ಸಾಗರದ MDF ಸಭೆಯಲ್ಲಿ ಹೋಯ್ ಕೈ... ಶಾಸಕರ ಬೆಂಬಲಿಗರಿಂದ ಪುಂಡಾಟ?

* ಸಾಗರದ ಸಭೆಯಲ್ಲಿ ಹೋಯ್ ಕೈ
* ಶಾಸಕ ಹಾಲಪ್ಪ ಬೆಂಬಲಿರು ಮತ್ತು ಸದಸ್ಯರ ನಡುವೆ ಕಿತ್ತಾಟ
* ಸಾಗರದ ಪ್ರತಿಷ್ಠಿತ ಮಲೆನಾಡು ಪ್ರತಿಷ್ಠಾನ ಅಧ್ಯಕ್ಷರ ಆಯ್ಕೆ ಸಭೆ

confusion in shivamogga sagar mdf president election meeting  mah

ಶಿವಮೊಗ್ಗ(ಮಾ. 17)  ಸಾಗರದ (Sagar) ಪ್ರತಿಷ್ಠಿತ ಮಲೆನಾಡು ಪ್ರತಿಷ್ಠಾನ (MDF) ದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಗೊಂದಲ ಏರ್ಪಟ್ಟಿತ್ತು.  ಶಿವಮೊಗ್ಗ(Shivamogga) ಜಿಲ್ಲೆ ಸಾಗರ ತಾಲ್ಲೂಕು ಎಲ್. ಬಿ. ಕಾಲೇಜು ಸಭಾಂಗಣದಲ್ಲಿ ಸಭೆ ಏರ್ಪಡಿಸಲಾಗಿತ್ತು  56 ನೇ MDF ಸರ್ವ ಸದಸ್ಯರ ಸಭೆಯಲ್ಲಿ ಗೊಂದಲ ಉಂಟಾಗಿತ್ತು.

ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ಮತ್ತವರ ಕುಟುಂಬ ಹಾಗೂ ಜಗದೀಶ್ ಗೌಡ್ರು ಮೇಲೆ ಹಲ್ಲೆಯಾದ ಆರೋಪ ಕೇಳಿಬಂದಿದೆ.  ಗಲಾಟೆಯ ನಡುವೆ ಹಿರಿಯ ಸಹಕಾರಿ ಹರನಾಥ್ ರಾವ್ ಮತ್ತಿಕೊಪ್ಪ MDF ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಾನದ ಹಿರಿಯ ಮಾಜಿ ಸಚಿವ ಕೆ.ಎಚ್ ಶ್ರೀನಿವಾಸ, ಮತ್ತೋರ್ವ ಹಿರಿಯ ಸದಸ್ಯ ಬಿ ಆರ್ ಜಯಂತ್ ನೇತೃತ್ವದಲ್ಲಿ ಹರನಾಥ ರಾಯ ರಿಗೆ ಅದ್ಯಕ್ಷ ಪಟ್ಟ ಒಲಿಯಿತು 

ಅದ್ಯಕ್ಷ ಗಾದಿಗೆ ಫೈಪೋಟಿ ನೀಡಲು  ಶ್ರೀಪಾದ ಹೆಗಡೆ ನಿಸರಾಣಿ  ಮುಂದಾಗಿದ್ದರು. ಸಾಗರ ಎಲ್​ಬಿ ಕಾಲೇಜಿನಲ್ಲಿ ಶಿಮುಲ್​ ಅಧ್ಯಕ್ಷ ಶ್ರೀಪಾದ್​ ಹೆಗೆಡೆ ಮೇಲೆ ಸಾಗರ ಶಾಸಕ ಹರತಾಳು ಹಾಲಪ್ಪ (Halappa) ಶಾಸಕರ ಬೆಂಬಲಿಗರಿಂದ ಹಲ್ಲೆ ನಡೆಯಿತು ಎಂದು ಶ್ರೀಪಾದ್ ಹೆಗೆಡೆ ಆರೋಪಿಸಿದ್ದಾರೆ.

ಎಲ್.ಬಿ. ಮತ್ತು ಎಸ್.ಬಿ.ಎಸ್. ಮಹಾವಿದ್ಯಾಲಯ ಸೇರಿದಂತೆ ಬೇರೆಬೇರೆ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ ಸರ್ವಸದಸ್ಯರ ಸಭೆಯನ್ನು ಗುರುವಾರ ದೇವರಾಜ ಅರಸು ಕಲಾಭವನದಲ್ಲಿ ಕರೆಯಲಾಗಿತ್ತು. ಆರಂಭದಿಂದಲೇ ಗೊಂದಲದ ಗೂಡಾಗಿದ್ದ ಸಭೆಯು ಗೊಂದಲದಲ್ಲಿಯೇ ಮುಕ್ತಾಯವಾಯಿತು.

ಶಾಸಕ ಹಾಲಪ್ಪ ಹರತಾಳು ಸರ್ವಸದಸ್ಯರ ಸಭೆಗೆ ಬಂದಾಗ ಅವರಿಗೆ ಸದಸ್ಯತ್ವ ಇಲ್ಲ ಎಂದು ಒಳಗೆ ಬಿಡಲು ಒಪ್ಪಲಿಲ್ಲ. ಈ ಸಂದರ್ಭದಲ್ಲಿ ಶಾಸಕರ ಬೆಂಬಲಿಗರಿಗೂ ಮತ್ತು ಮಂಡಳಿಯ ಕೆಲವು ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಶಾಸಕರು ಹಾಜರಿ ಪುಸ್ತಕಕ್ಕೆ ಸಹಿ ಮಾಡಲು ಮುಂದಾದಾಗ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ ವಿರೋಧಿಸಿ ಸದಸ್ಯರಲ್ಲದವರು ಸಹಿ ಮಾಡಬಾರದು ಎಂದು ತಡೆಹಿಡಿದಿದ್ದಾರೆ.  ಈ ವೇಳೆ ಪರಿಸ್ಥಿತಿ ಬಿಗಡಾಯಿಸಿದೆ.

ಗಲಾಟೆಯಲ್ಲಿ ಹಲ್ಲೆಗೊಳಗಾದ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ, ಸೆಕ್ಯೂರಿಟಿ ಒಬ್ಬರಿಗೆ ಹೊಡೆತ ಬಿದ್ದಿದ್ದು ಅವರು ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರ ಎಂಡಿಎಫ್ ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್ ಮತ್ತು ಉಪಾಧ್ಯಕ್ಷ ಶ್ರೀಪಾದ ರಾವ್ ನಿಸ್ರಾಣಿ ಅವರ ಸೂಚನೆಯಂತೆ ಶಾಸಕ ಹಾಲಪ್ಪ ಹರತಾಳು ಸಭೆಯಲ್ಲಿ ಪಾಲ್ಗೊಂಡರು. 

ಸಭೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಸರ್ವಸದಸ್ಯರ ಸಭೆಯ ನಡಾವಳಿ ಪುಸ್ತಕವೇ ನಾಪತ್ತೆಯಾಗಿತ್ತು. ಈ ಬಗ್ಗೆ ಕೇಳಿದರೆ ಗಲಾಟೆ ಸಂದರ್ಭದಲ್ಲಿ ಯಾರೋ ಪುಸ್ತಕ ಎತ್ತಿಕೊಂಡು ಹೋಗಿದ್ದಾರೆ ಎಂದು ಅಧ್ಯಕ್ಷರು ಹೇಳಿದರು. ಇದು ಇನ್ನಷ್ಟು ಗೊಂದಲಕ್ಕೆ ಕಾರಣವಾಯಿತು. ನಡಾವಳಿ ಪುಸ್ತಕವೆ ಇಲ್ಲದೆ ಸಭೆ ಹೇಗೆ ನಡೆಸುತ್ತೀರಿ ಎಂದು ಸದಸ್ಯರು ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಪರಸ್ಪರ ದೋಷಾರೋಪ, ಗದ್ದಲ ನಡೆಯುತ್ತಿದ್ದರಿಂದ ಸ್ವಲ್ಪಕಾಲ ಸಭೆಯಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಗೊತ್ತಾಗಲಿಲ್ಲ. ಈ ನಡುವೆ ಒಂದಷ್ಟು ಸದಸ್ಯರು ಸಭೆಯನ್ನು ಮುಂದೂಡಿ ಹೊಸ ಸರ್ವಸದಸ್ಯರ ಸಭೆ ದಿನಾಂಕ ನಿಗಧಿಪಡಿಸಿ ಎಂದು ಒತ್ತಾಯಿಸಿದರೇ, ಇನ್ನಷ್ಟು ಸದಸ್ಯರ ಗೋಬ್ಯಾಕ್ ಶ್ರೀಪಾದ್ ಹೆಗಡೆ ಎಂದು ಘೋಷಣೆ ಕೂಗಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಪಟ್ಟು ಹಿಡಿದರು. 

ಶಿವಮೊಗ್ಗ :  ಆರೈಕೆ ಇಲ್ಲ.. ಅನ್ಯ ಕೋಮಿನ ಯುವಕನ ಮದುವೆ... ಮಗುವಿಗೆ ಜನ್ಮ ನೀಡಿ ಸಾವು

ಅಧ್ಯಕ್ಷರಾಗಿ ಹರನಾಥ ರಾವ್ ಘೋಷಣೆ : ಗದ್ದಲದ ನಡುವೆಯೆ ಶಾಸಕ ಹಾಲಪ್ಪ ಹರತಾಳು ಮತ್ತು ಎಂಡಿಎಫ್ ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್ ನೂತನ ಅಧ್ಯಕ್ಷರನ್ನಾಗಿ ಎಂ.ಹರನಾಥ ರಾವ್ ಮತ್ತಿಕೊಪ್ಪ ಅವರನ್ನು ಘೋಷಣೆ ಮಾಡಿದರು. ಇದು ಸಭೆಯಲ್ಲಿದ್ದ ಕೆಲವಷ್ಟು ಜನರ ಆಕ್ರೋಶಕ್ಕೆ ಕಾರಣವಾಯಿತು. ಹರನಾಥ ರಾವ್ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿ ಅವರನ್ನು ಅಧ್ಯಕ್ಷರ ಕೊಠಡಿಗೆ ಕರೆದೊಯ್ದು ಶಾಸಕರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ಸಹ ನಡೆಯಿತು. 

ಒಂದು ಕಡೆ ಹರನಾಥ್ ರಾವ್ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿ ಅಧಿಕಾರ ಹಸ್ತಾಂತರಿಸಿದರೇ, ಇನ್ನೊಂದು ಕಡೆ ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸ್ರಾಣಿ ಅಧ್ಯಕ್ಷತೆಯಲ್ಲಿ ಸರ್ವಸದಸ್ಯರ ಸಭೆ ನಡೆದು, ಹಾಲಿ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಹರನಾಥ್ ರಾವ್ ಅವರಿಗೆ ಎಲ್ಲ ಸದಸ್ಯರ ಬೆಂಬಲ ಇಲ್ಲ. ಆದ್ದರಿಂದ ಅವರ ಅಧ್ಯಕ್ಷ ಸ್ಥಾನವನ್ನು ಅಸಿಂಧುಗೊಳಿಸಿ, ಆಡಳಿತಾಧಿಕಾರಿ ನೇಮಕ ಮಾಡಿ ಮತ್ತೊಮ್ಮೆ ಚುನಾವಣೆ ನಡೆಸಬೇಕು ಎಂಬ ಕೂಗು 
ಬಂತು.

ಘಟನೆ ಕುರಿತು ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸ್ರಾಣಿ, ಇವತ್ತು ಮಂಡಳಿಯ ಸರ್ವಸದಸ್ಯರ ಸಭೆ ಕರೆಯಲಾಗಿದೆ. ಸಂಸ್ಥೆಯ ಅಭಿವೃದ್ದಿ ಸಹಿಸದ ಶಾಸಕ ಹಾಲಪ್ಪ ಹರತಾಳು ತನ್ನ ಬೆಂಬಲಿಗರ ಜೊತೆ ಬಂದು ದೌರ್ಜನ್ಯ ಎಸಗಿದ್ದಾರೆ. ನನ್ನ ಮೇಲೆ, ನನ್ನ ಪತ್ನಿ, ಮಗ, ಮಗಳ ಮೇಲೆ ಹಲ್ಲೆಗೆ ಶಾಸಕರ ಬೆಂಬಲಿಗರು ಪ್ರಯತ್ನಿಸಿದ್ದಾರೆ. ಇದನ್ನು ತೀವೃವಾಗಿ ಖಂಡಿಸುತ್ತೇನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ. ಸರ್ವಸದಸ್ಯರ ಸಭೆ ನಡೆಸದೆ ಅಧ್ಯಕ್ಷರ ನೇಮಕ ಮಾಡಿದ್ದೇವೆ ಎಂದು ಹೇಳುತ್ತಿದ್ದು ಇದು ಕಾನೂನು ಬಾಹಿರ ಎಂದಿದ್ದಾರೆ.

Latest Videos
Follow Us:
Download App:
  • android
  • ios