ಕಮಿಷನರ್ ಮನವಿಗೆ ಮಾಸ್ ರಿಪ್ಲೈ: ಮಂಗಳೂರು ಗಲಭೆಯ 1000ಕ್ಕೂ ಹೆಚ್ಚು ವಿಡಿಯೋ ಲಭ್ಯ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ವಿಡಿಯೋ ಇದ್ದರೆ ಕಳುಹಿಸುವಂತೆ ಮಂಗಳೂರಿನ ಕಮಿಷನರ್ ಐಪಿಎಸ್ ಹರ್ಷ ಟ್ವಿಟರ್ ಮೂಲಕ ಮನವಿ ಮಾಡಿದ್ದರು. ಕಮಿಷನರ್ ಮನವಿಗೆ ಮಾಸ್ ರಿಪ್ಲೈ ಬಂದಿದೆ.
ಮಂಗಳುರು(ಡಿ.24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ವಿಡಿಯೋ ಇದ್ದರೆ ಕಳುಹಿಸುವಂತೆ ಮಂಗಳೂರಿನ ಕಮಿಷನರ್ ಐಪಿಎಸ್ ಹರ್ಷ ಟ್ವಿಟರ್ ಮೂಲಕ ಮನವಿ ಮಾಡಿದ್ದರು. ಕಮಿಷನರ್ ಮನವಿಗೆ ಮಾಸ್ ರಿಪ್ಲೈ ಬಂದಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಮಂಗಳೂರು ಗಲಭೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಂಗಳೂರು ಗಲಭೆ ಸಂಬಂಧ ಸುವರ್ಣ ನ್ಯೂಸ್‌ಗೆ ಮಂಗಳೂರು ಕಮಿಷನರ್ ಹರ್ಷಾ ಮಾಹಿತಿ ನೀಡಿದ್ದಾರೆ. ಸೋಮವಾರವಷ್ಟೇ ಹರ್ಷಾ ಅವರು ಟ್ವೀಟ್ ಮಾಡಿ ಮಂಗಳೂರು ಗಲಭೆಗೆ ಸಂಬಂಧಿಸಿದ ವಿಡಿಯೋಗಳಿದ್ದರೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದ್ದರು.
ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಮನವಿ ಮಾಡಿದ ಬಳಿಕ ಸಾಕಷ್ಟು ವೀಡಿಯೋ ಬಂದಿದೆ. ನಾನು ಇಡೀ ಮಂಗಳೂರು ನಗರದ ನಾಗರಿಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸದ್ಯ ಪೊಲೀಸರು ಸಾವಿರಕ್ಕೂ ಅಧಿಕ ವೀಡಿಯೋಗಳನ್ನು ಸಂಗ್ರಹಿಸಿದ್ದೇವೆ. ಇದಕ್ಕಾಗಿಯೇ ಹಲವಾರು ಟೆಕ್ನಿಕಲ್ ಟೀಮ್ ನಮ್ಮಲ್ಲಿ ಕೆಲಸ ಮಾಡುತ್ತಿದೆ. ಬೆಂಗಳೂರು ಸೇರಿದಂತೆ ಜಿಲ್ಲೆಯಲ್ಲೂ ಸೈಬರ್ ಟೀಮ್ ಇದಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಮಂಗಳೂರು ಗಲಭೆ: ವಿಡಿಯೋ ಇದ್ರೆ ಕಳಿಸಿ ಎಂದ ಕಮಿಷನರ್ ಹರ್ಷ
ಈಗ ಬಂದಿರೋ ಅದೆಷ್ಟೋ ವಿಡಿಯೋಗಳು ಇನ್ನೂ ಕೂಡ ಡೌನ್ ಲೋಡ್ ಆಗಿಲ್ಲ. ಹಲವರು ತಮ್ಮ ಸಿಸಿಟಿವಿಗಳ ಡಿವಿಆರ್‌ಗಳನ್ನೇ ನಮಗೆ ತಂದು ಕೊಟ್ಟಿದ್ದಾರೆ. ನಾವು ಕೆಲವು ವಿಡಿಯೋಗಳನ್ನ ಆರೋಪಿಗಳನ್ನ ಗುರುತಿಸೋ ಉದ್ದೇಶದಿಂದ ಫೇಸ್‌ಬುಕ್‌ಗೆ ಹಾಕಿದ್ದೇವೆ ಎಂದಿದ್ದಾರೆ.
ಮಂಗಳೂರು ಗಲಭೆ: 148 ಮಂದಿ ವಿರುದ್ಧ FIR