Asianet Suvarna News Asianet Suvarna News

Mandya : ಚೀಟಿ ಅವ್ಯವಹಾರ : ಶಿಕ್ಷಕನ ಪತ್ನಿ ದಾಕ್ಷಾಯಣಿ ವಿರುದ್ದ ದೂರು ದಾಖಲು

ಶಿಕ್ಷಕ ಶಂಭುಲಿಂಗ ಎಂಬವರು ಚೀಟಿ ವ್ಯವಹಾರ ಮಾಡಿ 250 ಜನರಿಗೆ ಸುಮಾರು 15 ಕೋಟಿ ವಂಚನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಪತ್ನಿ ದಾಕ್ಷಾಯಣಿ ನಾಪತ್ತೆಯಾಗಿದ್ದು, ವಂಚನೆಗೆ ಒಳಗಾದ ಕುಟುಂಬಗಳ ಪೈಕಿ ಐವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Complaint Against Teacher wife in Mandya snr
Author
First Published Dec 3, 2022, 5:36 AM IST

 ನಂಜನಗೂಡು (ಡಿ.03): ಶಿಕ್ಷಕ ಶಂಭುಲಿಂಗ ಎಂಬವರು ಚೀಟಿ ವ್ಯವಹಾರ ಮಾಡಿ 250 ಜನರಿಗೆ ಸುಮಾರು 15 ಕೋಟಿ ವಂಚನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಪತ್ನಿ ದಾಕ್ಷಾಯಣಿ ನಾಪತ್ತೆಯಾಗಿದ್ದು, ವಂಚನೆಗೆ ಒಳಗಾದ ಕುಟುಂಬಗಳ ಪೈಕಿ ಐವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಟ್ಟಣದ ರಾಮಸ್ವಾಮಿ ಲೇಔಟ್‌ ನಿವಾಸಿ ಶಿಕ್ಷಕ (Teacher )  ಶಂಭುಲಿಂಗ ಸುಮಾರು 250ಕ್ಕೂ ಹೆಚ್ಚು ಜನರಿಂದ ಚೀಟಿ ವ್ಯವಹಾರ ಮಾಡಲು ಹಣ (Money)  ಹೂಡಿಕೆ ಮಾಡಿಸಿಕೊಂಡು ನ. 3 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ದಿಗಿಲು ಬಡಿದಂತಾಗಿ ಚೀಟಿ ಹಣ ಹಾಕಿದವರು ಪೊಲೀಸ್‌ ಮೊರೆ ಹೋದರು. ಆಗ ನ್ಯಾಯಸಮ್ಮತವಾಗಿ ಯಾರಿಗೆ ಹಣ ನೀಡಬೇಕು ಎಂಬುದನ್ನು ಪರಿಶೀಲಿಸಿ ಹಿಂದಿರುಗಿಸುವುದಾಗಿ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದ ಮೃತ ಶಂಭುಲಿಂಗರ ಪತ್ನಿ ದಾಕ್ಷಾಯಿಣಿ ಇದೀಗ ನಾಪತ್ತೆಯಾಗಿದ್ದು, ಸುಮಾರು 15 ಕೋಟಿ ಹಣ ಕಳೆದುಕೊಂಡಿರುವ 250ಕ್ಕೂ ಹೆಚ್ಚು ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿವೆ ಎಂದು ಸಂತ್ರಸ್ತರಾದ ಶಿವಸ್ವಾಮಿ, ಗೌರವಾಂಬಿಕ, ಮಹದೇವಸ್ವಾಮಿ, ವೀರೇಂದ್ರ ಪಾಟೀಲ…, ಶಾಂತ, ನಾಗೇಂದ್ರ ಸೇರಿದಂತೆ ಹಲವರು ಸುದ್ದಿಗೋಷ್ಠಿ ನಡೆಸಿ ಅಲವತ್ತುಕೊಂಡಿದ್ದಾರೆ.

ಏನಿದು ಪ್ರಕರಣ- ಶಿಕ್ಷಕ ಶಂಭುಲಿಅಗ ತನ್ನ ಪತ್ನಿ ದಾಕ್ಷಾಯಿಣಿ ಹೆಸರಿನಲ್ಲಿ ಪರವಾನಗಿ ಪಡೆದು ಚೀಟಿ ವ್ಯವಹಾರ ನಡೆಸುತ್ತಿದ್ದರು. ಎಲ್ಲರೊಂದಿಗೂ ನಂಬಿಕಸ್ಥರಾಗಿದ್ದ ಇವರು ಬಹುತೇಕ ಶಿಕ್ಷಕರು, ಸರ್ಕಾರಿ ನೌಕರರು, ವ್ಯಾಪಾರಿಗಳಿಂದ 5 ಲಕ್ಷ ರು. ಗಳಿಗೆ ಚೀಟಿ ಹಾಕಿಸಿಕೊಂಡಿಕೊಂಡಿದ್ದಾರೆ. ಹಲವರಿಗೆ ಚೀಟಿ ಮುಗಿದರೂ ಹಣ ಹಿಂದುರಿಗಿಸದೇ ಸಬೂಬು ಹೇಳಿಕೊಂಡು ಕಾಲ ದೂಡಿದ್ದಾರೆ. ಎರಡು ತಿಂಗಳ ಹಿಂದೆ ಇವರ ಮನೆಯಲ್ಲಿ ಹಾಡಹಗಲೇ ದರೋಡೆ ನಡೆದಿತ್ತು. ಬಳಿಕ ಪ್ರಕರಣ ತನಿಖೆಯಲ್ಲಿರುವಾಗಲೇ ಶಂಭುಲಿಂಗ ಆತ್ಮಹತ್ಯೆಗೆ ಶರಣಾಗಿದ್ದರು.

ನಂತರ ಇವರಿಂದ ಹಣ ಬರಬೇಕಾಗಿದ್ದ ನೂರಾರು ಜನರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಬಳಿಕ ಮೂರ್ನಾಲ್ಕು ಬಾರಿ ಸಿಪಿಐ ಲಕ್ಷ್ಮಿಕಾಂತ ತಳವಾರ್‌ ಸಮಕ್ಷಮದಲ್ಲಿ ಮಾತುಕತೆಯೂ ನಡೆದಿತ್ತು. ಮೃತರ ವೈಕುಂಠ ಆರಾಧನೆ ಮುಗಿದ ಬಳಿಕ ಪರಿಶೀಲಿಸಿ ಹಣ ಹಿಂತಿರುಗಿಸುವುದಾಗಿ ಮೃತರ ಪತ್ನಿ ದಾಕ್ಷಾಯಿಣಿ ಮುಚ್ಚಳಿಕೆ ಬರೆದುಕೊಟ್ಟು ಇದೀಗ ಕಾಣೆಯಾಗಿರುವುದು ಹಣ ಬರಬೇಕಿದ್ದ 250ಕ್ಕೂ ಹೆಚ್ಚು ಜನರು ಚಿಂತಾಕ್ರಾಂತರಾಗಿದ್ದಾರೆ. ಸುಮಾರು 15 ಕೋಟಿ ರು.ಗಳನ್ನು ವಂಚಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡಿರುವವರು ದಾಖಲೆಗಳನ್ನು ಇಟ್ಟುಕೊಂಡಿರುವ ಮಹದೇವಸ್ವಾಮಿ, ಕಾವ್ಯಶ್ರೀ ಎಂಬುವರು ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ನೇರವಾಗಿ ಹಣದ ವಹಿವಾಟು ಮಾಡಿರುವ ಹಲವರು ದೂರು ದಾಖಲಿಸಲು ಸೂಕ್ತ ಪುರಾವೆಗಳಿಲ್ಲದೇ ಅತಂತ್ರರಾಗಿದ್ದಾರೆ.

ಇನ್ನು ಮೃತ ಶಂಭುಲಿಂಗ, ಅವರ ಪತ್ನಿ ದಾಕ್ಷಾಯಿಣಿ ನಮ್ಮ ಚೀಟಿ ಹಣದಲ್ಲಿ ಅವರ ಸಂಬಂಧಿಕರ ಹೆಸರಿನಲ್ಲಿ ಕೋಟ್ಯಾಂತರ ರು. ಆಸ್ತಿ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಪೊಲೀಸರು ತನಿಖೆ ನಡೆಸಿ ವಂಚನೆ ಮಾಡಿದ ಹಣದಲ್ಲಿ ಮಾಡಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಎಲ್ಲರಿಗೂ ಬರಬೇಕಾದ ಬಾಕಿ ಹಣವನ್ನು ಕೊಡಿಸುವಂತೆ ಫಲಾನುಭವಿಗಳು ಕೋರಿಕೊಂಡಿದ್ದಾರೆ.

ಪ್ರಭಾರ ಭತ್ಯೆ 

ಬೆಂಗಳೂರು(ಡಿ.02):  ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಮಂಜೂರಾದ ಮುಖ್ಯಶಿಕ್ಷಕ ಹುದ್ದೆಗಳಲ್ಲಿ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡಲು ಒಪ್ಪಿಗೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಂತನೆ ನಡೆಸಿದೆ.

ಮುಖ್ಯ ಶಿಕ್ಷಕ ಹುದ್ದೆಯ ಪ್ರಭಾರ ಜವಾಬ್ದಾರಿ ಹೊತ್ತಿರುವ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡಲು ಶಿಕ್ಷಕರ ಸಂಘ ಮಾಡಿರುವ ಮನವಿಯನ್ನು ಇಲಾಖಾ ಸಚಿವರಾದ ಬಿ.ಸಿ.ನಾಗೇಶ್‌ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

13,000 ಶಿಕ್ಷಕರ ನೇಮಕ ಪಟ್ಟಿಗೆ ಹೈಕೋರ್ಟ್‌ ತಡೆ

ಪ್ರಭಾರ ಭತ್ಯೆ ಏಕೆ?:

ಸರ್ಕಾರ ಈಗಾಗಲೇ 60ಕ್ಕಿಂತ ಹೆಚ್ಚು ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದು ಮುಖ್ಯ ಶಿಕ್ಷಕ ಹುದ್ದೆ ಮತ್ತು 250ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಓರ್ವ ಹಿರಿಯ ಮುಖ್ಯ ಶಿಕ್ಷಕ ಹುದ್ದೆ ಮಂಜೂರು ಮಾಡಿದೆ. ಆ ಪ್ರಕಾರ 3396 ಹಿರಿಯ ಮುಖ್ಯ ಶಿಕ್ಷಕರು ಮತ್ತು 13,096 ಮುಖ್ಯ ಶಿಕ್ಷಕ ಹುದ್ದೆಗಳನ್ನು ಕಳೆದ ಆಗಸ್ಟ್‌ನಲ್ಲಿ ಮಂಜೂರು ಮಾಡಿದೆ. ಈ ಪೈಕಿ ಖಾಲಿ ಇರುವ ಹುದ್ದೆಗಳಿಗೆ ಆಯಾ ಶಾಲೆಯಲ್ಲೇ ಇತರೆ ಸಹ ಶಿಕ್ಷಕರನ್ನು ಪ್ರಭಾರ ಮುಖ್ಯ ಶಿಕ್ಷಕರಾಗಿ ನೇಮಿಸಲಾಗಿದೆ. ಅಂತಹ ಶಿಕ್ಷಕರು ತಮ್ಮ ಜವಾಬ್ದಾರಿಯ ಜತೆಗೆ ಮುಖ್ಯ ಶಿಕ್ಷಕರ ಕೆಲಸಕಾರ್ಯಗಳನ್ನೂ ಹೆಚ್ಚುವರಿಯಾಗಿ ನಿರ್ವಹಿಸಬೇಕಿರುವ ಕಾರಣ ಅವರಿಗೆ ಪ್ರಭಾರ ಭತ್ಯೆ ನೀಡಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಇಲಾಖೆಗೆ ಬೇಡಿಕೆ ಇಟ್ಟಿದೆ.

Follow Us:
Download App:
  • android
  • ios