕೆ. ನೇತೃತ್ವದ ಕಾಂಗ್ರೆಸ್ ತಂಡ ಪ್ರವಾಹ ಪರಿಶೀಲನೆಗೆ ಹೊರಟಿತ್ತು. ಬಾಗಲಕೋಟೆಗೆ ಹೋಗಲು ಗದಗಿನ ಕೊಣ್ಣೂರು ಬಳಿಯ ಮಲಪ್ರಭಾ ನದಿಯನ್ನು ಬೋಟ್ ಮೂಲಕ ದಾಟಲು ಮುಂದಾಗಿದ್ದರು. ಸ್ಥಳೀಯ ಅಧಿಕಾರಿಗಳು ಪ್ರವಾಹದ ಅಪಾಯ ಮನವರಿಕೆ ಮಾಡಿ ಬೋಟಿನಲ್ಲಿ ಹೋಗದಂತೆ ತಡೆದರು.ಇದನ್ನೇ ಯಾರೋ ಯಡಿಯೂರಪ್ಪ ಅವರಿಗೆ ತಪ್ಪಾಗಿ ತಿಳಿಸಿದ್ದಾರೆ.

 ಈ ಮೊದಲು ಎಚ್.ಕೆ. ಪಾಟೀಲ್ ಅವರು ಪ್ರವಾಹದಲ್ಲಿ ಸಿಲುಕಿದ್ದಾರೆ ಎನ್ನುವ ಸುಳ್ಳು ಸುದ್ದಿ ಯಡಿಯೂರಪ್ಪ ಅವರ ಕಿವಿಗೆ ಬಿದ್ದಿದೆ. ಇದನ್ನೇ ನಂಬಿದ ಬಿಎಸ್ ವೈ ಅವರು, ಸಂಸದ ಗದ್ದಿಗೌಡರ್ ಮೂಲಕ ಆರೋಗ್ಯ ವಿಚಾರಿಸಿಲು ಪಾಟೀಲ್ ಅವರಿಗೆ ಕರೆ ಮಾಡಿದ್ದಾರೆ. ಆ ವೇಳೆ ಇದೊಂದು ಸುಳ್ಳು ಸುದ್ದಿ ಎಂದು ಬಿಎಸ್ ವೈಗೆ ಗೊತ್ತಾಯ್ತು. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಗಿದ್ದು ಇಷ್ಟು: ಇಂದು [ಶುಕ್ರವಾರ] ಎಚ್.ಕೆ. ನೇತೃತ್ವದ ಕಾಂಗ್ರೆಸ್ ತಂಡ ಪ್ರವಾಹ ಪರಿಶೀಲನೆಗೆ ಹೊರಟಿತ್ತು. ಬಾಗಲಕೋಟೆಗೆ ಹೋಗಲು ಕೊಣ್ಣೂರು ಬಳಿಯ ಮಲಪ್ರಭಾ ನದಿಯನ್ನು ಬೋಟ್ ಮೂಲಕ ದಾಟಲು ಮುಂದಾಗಿದ್ದರು. ಸ್ಥಳೀಯ ಅಧಿಕಾರಿಗಳು ಪ್ರವಾಹದ ಅಪಾಯ ಮನವರಿಕೆ ಮಾಡಿ ಬೋಟಿನಲ್ಲಿ ಹೋಗದಂತೆ ತಡೆದರು. 

ಇದನ್ನು ಎಚ್.ಕೆ.ಪಾಟೀಲ್ ಅವರು ಪ್ರವಾಹದಲ್ಲಿ ಸಿಲುಕಿದ್ದಾರೆ ಎನ್ನುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಈ ವಿಷಯವನ್ನು  ಯಾರೋ  ಯಡಿಯೂರಪ್ಪ ಅವರಿಗೆ ತಪ್ಪಾಗಿ ತಿಳಿಸಿ ಪ್ರವಾಹದಲ್ಲಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್.ಕೆ.ಪಾಟೀಲ್ ಅವರಿಗೆ ಯಡಿಯೂರಪ್ಪ ಕರೆ ಮಾಡಿದ್ದರು.

ಈಗ ರಸ್ತೆ ಸಂಪರ್ಕ ಕಡಿತವಾಗಿದ್ದರಿಂದ ಎಚ್ಕೆ ನೇತೃತ್ವದ ತಂಡ ಹೊಳೆ ಆಲೂರಿನಿಂದ ಬಾಗಲಕೋಟೆಗೆ ಗೂಡ್ಸ್ ರೈಲಿನಲ್ಲಿ ಪ್ರಯಾಣಿಸಿತು.