ಕುಷ್ಟಗಿ: ಏಣಿ ಏರಿ ಕಾಲೇಜು ಛಾವಣಿ ವೀಕ್ಷಿಸಿದ ಶಾಸಕ ಭಯ್ಯಾಪುರ
* ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಫುಲ್ ವೈರಲ್
* ನಿರಂತರ ಮಳೆಗೆ ಸೋರುತ್ತಿರುವ ಕುಷ್ಟಗಿ ಪಪೂ ಕಾಲೇಜು ಕಟ್ಟಡ
* ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ ಭಯ್ಯಾಪುರ
ಕುಷ್ಟಗಿ(ಜು.21): ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಿಂದಾಗಿ ಸ್ಥಳೀಯ ಸರ್ಕಾರಿ ಕಾಲೇಜು ಕಟ್ಟಡ ಸೋರುತ್ತಿರುವುದನ್ನು ಗಮನಿಸಿದ ಶಾಸಕ ಅಮರೇಗೌಡ ಭಯ್ಯಾಪುರ, ಏಣಿ ಮೂಲಕ ಕಟ್ಟಡ ಏರಿ ಛಾವಣಿ ವೀಕ್ಷಿಸಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಮವಾರ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲಾ ಕೊಠಡಿಗಳು ಸೋರುತ್ತಿರುವುದನ್ನು ಗಮನಿಸಿದ ಶಾಸಕ ಭಯ್ಯಾಪುರ ಅವರು ಸ್ವತಃ ತಾವೇ ಏಣಿ ಮೂಲಕ ಕಟ್ಟಡದ ಛಾವಣಿಯನ್ನು ವೀಕ್ಷಿಸಿದರು.
'ಜಾರಕಿಹೊಳಿ ಕಾಂಗ್ರೆಸ್‌ಗೆ ಬರಬಹುದು, ಇಲ್ಲವೇ ಜೆಡಿಎಸ್‌ಗೆ ಹೋಗಬಹುದು'
ಕಟ್ಟಡ 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಈ ಕಟ್ಟಡವನ್ನು ಖುದ್ದಾಗಿ ವೀಕ್ಷಿಸಿದ ಶಾಸಕ ಭಯ್ಯಾಪುರ ಅವರು ಕೂಡಲೇ ಶಾಲಾ ಕೊಠಡಿಗಳ ದುರಸ್ತಿಗೆ ಮುಂದಾಗಿ ಎಂದು ಉಪನ್ಯಾಸಕರಿಗೆ ಸಲಹೆ ನೀಡಿದರು.
ಶಾಸಕರ ಹೇಳಿಕೆ
ಈ ಕಟ್ಟಡವು ಸುಮಾರು ಐವತ್ತು ವರ್ಷಗಳ ಹಿಂದಿನದಾಗಿದ್ದು, ಸದ್ಯ ನಿರಂತರ ಮಳೆಯಾಗುತ್ತಿರುವುದರಿಂದ ಸೋರುತ್ತಿದೆ. ಅಲ್ಲದೆ ಸದ್ಯ ಈ ಕಟ್ಟಡ ದುರಸ್ತಿಗೆ ಸುಮಾರು ಮೂರು ಕೋಟಿಯಷ್ಟು ಹಣ ಬೇಕಾಗುತ್ತದೆ. ಹಾಗಾಗಿ ಕೂಡಲೇ ಈ ಕುರಿತು ಸರ್ಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇನ್ನು ಸದ್ಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸದ್ಯ ಕೈಗೊಳ್ಳಬೇಕಾದ ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.