ಮಂಗಳೂರು(ಡಿ.23): ಮಂಗಳೂರು ಗೋಲಿಬಾರ್ ಗಲಭೆಗೆ ಸಂಬಂಧಿಸಿದ ವಿಡಿಯೋ ಇದ್ದರೆ ಕಳಿಸಿಕೊಡುವಂತೆ ಕಮಿಷನರ್ ಐಪಿಎಸ್ ಹರ್ಷ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಹರ್ಷ ಅವರು ವಿಡಿಯೋ ಇದ್ದಲ್ಲಿ ವಾಟ್ಸಾಪ್ ಮಾಡುವಂತೆ ಕೇಳಿದ್ದಾರೆ.

ಮಂಗಳೂರು ನಗರದ ನಾಗರಿಕರಿಗೆ ಕಮಿಷನರ್ ಡಾ.ಪಿ.ಎಸ್.ಹರ್ಷಾ ಮನವಿ ಮಾಡಿದ್ದು, ಡಿ.19ರ ಹಿಂಸಾಚಾರದ ವಿಡಿಯೋಗಳಿದ್ದರೆ ರವಾನಿಸಲು ಮನವಿ ಮಾಡಿದ್ದಾರೆ. 9480802327 ವಾಟ್ಸಪ್ ಸಂಖ್ಯೆಗೆ ವಿಡಿಯೋ ರವಾನಿಸಲು ಮನವಿ ಮಾಡಿದ್ದು, ಅಥವಾ‌ mangalurunorthmgc@gmail.com ಕಳುಹಿಸಲು ಸೂಚನೆ ನೀಡಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ಅಥವಾ ಚಿತ್ರೀಕರಿಸಿದ ವಿಡಿಯೋಗಳಿದ್ದರೆ ಕಳುಹಿಸಲು ಕಮಿಷನರ್ ಮನವಿ ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆ ತೀವ್ರ ಸ್ವರೂಪ ಪಡೆದಿತ್ತು. ಅಂದು ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು. ಅನಂತರದಲ್ಲಿ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ ಮಾಡಿ 48 ಗಂಟೆಗಳ ಕಾಲ ಇಂಟರ್‌ನೆಟ್‌ ಸೇವೆಯನ್ನೂ ತೆಗೆಯಲಾಗಿತ್ತು.

ಮಂಗಳೂರು: 'ಸತ್ತವರ ಮನೆಗೆ ಭೇಟಿ ನೀಡದ ಉಸ್ತುವಾರಿ ಸಚಿವ, ಶಾಸಕ'..!

ಡಿಸೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ