Mangaluru  

(Search results - 394)
 • Mangaluru
  Video Icon

  Dakshina Kannada17, Oct 2019, 10:36 PM IST

  ಸಿಕ್ಕಾಪಟ್ಟೆ ಜಾಮ್, ಕಾರಿನಿಂದಿಳಿದು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಖಾದರ್

  ಮಂಗಳೂರು[ಅ. 17]  ಟ್ರಾಫಿಕ್ ಸಮಸ್ಯೆ ಯಾವ ಮಹಾನಗರದಲ್ಲಿ ಇಲ್ಲ ಬಿಡಿ. ಮಂಗಳೂರಿನಲ್ಲಿಯೂ ಧಾರಾಕಾರ ಮಳೆ ಸುರಿದಿದ್ದು ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಕಾರಿನಿಂದ ಇಳಿದ ಶಾಸಕ ಯು.ಟಿ.ಖಾದರ್ ತಾವೇ ಮುಂದಾಗಿ ಟ್ರಾಫಿಕ್ ಕ್ಲೀಯರ್ ಮಾಡಿದರು.

  ಟ್ರಾಫಿಕ್ ನಲ್ಲಿ ಸಿಲುಕಿದ ಅಂಬ್ಯುಲೆನ್ಸ್ ಗೆ ಯುಟಿ ಖಾದರ್ ದಾರಿ ಮಾಡಿದರು. ಮಂಗಳೂರಿನ ಪಂಪ್ ವೆಲ್ ಬಳಿ ನಡೆದ  ಘಟನೆ ನಿಜಕ್ಕೂ ಸಾಮಾನ್ಯ ನಾಗರಿಕರಿಂದ ಹಿಡಿದು  ಎಲ್ಲ ರಾಜಕಾರಣಿಗಳಿಗೂ ಮಾದರಿ.

 • Kadri Gopalnath

  Dakshina Kannada14, Oct 2019, 9:55 PM IST

  ಸರ್ಕಾರಿ ಗೌರವಗಳೊಂದಿಗೆ ಜೋಗಿ ಸಂಪ್ರದಾಯದಂತೆ ಸ್ಯಾಕ್ಸೋಫೋನ್ ಮಾಂತ್ರಿಕನ ಅಂತ್ಯಕ್ರಿಯೆ

  ವಿದೇಶಿ ವಾದ್ಯ ಪರಿಕರ ಸ್ಯಾಕ್ಸೋಫೋನ್‌ಗೆ ಕರ್ನಾಟಕ ಸಂಗೀತವನ್ನು ಅಳವಡಿಸಿ ಯಶಸ್ವಿಯಾದ ಏಕೈಕ ಕಲಾಸಾಧಕ, ಪದ್ಮಶ್ರೀ, ಕಲೈಮಾಮಣಿ ಡಾ.ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಅವರ ಹುಟ್ಟೂರು ಬಂಟ್ವಾಳ ತಾಲೂಕಿನ ಸಜಿಪದ ಮಿತ್ತಮಜಲಿನ ಮಿತ್ತಕೆರೆ ಎಂಬಲ್ಲಿ ವಿಧಿಪೂರ್ವಕವಾಗಿ ನೆರವೇರಿತು. 

 • C.V.Shanmugam

  Dakshina Kannada13, Oct 2019, 10:35 PM IST

  ಮಂಗಳೂರು: ಆತ್ಮಹತ್ಯೆಗೆ ಶರಣಾದ ಮೂಡುಬಿದರೆ ಕಾಲೇಜಿನ ಪ್ರೇಮಿಗಳು

  ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇರಳ ಮೂಲದ ಗ್ರೀಷ್ಮಾ(21) ಹಾಗೂ ವಿಷ್ಣು(22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರ ವಿರೋಧಕ್ಕೆ ಹೆದರಿ ಮಂಗಳೂರಿನಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • gopi

  News12, Oct 2019, 10:27 AM IST

  ಪಾಶ್ಚಿಮಾತ್ಯ ವಾದ್ಯದಲ್ಲಿ ಪೂರ್ವ- ಪಶ್ಚಿಮ ಬೆಸೆದ ನಾದ ಗಾರುಡಿಗ

  ಇಂದು ಸ್ಯಾಕ್ಸೋಫೋನ್‌ಗೆ ಶಾಸ್ತ್ರೀಯ ಸಂಗೀತದ ವೇದಿಕೆಯಲ್ಲಿ ಒಂದು ಗೌರವಾನ್ವಿತ ಸ್ಥಾನ ದೊರಕಿದ್ದರೆ ಗೋಪಾಲನಾಥ್ ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಕರ್ಣಾಟಕ ಶಾಸ್ತ್ರೀಯ ಸಂಗೀತದ ನಿಟ್ಟಿನಲ್ಲಿ ಸ್ಯಾಕ್ಸೋಫೋನ್‌ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್.

 • Dakshina Kannada11, Oct 2019, 10:00 PM IST

  ಮಂಗಳೂರು: ನೈತಿಕ ಪೊಲೀಸ್‌ಗಿರಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿದ ಕೋರ್ಟ್

  2016ರ ಎಪ್ರಿಲ್ ನಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣದ ವಿಚಾರಣೆ ಅಂತ್ಯವಾಗಿದ್ದು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.

 • Bantwal Journalist
  Video Icon

  Karnataka Districts3, Oct 2019, 9:00 PM IST

  ಬಂಟ್ವಾಳ:  ಸುವರ್ಣ ನ್ಯೂಸ್ ಹೆಸರಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟ ನಕಲಿ ಪತ್ರಕರ್ತ

  ಸುವರ್ಣ ನ್ಯೂಸ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ  ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. 50 ಸಾವಿರ ರೂ. ನೀಡಲು ಬೇಡಿಕೆ ಇಟ್ಟಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಬಂಟ್ವಾಳದ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯಿಂದ ದೂರು ದಾಖಲಾಗಿದ್ದು ಆರೋಪಿ ಅಶೋಕ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 • Udupi
  Video Icon

  Karnataka Districts2, Oct 2019, 5:32 PM IST

  ಉಡುಪಿ: ಬಟ್ಟೆ ಖರೀದಿಗೆ ಅಂಗಡಿಗೆ ಬಂದ ಮಾಲಕಿಯ ತಬ್ಕೊಂಡ!

  ಉಡುಪಿ( ಅ. 02)  ಬಟ್ಟೆ ಖರೀದಿಗೆಂದು ಅಂಗಡಿಗೆ ಬಂದಿದ್ದ ಯುವಕ ಅಂಗಡಿ ಮಾಲಕಿಯನ್ನೇ ತಬ್ಬಿಕೊಳ್ಳಲು ಹೋಗಿ ಚಪ್ಪಲಿ ಏಟು ತಿಂದಿದ್ದಾನೆ. ಇಲ್ಲಿನ ಮಲ್ಪೆ ಕಲ್ಮಾಡಿಯಲ್ಲಿರುವ ಕೊರಗಜ್ಜನ‌ ಸ್ಥಾನದ ಸಮೀಪವಿರುವ ಬಟ್ಟೆ ಅಂಗಡಿಗೆ‌ ಗ್ರಾಹಕನಾಗಿ‌ ಬಂದಿದ್ದ ಯುವಕ ಬಟ್ಟೆ ಖರೀದಿ‌ ನಾಟಕವಾಡುತ್ತಾ ಕೂಡಲೇ ಯುವತಿಯನ್ನ ಎಳೆದು ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕಸಿವಿಸಿಗೊಂಡ ಆಕೆ ಕೂಡಲೇ ಎಚ್ಚೆತ್ತು ಅಲ್ಲೇ ಇದ್ದ ಚಪ್ಪಲಿಯಿಂದ ಆತನಿಗೆ ಹೊಡೆಯಲು ಮುಂದಾಗಿದ್ದಾಳೆ. ತಕ್ಷಣ ಯುವಕ ಕಾಲ್ಕಿತ್ತಿದ್ದಾನೆ ಆದ್ರೂ ಆತನನ್ನ ಹಿಂಬಾಲಿಸಿದ ಯುವತಿ ಸಾರ್ವಜನಿಕರ ಸಹಾಯದಿಂದ ಕಾಮುಕನನ್ನು ಹಿಡಿದು ಧರ್ಮದೇಟು ಕೊಟ್ಟು ಕಳುಹಿಸಿದ್ದಾರೆ. ಯುವಕನ ಈ ಕುಕೃತ್ಯ‌ ಬಟ್ಟೆ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಯಾವುದೆ ಪ್ರಕರಣ ದಾಖಲಾಗಿಲ್ಲ.

 • In Panipat Principle compelled to student to cleaning in school

  Karnataka Districts25, Sep 2019, 10:06 AM IST

  ಸ್ವಚ್ಛ ಭಾರತ್ ದಿವಸ್: ರಾಜ್ಯದಿಂದ 200 ಸಾಧಕರು ಆಯ್ಕೆ

  ಸ್ವಚ್ಛತೆಯ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 
   

 • mng
  Video Icon

  Karnataka Districts23, Sep 2019, 1:28 PM IST

  ವಿಕೋಪಕ್ಕೆ ತಿರುಗಿದ ವಾಟ್ಸಪ್ ಚರ್ಚೆ; ಗುಂಡು ಹಾರಿಸಿದ ಕಾಂಗ್ರೆಸ್ ಯುವ ಮುಖಂಡನಿಗೆ ಹಲ್ಲೆ

  ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಕಳೆದ ರಾತ್ರಿ ಕಾಂಗ್ರೆಸ್ ಯುವಮುಖಂಡ ಫೈರಿಂಗ್ ನಡೆಸಿರುವ ಘಟನೆ ನಡೆದಿದೆ. ವಾಟ್ಸಪ್‌ನಲ್ಲಿ ನಡೆದ ಚರ್ಚೆಯೊಂದು ಮಾರಾಮಾರಿ ಹಂತಕ್ಕೆ ತಲುಪಿದೆ. ಗನ್ ಲೈಸೆನ್ಸ್ ಇದ್ದರೂ ಈ ರೀತಿ ಅಟ್ಟಹಾಸ ಮೆರೆದಿರುವುದು ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದ್ದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ, ಕಾರನ್ನು ಜಖಂಗೊಳಿಸಿದ್ದಾರೆ.   

 • ivan d'souza

  Karnataka Districts22, Sep 2019, 8:58 AM IST

  ರಾಜ್ಯ ಸರ್ಕಾರ ಬದುಕಿದೆಯಾ ಸತ್ತಿದೆಯಾ?

  ರಾಜ್ಯದಲ್ಲಿ ಬಿಜೆಪಿ ಅರ್ಕಾರ ಅಸ್ತಿತ್ವಕ್ಕೆ ಬಂದು 50 ದಿನಗಳಾದವು 35 ಸಾವಿರ ಕೋಟಿ ರು.ಗೂ ಅಧಿಕ ನಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 1500 ಕೋಟಿ ರು., ಅಂದರೆ ಕೇವಲ ಶೇ.4.2ರಷ್ಟು ಮಾತ್ರ. ಜನರಿಗೆ ಪರಿಹಾರ ತಲುಪಿಲ್ಲ. ರಾಜ್ಯ ಸರ್ಕಾರ ಬದುಕಿದೆಯಾ ಸತ್ತಿದೆಯಾ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಪ್ರಶ್ನಿಸಿದ್ದಾರೆ.

 • Pejawarashri

  Karnataka Districts19, Sep 2019, 3:17 PM IST

  ಕಾರ್ಪೊರೇಶನ್‌ ಬ್ಯಾಂಕ್‌ - ಸಿಂಡಿಕೇಟ್‌ ಬ್ಯಾಂಕ್‌ ವಿಲೀನ ತಡೆಗೆ ಪೇಜಾವರ ಶ್ರೀ ಮಧ್ಯಸ್ಥಿಕೆ

  ಕರ್ನಾಟಕ ಮೂಲದ ಕಾರ್ಪೊರೇಶನ್‌ ಬ್ಯಾಂಕ್‌ ಮತ್ತು ಸಿಂಡಿಕೇಟ್‌ ಬ್ಯಾಂಕ್‌ ವಿಲೀನಿಕರಣ ತಡೆಗೆ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ಮಧ್ಯಸ್ಥಿಕೆ ವಹಿಸಿದ್ದಾರೆ. ಈ ಸಂಬಂಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. 

 • ivan d'souza

  Karnataka Districts18, Sep 2019, 2:45 PM IST

  ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಐವನ್‌ ಡಿಸೋಜ

  ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡೆಯಲ್ಲಿ ಸತತವಾಗಿ ಭಾಗವಹಿಸಿ ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ವಿದ್ಯಾರ್ಥಿಗಳಿಗೆ ಗ್ರೇಸ್‌ ಅಂಕಗಳನ್ನು ನೀಡುವ ನಿಯಮವನ್ನು ಜಾರಿಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ ತಿಳಿಸಿದ್ದಾರೆ.
   

 • Karnataka Districts15, Sep 2019, 6:10 PM IST

  ನಕಲಿ ಟಿಕೆಟ್ ಬಳಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದವ ಸಿಕ್ಕಿಬಿದ್ದ

  ನಕಲಿ ಟಿಕೆಟ್ ಬಳಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮನೆಯವರನ್ನು ವಿಮಾನ ಹತ್ತಿಸಲು ಬಂದಿದ್ದೆ ಎಂದು ವ್ಯಕ್ತಿ ಹೇಳಿದ್ದು ಬಜಪೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 • NEWS9, Sep 2019, 12:13 AM IST

  ಪಾಕಿಸ್ತಾನಕ್ಕೆ ಹೋಗಿ ಹೋರಾಟ ಮಾಡಿ, ಸೆಂಥಿಲ್‌ಗೆ ಹೆಗಡೆ ಟಾಂಗ್!

  ವೈಯಕ್ತಿಕ ಕಾರಣಕ್ಕೆ ದಕ್ಷಿಣ ಕನ್ನಡ ಡಿಸಿಯಾಗಿದ್ದ ಸಸಿಕಾಂತ್ ಸೆಂಥಿಲ್  ರಾಜೀನಾಮೆ ನೀಡಿದ್ದಾರೆ ಎಂದು ಒಮದು ಕಡೆ ಹೇಳಲಾಗಿದ್ದರೆ ಇನ್ನೊಂದು ಕಡೆ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿಯೇ ಸೆಂಥಿಲ್  ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸೋಶಿಯಲ್ ಮೀಡಿಯಾ ಮೂಲಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 • Jogi

  Karnataka Districts8, Sep 2019, 11:33 PM IST

  ಮಂಗಳೂರಿನಲ್ಲಿ ಸಾಹಿತ್ಯ-ಸಲ್ಲಾಪ..ಯುವಕರ ತಲ್ಲಣ ಬಿಚ್ಚಿಡುವ ಜೋಗಿ ‘ಎಲ್’

  ವಿಮರ್ಶಕ, ಸಾಹಿತಿ ಜೋಗಿ ಅವರ ಕಾದಂಬರಿ ಎಲ್ ಬಗ್ಗೆ ವಿಚಾರ ವಿಮರ್ಶೆಗಳು ನಡೆದವು. ಕಾದಂಬರಿ ಏನು ಹೇಳುತ್ತದೆ ಎಂಬ ಒಳ-ಹೊರಗನ್ನು  ವಿಮರ್ಶಕ ಸುಬ್ರಾಯ ಚೊಕ್ಕಾಡಿ ಕಟ್ಟಿಕೊಟ್ಟರು.