Asianet Suvarna News Asianet Suvarna News

ಧಾರವಾಡ ಎಪಿಎಂಸಿ ಕಾರ್ಯದರ್ಶಿ ವಿರುದ್ದ ಲೋಕಾಯುಕ್ತಕ್ಕೆ ದೂರು

ಧಾರವಾಡ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಹಣ್ಣು ತರಕಾರಿ ಮಾರಾಟಗಾರರಿಗೆ ಲೀಸ್ ಕಮ್ ಸೇಲ್ ಆಧಾರದಲ್ಲಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದ್ದ 64 ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಎಸಗಿದ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.

Complaint to Lokayukta against Dharwad APMC Secretary gow
Author
First Published Dec 9, 2022, 4:25 PM IST

 ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಡಿ.9): ಧಾರವಾಡ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಹಣ್ಣು ತರಕಾರಿ ಮಾರಾಟಗಾರರಿಗೆ ಲೀಸ್ ಕಮ್ ಸೇಲ್ ಆಧಾರದಲ್ಲಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದ್ದ 64 ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಎಸಗಿದ ಕುರಿತು ಗುರುವಾರ ಸಂಜೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಧಾರವಾಡ ಎ ಪಿ ಎಂ ಸಿ ಕಾರ್ಯದರ್ಶಿವೀರಭದ್ರಯ್ಯ ಹಿರೇಮಠ, ಎ ಪಿ ಎಂ ಸಿ ಸಹ ಕಾರ್ಯದರ್ಶಿ ಅಜಯ ಹಳೇಮನಿ ಹಾಗೂ ಮಾಜಿ ಆಡಳಿತಾಧಿಕಾರಿ ಪ್ರಭಾಕರ ಅಂಗಡಿ,ಅವರು ನಿಯಮಗಳನ್ನು ಗಾಳಿಗೆ ತೂರಿ ಅನರ್ಹರಿಗೆ ನಿವೇಶನ ಹಂಚಿಕೆ ಮಾಡುವ ಮೂಲಕ ಅರ್ಹ ಅರ್ಜಿದಾರರಿಗೆ ಅನ್ಯಾಯ ವೆಸಗಿದವರ ವಿರುದ್ದ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ಈ ವೇಳೆ ಮಾಧ್ಯಮದವರಿಗೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಜೇಷ್ಟತಾ ಪಟ್ಟಿಯಲ್ಲಿನ ಹೆಸರನ್ನು ಕೈ ಬಿಟ್ಟು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಮಣಿದು ಅನರ್ಹರನ್ನು ಆಯ್ಕೆ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಅನವಶ್ಯಕ ಕಾರಣಗಳನ್ನು ಕೊಡುತ್ತಾ ನಿವೇಶನ ಹಂಚಿಕೆಯನ್ನು ವಿಳಂಭ ಮಾಡಲಾಗಿದೆ. ಆ ಮೂಲಕ ಧಾರವಾಡ ಎಪಿಎಂಸಿ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಹಾಗೂ ಮಾಜಿ ಆಡಳಿತಾಧಿಕಾರಿ ಕತ್ಯರ್ವಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟ ಅಧಿಕಾರಿಗಳ ಬೇಟೆಗೆ ಮತ್ತೆ ಲೋಕಾಯುಕ್ತ ಸಜ್ಜು..!

ಇದರಿಂದಾಗಿ ಹಣ್ಣು ತರಕಾರಿ ವ್ಯಾಪಾರಸ್ಥರು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಇವರನ್ನು ತಕ್ಷಣದಿಂದ ಸೇವೆಯಿಂದ ಅಮಾನತುಗೊಳಿಸಿ ಇಲಾಖೆ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.ಅಲ್ಲದೆ, ಈ ಹಿಂದೆ ತಯಾರಿಸಿದ ಜೇಷ್ಟತಾ ಪಟ್ಟಿಯನ್ನು ಈಗಾಗಲೇ ಅನುಮೋದನೆ ನೀಡಲಾಗಿದ್ದು, ಅದರ ಆಧಾರದಲ್ಲಿ 64 ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಂ.ಹೆಚ್, ನವಲಗುಂದಕರ್, ರಾಜು ವೈ,ಎಂ., ಅನ್ವರ್ ಟೀನವಾಲೆ, ಲಕ್ಷ್ಮಣ ಹುಲಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಾಕ್ಷ್ಯನಾಶ ಭೀತಿಯಿಂದ ಎಫ್‌ಐಆರ್‌ ಅಪ್‌ಲೋಡ್‌ ತಡ: ಲೋಕಾಯುಕ್ತ 

ಕಾರ್ಯಾಂಗ ಸಮರ್ಥವಾಗಿ ಕೆಲಸ ಮಾಡಿದರೆ ಉತ್ತಮ ಸಮಾಜ ಸಾಧ್ಯ: ಶ್ರೀನಾಥ
ಆನೇಕಲ್‌: ಸಂವಿಧಾನದ ಕಾರ್ಯಾಂಗ ಸಮರ್ಪಕವಾಗಿ ಕೆಲಸ ಮಾಡಿದಲ್ಲಿ ನ್ಯಾಯಾಂಗ ಹಾಗೂ ಶಾಸಕಾಂಗಕ್ಕೆ ಕೆಲಸದ ಒತ್ತಡ ಕಡಿಮೆಯಾಗಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಾಲ್ಕನೆಯ ಸ್ಥಂಬವಾದ ಪತ್ರಿಕಾ ರಂಗವಂತೂ ಎಲ್ಲೆಡೆ ನಿರ್ಭೀತಿಯಿಂದ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದು ಲೋಕಾಯುಕ್ತ ಎಸ್ಪಿ ಶ್ರೀನಾಥ ಜೋಶಿ ತಿಳಿಸಿದರು.

ಅವರು ಆನೇಕಲ್‌ನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಅಹವಾಲು, ದೂರು ಸ್ವೀಕಾರ, ಕುಂದು-ಕೊರತೆ ಸಭೆಯ ನಂತರ ಮಾತನಾಡಿದರು. ಸಭೆಯಲ್ಲಿ ಸಾರ್ವಜನಿಕರು 60 ಮನವಿಗಳನ್ನು ನೀಡಿದರು. 30 ಪ್ರಕರಣವನ್ನು ದಾಖಲಿಸಿಕೊಂಡ ಲೋಕಾಯುಕ್ತರು ಸಾಧಾರಣ ಸಮಸ್ಯೆಗಳಿಗೆ ತ್ವರಿತ ಹಾಗೂ ಶಾಶ್ವತ ಪರಿಹಾರ ನೀಡಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಗೆ ಬಾರದೇ ಇದ್ದ ಉಪನೋಂದಣಾಧಿಕಾರಿ, ಅರಣ್ಯಾಧಿಕಾರಿ, ಅಬಕಾರಿ ಅಧಿಕಾರಿ ಹಾಗೂ ಬೆಸ್ಕಾಂ ಆಧಿಕಾರಿಗಳಿಗೆ ನೋಟಿಸ್‌ ನೀಡಿದರು.

ಕುಂದು ಕೊರತೆ ಸಭೆಯಲ್ಲಿ ತಹಸೀಲ್ದಾರ್‌ ಶಿವಪ್ಪ ಎಚ್‌.ಲಮಾಣಿ, ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮೇನಾರಾಯಣಸ್ವಾಮಿ, ಲೋಕಾಯುಕ್ತ ಡಿವೈಎಸ್ಪಿಗಳಾದ ರೇಣುಕಾ ಪ್ರಸಾದ್‌, ವೆಂಕಟೇಶ್‌, ಇನ್‌ಸ್ಪೆಕ್ಟರ್‌ಗಳಾದ ಶ್ರೀನಿವಾಸ್‌, ಮಹೇಶ್‌ಗೌಡ, ಕೃಷ್ಣಮೂರ್ತಿ, ಶಿರಸ್ತೇದಾರ್‌ಗಳಾದ ಚಂದ್ರಶೇಖರ್‌, ದಿನಕರ್‌, ಚೇತನ್‌, ಹೆಬ್ಬಗೋಡಿ ಕಮಿಷನರ್‌ ನರಸಿಂಹಮೂರ್ತಿ, ಕೃಷಿ ಇಲಾಖೆಯ ಧನಂಜಯ, ತೋಟಗಾರಿಕೆಯ ಕೇಶವಮೂರ್ತಿ, ತಾಲೂಕು ವೈದ್ಯಾಧಿಕಾರಿ ರವಿ ಇದ್ದರು.

Follow Us:
Download App:
  • android
  • ios